ಇತ್ತೀಚೆಗೆ ಎಲ್ಲಿ ಹೋದರೂ ಸ್ಮಾರ್ಟ್ಫೋನ್ಗಳದ್ದೇ (Smartphones) ಹಾವಳಿ. ಇದು ಸ್ಮಾರ್ಟ್‌ಫೋನ್ ಯುಗ ಎಂದರೂ ಒಮ್ಮೆ ತಪ್ಪಾಗದು. ಮಾರುಕಟ್ಟೆಗೆ ದಿನ ಕಳೆದಂತೆ ಹೊಸ ರೀತಿಯ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಲೇ ಇರುತ್ತದೆ. ಅದೂ ಕೂಡ ಈ ವರ್ಷವಂತೂ ಬಿಡುಗಡೆಯಾದಂತಹ ಸ್ಮಾರ್ಟ್ಫೋನ್ಗಳಿಕೆ ಲೆಕ್ಕವೇ ಇಲ್ಲ. ತಿಂಗಳಿಗೆ 5 ರಿಂದ 7 ಸ್ಮಾರ್ಟ್ಫೋನ್ಗಳು ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇದೆ. ಈ ಮಧ್ಯೆ ಜನಪ್ರಿಯ ಮೊಬೈಲ್ ತಯಾರಿಕಾ ಕಂಪೆನಿಯಾಗಿರು ಮೊಟೊರೊಲಾ ಕಂಪೆನಿಯ (Motorola Company) ಎರಡು ಸ್ಮಾರ್ಟ್ಫೋನ್ಗಳು ಲಾಂಚ್ ಆಗಿವೆ. ಈ ಎರಡೂ ಮೊಬೈಲ್ಗಳು ವಿಭಿನ್ನ ಮಾದರಿ ವಿನ್ಯಾಸ (Design), ಫೀಚರ್ಸ್ಗಳನ್ನು ಒಳಗೊಂಡು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಮೂಡಿಸಲು ರೆಡಿಯಾಗಿವೆ ಎಂದು ಹೇಳ್ಬಹುದು.
ಮೊಟೊರೊಲಾ ಕಂಪೆನಿಯಿಂದ ಮೊಟೊ ಜಿ53 5ಜಿ ಮತ್ತು ಮೊಟೊ ಜಿ73 5ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ಗಳು ಬೇರೆ ಬೇರೆ ರೀತಿಯ ಫೀಚರ್ಸ್ಗಳನ್ನು ಹೊಂದಿದ್ದು, ಈ ಸ್ಮಾರ್ಟ್ಫೋನ್ಗಳ ಫೀಚರ್ಸ್, ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ.
ಮೊಟೊ ಜಿ73 ಮತ್ತು ಮೊಟೊ ಜಿ53 5ಜಿ ಸ್ಮಾರ್ಟ್‌ಫೋನ್ ಫೀಚರ್ಸ್
ಮೊಟೊ ಜಿ73 5ಜಿ ಸ್ಮಾರ್ಟ್‌ಫೋನ್ ವಿಶೇಷವಾಗಿ 6.5 ಇಂಚಿನ ಫುಲ್ ಹೆಚ್ಡಿ+ ಐಪಿಎಸ್ ಎಲ್ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ನೀಡಲಿದೆ. ಹಾಗೆಯೇ 20:9 ಆಕಾರ ಅನುಪಾತವನ್ನು ಹೊಂದಿರುವ ಈ ಫೋನ್ ಡಿಸ್‌ಪ್ಲೇ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಕಟೌಟ್ ಆಯ್ಕೆ ಪಡೆದಿಕೊಂಡಿದೆ. ಇನ್ನು ಮೊಟೊರೊಲಾ ಕಂಪೆನಿಯ ಮೊಟೊ ಜಿ53 5ಜಿ ಸ್ಮಾರ್ಟ್‌ಫೋನ್ 6.5 ಇಂಚಿನ ಐಪಿಎಸ್ ಎಲ್ಸಿಡಿಇ ಹೆಚ್ಡಿ+ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ನೀಡಲಿದೆ.
ಕ್ಯಾಮೆರಾ ಫೀಚರ್ಸ್
ಮೊಟೊ ಜಿ73 5ಜಿ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ f/1.8 ಸೆನ್ಸಾರ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಅಳವಡಿಸಲಾಗಿದೆ ಹಾಗೂ ಆಟೋಫೋಕಸ್ ಬೆಂಬಲದೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ಇನ್ನು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಸಹ ಇದರಲ್ಲಿದೆ.
ಇನ್ನು ಮೊಟೊ ಜಿ53 5ಜಿ ಫೋನ್‌ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲೂ ಸಹ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಆಯ್ಕೆ ಇದೆ. ಹಾಗೆಯೇ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಮೊಟೊ ಜಿ73 5ಜಿ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 930 ಎಸ್ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಮೊಟೊ ಜಿ53 5ಜಿ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 480+ ಎಸ್ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅದರಂತೆ ಮೊಟೊ ಜಿ73 5ಜಿ ಸ್ಮಾರ್ಟ್‌ಫೋನ್ 8 ಜಿಬಿ ರ್‍ಯಾಮ್ ಮತ್ತು 256 ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಮೊಟೊ ಜಿ53 5ಜಿ ಸ್ಮಾರ್ಟ್‌ಫೋನ್ 4 ಜಿಬಿ ರ್‍ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಿದೆ.
ಬ್ಯಾಟರಿ ಫೀಚರ್ಸ್
ಮೊಟೊ ಜಿ73 5ಜಿ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಹಾಗೆಯೇ ಈ ಬ್ಯಾಟರಿಯು 30W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ಮೊಟೊ ಜಿ53 5ಜಿ ಸ್ಮಾರ್ಟ್‌ಫೋನ್ ಸಹ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಹಾಗೆಯೇ 10W ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಮೊಟೊ ಜಿ73 5ಜಿ ಸ್ಮಾರ್ಟ್‌ಫೋನ್ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ವೇರಿಯಂಟ್ನ ಬೆಲೆ EUR 299 ಅಂದರೆ ಭಾರತದಲ್ಲಿ ಸುಮಾರು 26,500ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಲ್ಯೂಸೆಂಟ್ ವೈಟ್ ಹಾಗೂ ಮಿಡ್‌ನೈಟ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದಾಗಿದೆ.
ಮೊಟೊ ಜಿ53 5ಜಿ ಸ್ಮಾರ್ಟ್‌ಫೋನ್ ಸಹ 4 ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್‌ನ ಆಯ್ಕೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಫೋನ್‌ಗೆ EUR 249 ಅಂದರೆ ಭಾರತದಲ್ಲಿ ಸುಮಾರು 22,100 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಇಂಕ್ ಬ್ಲೂ, ಆರ್ಕ್ಟಿಕ್ ಸಿಲ್ವರ್ ಮತ್ತು ಪೇಲ್ ಪಿಂಕ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ