ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ (Smartphone) ಹೇಗೆ ಅಗತ್ಯವೋ ಅದೇ ರೀತಿ ಇಂಟರ್ನೆಟ್ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದು ಬಾರಿ ಬಳಕೆದಾರರಿಗೆ ನೆಟ್ವರ್ಕ್ ಸಮಸ್ಯೆ (Network Problem) ಎದುರಾಗುತ್ತದೆ. ಇದಕ್ಕೆ ಕಾರಣವೇನು ಎಂಬುದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಆದರೆ ಸಮೀಖ್ಯೆಯೊಂದರ ವರದಿ ಪ್ರಕಾರ ಈ ಬಾರಿ ವಿಶ್ವದಾದ್ಯಂತ ಅತ್ಯಧಿಕ ಬಾರಿ ಇಂಟರ್ನೆಟ್ ಸಮಸ್ಯೆ ಎದುರಾಗಿದ್ದು ಭಾರತದಲ್ಲಿ ಎಂದು ಹೇಳಿದೆ. ಇಂಟರ್ನೆಟ್ (Internet) ಎಂಬುದು ಇಂದಿನ ದಿನಗಳಲ್ಲಿ ನೀರು, ಗಾಳಿ ಹೇಗೆ ಮುಖ್ಯವಾಗಿದೆಯೋ ಅದೇ ರೀತಿ ಇಂಟರ್ನೆಟ್ ಸಹ ಮುಖ್ಯವಾಗಿದೆ. ಆದರೆ ಕೆಲವೊಮ್ಮೆ ಈ ತೊಂದರೆಗಳು ಎದುರಾದಾಗ ಜನರು ಹಲವಾರು ಬಾರಿ ಸ್ಮಾರ್ಟ್ಫೋನ್ಗಳ ಸೆಟ್ಟಿಂಗ್ಸ್ಗಳನ್ನು ಬದಲಾಯಿಸುತ್ತಾರೆ.
ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವೊಂದು ಬಾರಿ ತನ್ನಷ್ಟಕ್ಕೆ ಇಂಟರ್ನೆಟ್ ಶಟ್ಡೌನ್ ಆಗುತ್ತದೆ. ಆದರೆ ಈ ಸಂದರ್ಭದಲ್ಲಿ ಕಳೆದ ವರ್ಷದ ವರದಿಯ ಪ್ರಕಾರ ಭಾರತದಲ್ಲೇ ಅತೀ ಹೆಚ್ಚು ಇಂಟರ್ನೆಟ್ ಸ್ಥಗಿತಗೊಂಡಿದ್ದು ಎಂದು ವರದಿಯಾಗಿದೆ. ಹಾಗಿದ್ರೆ ಇದಕ್ಕೆ ಕಾರಣವೇನು ಎಂಬುದಕ್ಕೆ ಉತ್ತರ ಇಲ್ಲಿದೆ.
ಬರೋಬ್ಬರಿ 187 ಬಾರಿ ಇಂಟರ್ನೆಟ್ ಕಟ್
ಇನ್ನು ವರದಿಯ ಪ್ರಕಾರ ಕಳೆದ ವರ್ಷ ಜಾಗತಿಕವಾಗಿ 187 ಬಾರಿ ಇಂಟರ್ನೆಟ್ ಕನೆಕ್ಷನ್ ಸ್ಥಗಿತವಾಗಿದೆ ಎಂದು ಹೇಳಲಾಗಿದೆ. ಅದ್ರಲ್ಲೂ ಅತೀಹೆಚ್ಚು ಅಂದರೆ 84 ಬಾರಿ ಭಾರತದಲ್ಲೇ ಈ ಸಮಸ್ಯೆ ಎದುರಾಗಿದೆ. ಇನ್ನು ಈ ಸಂಖ್ಯೆಯಲ್ಲಿ 49 ಬಾರಿ ಜಮ್ಮಕಾಶ್ಮೀರದಲ್ಲಿ ಇಂಟರ್ನೆಟ್ ಕನೆಕ್ಷನ್ ಸ್ಥಗಿತವಾಗಿದೆ ಎಂದು ಆ್ಯಕ್ಸೆಸ್ ನೌ ವರದಿಯಲ್ಲಿ ಹೇಳಿದೆ. ಇನ್ನು ಈ ಪಟ್ಟಿಯಲ್ಲಿ ಸತತವಾಗಿ ಐದನೇ ವರ್ಷವೂ ಮೊದಲ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್ ಶೆಡ್ಯೂಲ್ ಸಹ ಮಾಡಿಡಬಹುದು!
ಭಾರತದಲ್ಲಿ ಇಂಟರ್ನೆಟ್ ಈ ರೀತಿಯಲ್ಲಿ ಸ್ಥಗಿತಗೊಳ್ಳಲು ಕಾರಣವೇನು?
ಇನ್ನು ಈ ನೆಟ್ವರ್ಕ್ ಸಮಸ್ಯೆಯ ಕುರಿತು ಸಮಸ್ಯೆ ಎದುರಾದಾಗ ನ್ಯೂಯಾರ್ಕ್ ಮೂಲದ ಆ್ಯಕ್ಸೆಸ್ ನೌ ವರದಿ ಮಾಡುತ್ತದೆ. ಇದು ಹೆಚ್ಚಿನ ಸಂದರ್ಭದಲ್ಲಿ ಜಾಗತಿಕವಾಗಿ ಇಂಟರ್ನೆಟ್ ಸಂಪರ್ಕ ಕಡಿತವಾದರೆ, ಸರ್ಕಾರ ಮತ್ತು ಇಲಾಖೆಗಳು ಅಧಿಕೃತವಾಗಿ ನಿರ್ಬಂಧ ವಿಧಿಸಿದರೆ ಅದನ್ನು ವರದಿ ಮಾಡುತ್ತದೆ.
ಇನ್ನು ಈ ವರದಿಯ ಪ್ರಕಾರ ಭಾರತದಲ್ಲೇ ಅತ್ಯಧಿಕ ಬಾರಿ ಇಂಟರ್ನೆಟ್ ಸಂಪರ್ಕ ಸ್ಥಗಿತವಾಗಿದೆ ಎಂದು ಹೇಳಿದೆ. ಈ ವ ರದಿಯ ಪ್ರಕಾರ ಜಾಗತಿಕವಾಗಿ ಭಾರತ ಮೊದಲ ಸ್ಥಾನದಲ್ಲಿದೆ. ಇನ್ನು ಜಮ್ಮು ಕಾಶ್ಮೀರದಲ್ಲಿ ಉಂಟಾಗುವ ಗಲಭೆ ತಡೆಗಟ್ಟಲು ಸರ್ಕಾರ, ಹಲವು ಸಂದರ್ಭದಲ್ಲಿ ಇಂಟರ್ನೆಟ್ ನಿರ್ಬಂಧ ವಿಧಿಸುತ್ತದೆ.
ಉಕ್ರೇನ್ ಎರಡನೇ ಸ್ಥಾನದಲ್ಲಿದೆ
ದೇಶದ ಭದ್ರತೆಯ ಉದ್ದೇಶದಿಂದ ಈ ಇಂಟರ್ನೆಟ್ ಕನೆಕ್ಷನ್ ಅನ್ನು ಸ್ಥಗಿತಗೊಳಿಸಲು ಮುಖ್ಯ ಕಾರಣ ಎಂದಿದ್ದಾರೆ. ಇನ್ನು ಈ ಇಂಟರ್ನೆಟ್ ಸ್ಥಗಿತಗೊಳಿಸುವುದರಲ್ಲಿ ಭಾರತ ಹೊರತುಪಡಿಸಿದರೆ, ಉಕ್ರೇನ್ ಎರಡನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ರಷ್ಯಾದ ಮಿಲಿಟರಿ ದಾಳಿಯಿಂದಾಗಿ ಅಲ್ಲಿ ಕಳೆದ ವರ್ಷ ಕನಿಷ್ಠ 22 ಬಾರಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಮೂರನೇ ಸ್ಥಾನದಲ್ಲಿ ಇರಾನ್ ಇದ್ದು, ಅಲ್ಲಿ 18 ಬಾರಿ ಇಂಟರ್ನೆಟ್ ಶಟ್ಡೌನ್ ಮಾಡಲಾಗಿದೆ.
ಮೊಬೈಲ್ ಡೇಟಾ ಬೇಗ ಖಾಲಿಯಾಗಂದೆ ಮಾಡಲು ಟ್ರಿಕ್ಸ್
ಆ್ಯಪ್ಸ್ ಆಟೋ ಅಪ್ಡೇಟ್ ಡೇಟಾ ಖಾಲಿಯಾಗಲು ಕಾರಣ
ನಿಮ್ಮ ಮೊಬೈಲ್ ಡೇಟಾ(mobile data ) ತ್ವರಿತವಾಗಿ ಖಾಲಿ ಆಗಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಹೈ ಡೆಫಿನಿಶನ್ ಗೇಮ್ಸ್, ಹೆಚ್ಚು ಹೆಚ್ಚು ವಿಡಿಯೋ ನೋಡುವುದು ಸಹ ಒಂದು ಕಾರಣವಿರಬಹುದು. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ವೇಗವಾಗಿ ಕಾರಣಗಳು ಮೊಬೈಲ್ನಲ್ಲಿರುವ ಅಪ್ಲಿಕೇಶನ್ಗಳನ್ನು ಅಪ್ಡೇಟ್ ಮಾಡುವುದು ಸಹ ಒಂದು ಕಾರಣವಾಗಿದೆ.
ಮೊಬೈಲ್ ಡೇಟಾ ಖಾಲಿಯಾಗದಂತೆ ಹೀಗೆ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ