ಲೆನೋವೋ ಕಂಪೆನಿಯ (Lenovo Company) ಉಪ ಬ್ರಾಂಡ್ ಆಗಿರುವ ಜಾಗತಿಕ ಸ್ಮಾರ್ಟ್ಫೋನ್ ಕಂಪೆನಿ ಮೊಟೊರೊಲಾದಿಂದ ಮತ್ತೊಂದು ಹೊಸ ಫೋನ್ ಮಾರುಕಟ್ಟೆಗೆ ಬಂದಿದೆ. ಇದೀಗ ಸ್ಯಾಮ್ಸಂಗ್ (Samsung) ಮತ್ತು ಶಿಯೋಮಿ (Xiaomi) ನಂತಹ ಬ್ರ್ಯಾಂಡ್ಗಳಿಗೆ ಪೈಪೋಟಿ ನೀಡಲು ಕಂಪೆನಿಯು ಹೊಚ್ಚ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಮೊಟೊರೊಲಾ ಎಡ್ಜ್ 30 ಫ್ಯೂಷನ್ (Motorola Edge 30 Fusion) ಎಂದು ಕರೆಯಲ್ಪಡುವ ಈ ಹ್ಯಾಂಡ್ಸೆಟ್ ಪ್ಯಾಂಟೋನ್ ಕಲರ್ ಆಫ್ ದಿ ಇಯರ್- 2023 ವಿವಾ ಮೆಜೆಂಟಾವನ್ನು ಒಳಗೊಂಡಿರುವ ಏಕೈಕ ಸಾಧನ ಎಂಬ ದಾಖಲೆಯನ್ನು ಮಾಡಿದೆ. 144Hz ರಿಫ್ರೆಶ್ ರೇಟ್, ಕರ್ವ್ಡ್ ಡಿಸ್ಪ್ಲೇ, 68W ಚಾರ್ಜಿಂಗ್ನಂತಹ ಫೀಚರ್ಸ್ಗಳನ್ನು ಇದು ಒಳಗೊಂಡಿದೆ.
ಲೆನೋವೋ ಕಂಪನಿಯ ಉಪಬ್ರಾಂಡ್ ಆಗಿರುವ ಮೊಟೊರೊಲಾ ಇದೀಗ ಜಾಗತಿಕ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಇದು ವಿಶೇಷ ಬಣ್ಣದೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದ್ದು, ಸ್ಪೆಷಲ್ ಫೀಚರ್ಸ್ ಅನ್ನು ಹೊಂದಿದ ಸ್ಮಾರ್ಟ್ಫೋನ್ ಇದಾಗಿದೆ. ಹಾಗಿದ್ರೆ ಈ ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್ಫೋನ್ನ ಬೆಲೆ ಎಷ್ಟು? ಫೀಚರ್ಸ್ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ
ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್ಫೋನ್ ಫೀಚರ್ಸ್
ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್ಫೋನ್ 144Hz ರಿಫ್ರೆಶ್ ರೇಟ್, ಅಲ್ಟ್ರಾ HDR10+ ಜೊತೆಗೆ 6.55 ಇಂಚಿನ pOLED ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗುತ್ತದೆ. ಇನ್ನು ಇದರ ಪ್ರೊಸೆಸರ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888+ 5ಜಿ ಚಿಪ್ಸೆಟ್ ಮೂಲಕ ಈ ಹ್ಯಾಂಡ್ಸೆಟ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇದನ್ನೂ ಓದಿ: ವಾಟ್ಸಾಪ್ನಲ್ಲಿ ಸುಲಭದಲ್ಲಿ ಲೈವ್ ಲೊಕೇಶನ್ ಶೇರ್ ಮಾಡೋದು ಹೇಗೆ? ಇಲ್ಲಿದೆ ಟ್ರಿಕ್ಸ್
ಈ ಪ್ರೊಸೆಸರ್ LPDDR5 8 ಜಿಬಿ ರ್ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿರುತ್ತದೆ. ಇನ್ನು ಇದರ ಡಿಸ್ಪ್ಲೇಯನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್ನಿಂದ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ನ ತೂಕ ಮತ್ತು ಅಳತೆಗೆ ಸಂಬಂಧಿಸಿದಂತೆ, ಸ್ಮಾರ್ಟ್ಫೋನ್ 175 ಗ್ರಾಂ ತೂಕವನ್ನು ಹೊಂದಿದೆ ಮತ್ತು 7.45 ಮಿಮೀ ದಪ್ಪವಾಗಿರುತ್ತದೆ.
ಈ ಹೊಸ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ
ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್ಫೋನ್ ಅನ್ನು ರೂ 39,999 ಕ್ಕೆ ಬಿಡುಗಡೆ ಮಾಡಲಾಗಿದೆ. ಆದರೆ ಈ ಬೆಲೆ ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ. ಇನ್ನು ಈ ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್ಫೋನ್ ಇದೇ ಜನವರಿ 12 ರಿಂದ ಮಾರಾಟ ಆರಂಭವಾಗಲಿದೆ. ಈ ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್, ಮೊಟೊರೊಲಾ ಕಂಪೆನಿಯ ಅಧಿಕೃತ ವೆಬ್ಸೈಟ್ನಲ್ಲಿ ಮತ್ತು ಪ್ರಮುಖ ರೀಟೇಲ್ ಶಾಪ್ಗಳಲ್ಲಿ ಖರೀದಿಸಬಹುದಾಗಿದೆ.
ಡಾಲ್ಬಿ ಅಟ್ಮಾಸ್ನಂತಹ ಸ್ಪೀಕರ್ ಫೀಚರ್ಸ್
ಮೊಟೊರೊಲಾ ಎಡ್ಜ್ 30 ಫ್ಯೂಷನ್ HDR10 ವಿಡಿಯೋ ರೆಕಾರ್ಡಿಂಗ್, 8ಕೆ ರೆಕಾರ್ಡಿಂಗ್ ಫೀಚರ್ಸ್ಗಳನ್ನು ಹೊಂದಿದೆ. ಇನ್ನು ಈ ಸಾಧನವು ಡಾಲ್ಬಿ ಅಟ್ಮಾಸ್ನೊಂದಿಗೆ ಎರಡು ದೊಡ್ಡ ಸ್ಟೀರಿಯೋ ಸ್ಪೀಕರ್ಗಳನ್ನು ಸಹ ಹೊಂದಿದೆ.
ಬ್ಯಾಟರಿ ಫೀಚರ್ಸ್
ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್ಫೋನ್ 4400mAh ಬ್ಯಾಟರಿಯನ್ನು ಹೊಂದಿದ್ದು ಅದು 68W ಟರ್ಬೋಪವರ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಮೊಟೊರೊಲಾ ಕಂಪೆನಿಯು ವಿವಾ ಮೆಜೆಂಟಿಯಾ ಲಿಮಿಟೆಡ್ ಆವೃತ್ತಿಯ ಮೊಟೊರೊಲಾ ಎಡ್ಜ್ 30 ಫ್ಯೂಷನ್ಗಾಗಿ ಬಿಡುಗಡೆ ಕೊಡುಗೆಗಳನ್ನು ಪ್ರಕಟಿಸಿದೆ. ಆಯ್ದ ಬ್ಯಾಂಕ್ ಕಾರ್ಡ್ಗಳಲ್ಲಿ ಗ್ರಾಹಕರು ರೂ.3,500 ಹೆಚ್ಚುವರಿ ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದು. ಇದಲ್ಲದೆ, ಕಂಪೆನಿಯು ರಿಲಯನ್ಸ್ ಜಿಯೋದಿಂದ ರೂ.7,699 ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು ಎಂದು ಬಹಿರಂಗಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ