ಟೆಕ್ನಾಲಜಿ ಕಂಪನಿಗಳು (Technology Company) ಇತ್ತೀಚೆಗೆ ಹಲವಾರು ರೀತಿಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಅದೇ ರೀತಿ ಕಳೆದ ವರ್ಷದ ಬಗ್ಗೆ ಸ್ವಲ್ಪ ಮೆಲುಕು ಹಾಕಲು ಹೋಗುವುದಾದರೆ. 2022ರಲ್ಲಿ ಸಾಕಷ್ಟು ಕಂಪನಿಗಳು ಹೊಸ ಹೊಸ ಡಿವೈಸ್ಗಳನ್ನು ಅನಾವರಣಗೊಳಿಸಿದೆ. ಇದೀಗ ಮೊಟೊರೊಲಾ ಕಂಪನಿ (Motorola Company) ಕೂಡ ಹೊಸ ವರ್ಷದಲ್ಲಿ ಹೊಸ ಇಯರ್ಬಡ್ಸ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮೊಟೊರೊಲಾ ಕಂಪನಿ ಇದುವರೆಗೆ ಮೊಬೈಲ್ (Mobile)ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಆದರೆ ಇದೀಗ ಮೊಟೊ ಕಂಪನಿ ಹೊಸ ಹೆಜ್ಜೆಯಿಟ್ಟಿದೆ. ಅಂದರೆ ಮಾರುಕಟ್ಟೆಗೆ ಹೊಸ ಇಯರ್ಬಡ್ಸ್ಗಳನ್ನು (Earbuds) ಪರಿಚಯಿಸಲು ರೆಡಿಯಾಗಿದೆ.
ಮೊಟೊರೊಲಾ ಕಂಪನಿ ಇದೀಗ ಇಯರ್ಬಡ್ಸ್ 600 ಎಎನ್ಸಿ ಇಯರ್ಬಡ್ಸ್ ಅನ್ನು ಪರಿಚಯಿಸಲು ರೆಡಿಯಾಗಿದೆ. ಇದು ಉತ್ತಮ ಸೌಂಡ್ ಕ್ವಾಲಿಟಿಯನ್ನು ಹೊಂದಿದ್ದು, ವಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ.
ಮೊಟೊ ಇಯರ್ಬಡ್ಸ್ 600 ಎಎನ್ಸಿ ವಿನ್ಯಾಸ
ಮೊಟೊ ಬಡ್ಸ್ 600 ಎಎನ್ಸಿ ಇಯರ್ಬಡ್ಸ್ ವಿನ್ಯಾಸವು ಮೇಲ್ಭಾಗದಲ್ಲಿ ಸ್ವಲ್ಪ ಓರೆಯಾದ ಪಾಡ್ಗಳನ್ನು ಹೊಂದಿರುವ ಸ್ಟಿಮ್ ಅನ್ನು ಒಳಗೊಂಡಿದೆ. ಇನ್ನು ಈ ಇಯರ್ಬಡ್ಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದೆ. ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವ ಸಿಲಿಕೋನ್ ಇಯರ್ ಟಿಪ್ಸ್ ಅನ್ನು ಹೊಂದಿದೆ. ಇನ್ನು ಈ ಇಯರ್ಬಡ್ಸ್ ಚಾರ್ಜಿಂಗ್ ಕೇಸ್ ಅನ್ನು ಒಳಗೊಂಡಿದೆ. ಈ ಇಯರ್ಬಡ್ಸ್ IPX5 ವಾಟರ್ ರೆಸಿಸ್ಟೆನ್ಸಿಯನ್ನು ಹೊಂದಿಕೊಂಡಿದೆ.
ಇದನ್ನೂ ಓದಿ: ಬಿಎಸ್ಎನ್ಎಲ್ನ ಈ ರೀಚಾರ್ಜ್ ಪ್ಲ್ಯಾನ್ ಶಾಶ್ವತವಾಗಿ ಬಂದ್! ಕಾರಣವೇನು ಗೊತ್ತಾ?
ಫೀಚರ್ಸ್
ಮೊಟೊ ಬಡ್ಸ್ 600 ANC ಚಾರ್ಜಿಂಗ್ ಕೇಸ್ ಒಳಗೆ ಫಿಸಿಕಲ್ ಬಟನ್ ಅನ್ನು ನೀಡಲಾಗಿದೆ. ಇದನ್ನು ಇಯರ್ಬಡ್ಸ್ಗಳನ್ನು ಜೋಡಿಸುವ ಮೋಡ್ ಅನ್ನು ಆಕ್ಟಿವ್ ಮಾಡಲು ಈ ಬಟನ್ ಅನ್ನು ಬಳಸಬಹುದಾಗಿದೆ. ಇದಲ್ಲದೆ ಈ ಇಯರ್ಬಡ್ಸ್ ಮಲ್ಟಿ ಪಾಯಿಂಟ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಇಯರ್ಬಡ್ಸ್ಗಳನ್ನು ಸಿಂಗಲ್ ಟೈಂನಲ್ಲಿ ಎರಡು ಡಿವೈಸ್ಗಳನ್ನು ಕನೆಕ್ಟ್ ಮಾಡಲು ಅನುಮತಿಸಲಿದೆ. ಜೊತೆಗೆ ಈ ಇಯರ್ಬಡ್ಸ್ ಫಾಸ್ಟ್ ಪೇರ್ ತಂತ್ರಜ್ಞಾನವನ್ನು ಕೂಡ ಹೊಂದಿಕೊಂಡಿದೆ.
ಬ್ಯಾಟರಿ ಫೀಚರ್ಸ್
ಮೊಟೊ ಬಡ್ಸ್ 600 ಎಎನ್ಸಿ ಇಯರ್ಬಡ್ಸ್ ಚಾರ್ಜಿಂಗ್ ಕೇಸ್ನೊಂದಿಗೆ 26 ಗಂಟೆಗಳ ಬ್ಯಾಟರಿ ಅವಧಿಯನ್ನು ಸಹ ಹೊಂದಿರಲಿದೆ. ವೈರ್ಡ್ ಚಾರ್ಜಿಂಗ್ಗಾಗಿ ಚಾರ್ಜಿಂಗ್ ಕೇಸ್ನಲ್ಲಿ ನೀವು ಯುಎಸ್ಬಿ ಟೈಪ್ ಸಿ ಪೋರ್ಟ್ ಅನ್ನು ಒಳಗೊಂಡಿದೆ. ಜೊತೆಗೆ ಇದು ವಾಯರ್ಲೆಸ್ ಚಾರ್ಜಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ಮೊಟೊರೊಲಾ ಕಂಪನಿಯ ಮೊಟೊ ಬಡ್ಸ್ 600 ಎಎನ್ಸಿ $149 ಭಾರತದಲ್ಲಿ ಅಂದಾಜು 12,300 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ಇನ್ನು ಈ ಇಯರ್ಬಡ್ಸ್ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಹೇಳಲಾಗಿದೆ.
ಮೊಟೊ ಕಂಪನಿಯ ಹೊಸ ಸ್ಮಾರ್ಟ್ಫೋನ್ಗೆ ಸಿದ್ಧತೆ
ಇದಲ್ಲದೆ ಮೊಟೊರೊಲಾ ಕಂಪನಿ ತನ್ನ ಜನಪ್ರಿಯ G ಸರಣಿಯ ಮುಂದಿನ ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದೇ ಸಂದರ್ಭದಲ್ಲಿ ಮೊಟೊ ಜಿ 5ಜಿ ಸ್ಮಾರ್ಟ್ಫೋನ್ನ ಇಮೇಜ್ ವಿನ್ಯಾಸ ಬಹಿರಂಗವಾಗಿದೆ. ಈ ಫೋನ್ ಹಿಂದಿನ ಸ್ಮಾರ್ಟ್ಫೋನ್ ವರ್ಷನ್ ಮಾದರಿಯನ್ನೇ ಹೋಲುವಂತಿದೆಯಾದರೂ, ಹೊಸ ಮಾದರಿಯ ಫೀಚರ್ಸ್ನೊಂದಿಗೆ ಮಾರುಕಟ್ಟೆಗೆ ಬರಲಿದೆ.
ಮೊಟೊರೊಲಾ ಕಂಪನಿ ಈ ವರ್ಷ ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಆದರೆ ಈ ಕಂಪನಿಯ ಬ್ರಾಂಡ್ಗಳ ಸಾಲಿಗೆ ಇದೀಗ ಹೊಸ ಇಯರ್ಬಡ್ಸ್ ಸೇರ್ಪಡೆಯಾಗುತ್ತಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ