‘ವಿಶ್ವ ಅಮ್ಮಂದಿರ ದಿನ‘ವನ್ನು ತಂತ್ರಜ್ನಾನ ದೈತ್ಯ ಗೂಗಲ್ ವಿಶೇಷವಾಗಿ ಆಚರಿಸಿದೆ. ತಾಯಂದಿರು ತೋರಿಸುವ ಪ್ರೀತಿ, ಕಾಳಜಿಗೆ ಸಂಕೇತವಾಗಿ ವಿಶೇಷ ಡೂಡಲ್ ನಿರ್ಮಿಸಿ ಗೌರವ ತೋರಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಗೂಗಲ್ ತನ್ನ ಡೂಡಲ್ನಲ್ಲಿ ವರ್ಚುವಲ್ ಕಾರ್ಡ್, ಗ್ರೀಟಿಂಗ್ಸ್ ತಯಾರಿಸಿ ತಾಯಂದಿರ ದಿನವನ್ನು ಆಚರಿಸಿ ಎಂದಿದೆ.
ಗೂಗಲ್ ವಿಶ್ವ ತಾಯಂದಿರ ದಿನವನ್ನು ಸ್ಮರಿಸುವ ಮೂಲಕ ನಿಮ್ಮ ಹೃದಯಾಂತರಾಳದಿಂದ ಕಲೆ ಮತ್ತು ಕಸೂತಿ ತಯಾರಿಸಿ ಹಂಚಿಕೊಳ್ಳಿ ಎಂದಿದೆ. ಗೂಗಲ್ ಲೋಗೋವನ್ನು ಕ್ಲಿಕ್ ಮಾಡಿದರೆ ಅದರಲ್ಲಿ ಲೆಟರ್ ಎಂದು ತೋರಿಸುತ್ತದೆ. ಇದರಲ್ಲಿ ಕಾರ್ಡು (ಗ್ರೀಟಿಂಗ್ಸ್) ತಯಾರಿಸುವ ಆಯ್ಕೆಯನ್ನು ನೀಡಿದೆ.
ಗ್ರೀಟಿಂಗ್ಸ್ ಕಾರ್ಡು ತಯಾರಿಸಲು ಗೂಗಲ್ ವಿಶೇಷ ಐಕಾನ್ ಅನ್ನು ನೀಡಿದೆ. ಕಾರ್ಡು ಪೂರ್ಣಗೊಂದ ನಂತರ ಸೆಂಡ್ ಆಯ್ಕೆಯನ್ನು ತೋರಿಸುತ್ತದೆ. ಇದರಲ್ಲಿ ತಾಯಂದಿರ ಫೋಟೋವನ್ನು ಹಾಕಲು ಗೂಗಲ್ ಆಯ್ಕೆ ನೀಡಿದೆ. ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ