Social Media ಚಟದಿಂದ ಬಾಲಕಿ ಆತ್ಮಹತ್ಯೆ: Meta, Snapchat ವಿರುದ್ಧ ತಾಯಿ ದೂರು

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯದಲ್ಲಿ ದಾಖಲಾದ ಈ ಮೊಕದ್ದಮೆಯು ಆತ್ಮಹತ್ಯೆಗೆ ಸಾಮಾಜಿಕ ಮಾಧ್ಯಮವನ್ನು ದೂಷಿಸುವ ಮೊದಲನೆಯ ಪ್ರಕರಣವೇನಲ್ಲ ಎನ್ನಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇನ್‌ಸ್ಟಾಗ್ರಾಮ್  (Instagram) ಮತ್ತು ಸ್ನ್ಯಾಪ್‌ಚಾಟ್‌ (Snapchat)  ವ್ಯಸನಿಯಾಗಿದ್ದ 11 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಕೆಯ ಸಾವಿಗೆ ಮೆಟಾ ಪ್ಲಾಟ್‌ಫಾರ್ಮ್ಸ್‌ ಇಂಕ್ ಮತ್ತು ಸ್ನ್ಯಾಪ್ ಇಂಕ್ ಕಾರಣವೆಂದು ಆಕೆಯ ತಾಯಿ ಮೊಕದ್ದಮೆ ಹೂಡಿದ್ದಾರೆ. ಸೆಲೆನಾ ರೋಡ್ರಿಗಸ್  (Selena Rodriguez) ಆತ್ಮಹತ್ಯೆಗೆ ಶರಣಾದ  (Committed Suicide) ಹುಡುಗಿ ಎಂದು ತಿಳಿದು ಬಂದಿದೆ. 2 ವರ್ಷಗಳ ಕಾಲ ಮೆಟಾದ ಫೋಟೋ-ಶೇರಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ನ್ಯಾಪ್‌ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ವ್ಯಸನಿಯಾಗಿದ್ದ ಈಕೆ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಳು ಎಂದು ಆಕೆಯ ತಾಯಿ ಹೇಳಿದ್ದಾರೆ.

ಮೊದಲನೆಯ ಪ್ರಕರಣವೇನಲ್ಲ

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯದಲ್ಲಿ ದಾಖಲಾದ ಈ ಮೊಕದ್ದಮೆಯು ಆತ್ಮಹತ್ಯೆಗೆ ಸಾಮಾಜಿಕ ಮಾಧ್ಯಮವನ್ನು ದೂಷಿಸುವ ಮೊದಲನೆಯ ಪ್ರಕರಣವೇನಲ್ಲ. ಆದರೆ, ಪ್ರಪಂಚದಾದ್ಯಂತದ ಹಲವಾರು ಯುವಜನರು ಸಂವಹನ ನಡೆಸುವ ಹಲವಾರು ವೇದಿಕೆಗಳಿಗೆ ಈ ಮೊಕದ್ದಮೆಯು ಸರಿಯಾದ ಪೆಟ್ಟು ನೀಡಿದೆ. ಕಂಪನಿಯು ಸುರಕ್ಷತೆಯನ್ನು ಮರೆತು ಲಾಭಕ್ಕೆ ಎಂದೂ ಆದ್ಯತೆ ನೀಡುವುದಿಲ್ಲ.  ಇಮೇಜ್ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ನಾವು ಹೊಸ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ” ಎಂದು ಮೆಟಾ ಪ್ರತಿನಿಧಿಗಳು ನವೆಂಬರ್‌ನಲ್ಲಿ ಹೇಳಿದೆ.

ಸೈಬರ್-ಬೆದರಿಕೆಯ ವಿರುದ್ಧ ತಮ್ಮದೇ ಆದ ನೀತಿಗಳನ್ನು ಕಂಪನಿಗಳು ಜಾರಿಗೊಳಿಸಲು ವಿಫಲವಾಗಿವೆ ಎಂದು ಆರೋಪಿಸಿದ ಕ್ಯಾಲಿಫೋರ್ನಿಯಾದಲ್ಲಿ ದಾಖಲಾದ ಮೊಕದ್ದಮೆಯಲ್ಲಿ, ಬಳಕೆದಾರರ ಸುರಕ್ಷತೆಯ ಕಾಳಜಿಯೊಂದಿಗೆ 2 ಅಪ್ಲಿಕೇಶನ್ ತಯಾರಕರೊಂದಿಗೆ ಯೋಜನೆಗಳನ್ನು ಅಮಾನತುಗೊಳಿಸುವುದಾಗಿ ಸ್ನ್ಯಾಪ್‌ಚಾಟ್‌ ಮೇ ತಿಂಗಳಲ್ಲಿ ಹೇಳಿಕೆ ನೀಡಿತ್ತು.

ಇದನ್ನೂ ಓದಿ: Anekal Suicide: 'ಅಪ್ಪ ನಾನು ಸಾಯ್ತಾ ಇದ್ದೇನೆ.. ಇನ್ಮುಂದೆ ನನ್ನ ಹೆಂಡತಿ-ಮಕ್ಕಳಿಗೆ ಕಾಟ ಕೊಡಬೇಡ..'

ಸಾಮಾಜಿಕ ಜಾಲತಾಣದ ವ್ಯಸನಿ
ಕನೆಕ್ಟಿಕಟ್‌ನ ಟಮ್ಮಿ ರೊಡ್ರಿಗಸ್, ತನ್ನ ಮಗಳ ಪ್ಲಾಟ್‌ಫಾರ್ಮ್‌ಗಳ ಬಳಕೆಯನ್ನು ಮಿತಿಗೊಳಿಸಲು ಪ್ರಯತ್ನಿಸಿದಾಗ ಆಕೆ ಮನೆ ಬಿಟ್ಟು ಓಡಿಹೋದಳು ಎಂದು ಹೇಳಿದರು. ಮೊಕದ್ದಮೆಯ ಪ್ರಕಾರ, ಅವರು ಸೆಲೆನಾಳನ್ನು ಥೆರಪಿಸ್ಟ್ ಬಳಿಯೂ ಕರೆದೊಯ್ದಿದ್ದರು. "ಸೆಲೆನಾಳಷ್ಟು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯಾಗಿರುವ ರೋಗಿಯನ್ನು ತಾನೆಂದು ಕಂಡಿಲ್ಲ" ಎಂದು ಥೆರಪಿಸ್ಟ್ ಆ ವೇಳೆ ಹೇಳಿದ್ದರು.

ಮೊಕದ್ದಮೆಯ ಕಟುವಾದ ಟೀಕೆಗಳ ಪೈಕಿ, ಸ್ನ್ಯಾಪ್‌ಚಾಟ್ ತನ್ನ ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ ಅನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುವಂತೆ ಮಾಡಲು ಅತಿಯಾದ ಬಹುಮಾನಗಳನ್ನು ನೀಡುತ್ತಿದೆ ಎಂಬುವುದೂ ಸೇರಿದೆ. ತನ್ನ ದೂರಿನಲ್ಲಿ, ತಾಯಿ ಸೆಲೆನಾ ರೋಡ್ರಿಗಸ್ ಉತ್ಪನ್ನ ದೋಷ, ನಿರ್ಲಕ್ಷ್ಯ ಮತ್ತು ಕ್ಯಾಲಿಫೋರ್ನಿಯಾದ ಗ್ರಾಹಕ ಸಂರಕ್ಷಣಾ ಕಾನೂನಿನ ಉಲ್ಲಂಘನೆಗಳನ್ನು ಆರೋಪಿಸಿದ್ದಾರೆ. ಪ್ರಕರಣದ ವಕೀಲರಲ್ಲಿ ಒಬ್ಬರಾದ ಸಿಯಾಟಲ್ ಮೂಲದ ಸಾಮಾಜಿಕ ಮಾಧ್ಯಮ ಸಂತ್ರಸ್ತರು ಕಾನೂನು ಕೇಂದ್ರದ ವಕೀಲರ ಗುಂಪಿಗೆ ಸೇರಿರುವರು ಎನ್ನಲಾಗಿದೆ.

ಮಾನಸಿಕ ಆರೋಗ್ಯ ಸಂಸ್ಥೆ

ಜನರು ಸಾರ್ವಜನಿಕ ಒತ್ತಡ ಅಥವಾ ಸಾಮಾಜಿಕ ಹೋಲಿಕೆಗಳಿಲ್ಲದೆ, ಸ್ನ್ಯಾಪ್ ಚಾಟ್ ಮೂಲಕ ತಮ್ಮ ನಿಜವಾದ ಸ್ನೇಹಿತರೊಂದಿಗೆ ಸಂವಹನ ನಡೆಸಬಹುದು. ಅಪರಿಚಿತರು ತಮ್ಮ ಬಳಕೆದಾರರನ್ನು ಸಂಪರ್ಕಿಸದಂತೆ ಕೂಡ ಇದು ತಡೆಯುತ್ತದೆ. ನಮ್ಮ ಸಮುದಾಯವನ್ನು ಸುರಕ್ಷಿತವಾಗಿರಿಸಲು ನಾವು ನಿರಂತರವಾಗಿ ನಡೆಸುವ ಪ್ರಯತ್ನಗಳ ಭಾಗವಾಗಿ, ಸ್ನ್ಯಾಪ್‌ಚಾಟ್‌ ಬಳಕೆದಾರರಿಗೆ ಅಪ್ಲಿಕೇಶನ್‌ನಲ್ಲಿನ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಲು ನಾವು ಮಾನಸಿಕ ಆರೋಗ್ಯ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಎಂದು ಸ್ನ್ಯಾಪ್‌ಚಾಟ್‌ ಪ್ರತಿನಿಧಿಗಳು ಹೇಳಿದ್ದಾರೆ.

ಇದನ್ನೂ ಓದಿ: Couple Suicide: ಪ್ರೀತಿಸಿದ್ರು, 5 ತಿಂಗಳ ಹಿಂದೆ ಮದ್ವೆಯಾದ್ರು: ವಂಶದ ಕುಡಿ ಆಕೆಯ ಗರ್ಭದಲ್ಲಿತ್ತು; ನೇಣಿಗೆ ಶರಣಾಗಿದ್ದೇಕೆ ಜೋಡಿ?

ಸ್ನ್ಯಾಪ್‌ಚಾಟ್‌ ದಿಗ್ಭ್ರಮೆ

ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾಡಿದ ಪೋಸ್ಟ್‌ಗಳ ಹೊಣೆಗಾರಿಕೆಯಿಂದ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳನ್ನು ರಕ್ಷಿಸುವ 1996 ರ ಫೆಡರಲ್ ಕಾನೂನಿನ ಕಾರಣ, ಸಾಮಾಜಿಕ ಮಾಧ್ಯಮ ಕಂಪನಿಗಳು ವೈಯಕ್ತಿಕ ಹಾನಿಗಳಂತಹ ಮೊಕದ್ದಮೆಗಳಿಂದ ತಮ್ಮನ್ನು ತಾವು ಹೆಚ್ಚಾಗಿ ರಕ್ಷಿಸಿಕೊಂಡಿವೆ. ಮೊಕದ್ದಮೆಯ ಬಗ್ಗೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಸ್ನ್ಯಾಪ್‌ಚಾಟ್‌ ಪ್ರತಿನಿಧಿಯೊಬ್ಬರು ಬಿಬಿಸಿಗೆ ನೀಡಿದ ಹೇಳಿಕೆಯಲ್ಲಿ, ಸೆಲೆನಾ ಸಾವಿನ ಬಗ್ಗೆ ತಿಳಿದು ಸ್ನ್ಯಾಪ್‌ಚಾಟ್‌ "ದಿಗ್ಭ್ರಮೆಗೊಂಡಿದೆ".  ಸಮುದಾಯವು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದೆ.

ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ,  ಬಿಬಿಸಿಯ ವಿನಂತಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಯುವಜನರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಶಾಸಕರು ಮತ್ತು ಸಾರ್ವಜನಿಕರು ಹೆಚ್ಚು ಕಾಳಜಿ ವಹಿಸುತ್ತಿರುವ ಸಮಯದಲ್ಲಿ ಈ ಮೊಕದ್ದಮೆಯು ಹೊರ ಹೊಮ್ಮಿದೆ.
Published by:vanithasanjevani vanithasanjevani
First published: