ಭಾರತೀಯ ಮಾರುಕಟ್ಟೆಯಲ್ಲಿ (Indian Market) ಹಲವಾರು ಸ್ಮಾರ್ಟ್ಫೋನ್ಗಳ ಕಂಪೆನಿಗಳು ಮೊಬೈಲ್ಗಳನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಂತೂ ಸ್ಮಾರ್ಟ್ಫೋನ್ಗಳಿಗೆ ಎಲ್ಲಿಲ್ಲದ ಬೇಡಿಕೆ. ಕಂಪೆನಿಗಳು ಸಹ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಸ್ಮಾರ್ಟ್ಫೋನ್ಗಳೆಂದಾಗ (Smartphones) ನಮಗೆ ಹಲವಾರು ಕಂಪೆನಿಗಳು ನೆನಪಾಗುತ್ತವೆ. ಅದರಲ್ಲಿ ಮೊಟೊರೊಲಾ ಕಂಪೆನಿ ಸಹ ಒಂದು. ಮೊಟೊರೊಲಾ ಕಂಪೆನಿ (Motorola Company) ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಒಂದಾಗಿದ್ದು, ಮಾರುಕಟ್ಟೆಯಲ್ಲಿ ಬಹಳಷ್ಟು ಗ್ರಾಹಕರನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಈ ಕಂಪೆನಿ ಆಕರ್ಷಿಸಿದೆ.
ಮೊಟೊರೊಲಾ ಕಂಪೆನಿ ಇದೀಗ ತನ್ನ ಬ್ರಾಂಡ್ನ ಅಡಿಯಲ್ಲಿ ಮೊಟೊ ಇ13 ಎಂಬ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿ ನಿಂತಿದೆ. ಈ ಕಂಪೆನಿಯಿಂದ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಈ ವರ್ಷದ ಮೊದಲ ಫೋನ್ ಇದಾಗಿದೆ. ಹಾಗಿದ್ರೆ ಈ ಸ್ಮಾರ್ಟ್ಫೋನ್ನ ಫೀಚರ್ಸ್, ಬೆಲೆ ಹೇಗಿದೆ ಎಂಬುದನ್ನು ನೋಡ್ಬೇಕಾದ್ರೆ ಈ ಲೇಖನವನ್ನು ಓದಿ.
ಮೊಟೊ ಇ13 ಸ್ಮಾರ್ಟ್‌ಫೋನ್ ಫೀಚರ್ಸ್ ನಿರೀಕ್ಷೆ
ಮೊಟೊ ಇ13 ಸ್ಮಾರ್ಟ್‌ಫೋನ್ ಮುಖ್ಯವಾಗಿ 6.5 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದರ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ ಎಂದು ಕಂಪೆನಿ ಹೇಳಿದೆ. ಇನ್ನು ಈ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್ ಬೆಂಬಲಿಸುವ ಸಾಧ್ಯತೆಯಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿರಬಹುದೆಂಬ ನಿರೀಕ್ಷೆಯಿದೆ.
ಮೊಟೊ ಇ13 ಸ್ಮಾರ್ಟ್‌ಫೋನ್ ಕ್ಯಾಮೆರಾ ಫೀಚರ್ಸ್ ಹೇಗಿದೆ?
ಮೊಟೊ ಇ13 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎಂದು ವರದಿಯಾಗಿದೆ. ಈ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಬರಲಿದೆ ಎಂದು ಅಂದಾಜಿಸಿದ್ದಾರೆ. ಈ ಕ್ಯಾಮೆರಾದ ಜೊತೆಗೆ ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಶ್ ಲೈಟ್ ಅನ್ನು ಅಳವಡಿಸಿರುತ್ತಾರೆ. ಇನ್ನು ಈ ಸ್ಮಾರ್ಟ್ಫೋನ್ನ ಮುಂಭಾಗದಲ್ಲಿ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಇರುತ್ತದೆ.
ಪ್ರೊಸೆಸರ್ ಸಾಮರ್ಥ್ಯ ಹೇಗಿದೆ?
ಮೊಟೊ ಇ13 ಸ್ಮಾರ್ಟ್‌ಫೋನ್ ಯುನಿಸಾಕ್ T606 ಪ್ರೊಸೆಸರ್ ವೇಗವನ್ನು ಹೊಂದಿರಹುದು. ಇದು ಈ ಸ್ಮಾರ್ಟ್ಫೋನ್ನ ಎಂಟ್ರಿ ಲೆವೆಲ್ ಪ್ರೊಸೆಸರ್ ಆಗಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಆಂಡ್ರಾಯ್ಡ್ 3 ಗೋ ಎಡಿಷನ್ ಬೆಂಬಲದೊಂದಿಗೆ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ. ಹಾಗೆಯೇ 2 ಜಿಬಿ ರ್‍ಯಾಮ್ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ ಎಂದು ವರದಿಯಾಗಿದೆ. ಇನ್ನು ಈ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಮೆಮೊರಿ ಕಾರ್ಡ್ ಮೂಲಕ 1ಟಿಬಿ ವರೆಗೆ ವಿಸ್ತರಿಸಬಹುದಾಗಿದೆ.
ಬ್ಯಾಟರಿ ಫೀಚರ್ಸ್
ಮೊಟೊ ಇ13 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಇನ್ನು ಈ ಬ್ಯಾಟರಿಯ ವೇಗದ ಚಾರ್ಜಿಂಗ್ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪೆನಿ ಬಹಿರಂಗ ಪಡಿಸಿಲ್ಲ.
ಇತರೆ ಫೀಚರ್ಸ್
ಇನ್ನುಈ ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಯುಎಸ್‌ಬಿ ಸಿ ಪೋರ್ಟ್ ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಏರ್ಟೆಲ್ನ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲ್ಯಾನ್ಸ್ ಇಲ್ಲಿದೆ! ಆಫರ್ಸ್ ಹೇಗಿದೆ?
ಬೆಲೆ ಮತ್ತು ಲಭ್ಯತೆ
ಮೊಟೊ ಇ13 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಇದೇ ಫೆಬ್ರವರಿ 8 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, 10,000 ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ಅಂದಾಜಿಸಿದ್ದಾರೆ. ಇನ್ನು ಈ ಸ್ಮಾರ್ಟ್‌ಫೋನ್ ಪೋಕೋ ಸಿ50, ರಿಯಲ್‌ಮಿ ಸಿ33 ನಂತಹ ಬಜೆಟ್ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ