Smartphones: ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿರುವ ನೂತನ ಸ್ಮಾರ್ಟ್‌ಫೋನ್‌ಗಳು ಇವೇ..!

Android Smartphones: ಈ ವರ್ಷವು ಗಂಟೆಮೂಟೆ ಕಟ್ಟುತ್ತಿರುವ ಹೊತ್ತಿನಲ್ಲಿ ಯಾವೆಲ್ಲ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಪ್ರವೇಶಿಸಲಿವೆ ಎಂಬುದರತ್ತ ಒಂದು ಇಣುಕುನೋಟ ಬೀರೋಣ:

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

2021 ಅಂತ್ಯಗೊಂಡು 2022ರ ನೂತನ ವರ್ಷ ಪ್ರಾರಂಭವಾಗಲು ಇನ್ನು ಕೆಲವು ಗಂಟೆಗಳಷ್ಟೇ ಬಾಕಿಯಿದೆ. ಹೊಸ ವರ್ಷಕ್ಕೆ ಅಡಿಯಿಡುತ್ತಿದ್ದಂತೆಯೇ ಮೈನವಿರೇಳಿಸುವ ತಂತ್ರಜ್ಞಾನದ ಸ್ಮಾರ್ಟ್‌ಫೋನ್‌ಗಳು (Smartphones)  ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿ ನಿಂತಿವೆ. 2022ರಲ್ಲಿ ನಾವೆಲ್ಲ ನಿಶ್ಚಿತವಾಗಿ ನೂತನ ಆ್ಯಪಲ್ ಐಫೋನ್ (Apple Iphone) ನೋಡಲಿದ್ದೇವೆ. ಇದರೊಂದಿಗೆ ಸ್ಯಾಮ್‌ಸಂಗ್‌ (Samsung)  ಕಂಪನಿಯ ಮಹತ್ವಾಕಾಂಕ್ಷಿ ಗ್ಯಾಲಕ್ಸಿ ಎಸ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಲು ಸಾಲುಗಟ್ಟಿ ನಿಂತಿವೆ. ಇವೆರಡಲ್ಲದೆ ಒನ್‌ಪ್ಲಸ್, (OnePlus)ಶಯೋಮಿ, ರಿಯಲ್‌ಮಿ ಮುಂತಾದ ಕಂಪನಿಗಳ ಸ್ಮಾರ್ಟ್‌ಫೋನ್‌ಗಳೂ ಮಾರುಕಟ್ಟೆಯಲ್ಲಿ ಪ್ರವೇಶಿಸಲಿವೆ. ಈ ವರ್ಷವು ಗಂಟೆಮೂಟೆ ಕಟ್ಟುತ್ತಿರುವ ಹೊತ್ತಿನಲ್ಲಿ ಯಾವೆಲ್ಲ ಬಹು ನಿರೀಕ್ಷಿತ (Expected) ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ(Market) ಪ್ರವೇಶಿಸಲಿವೆ ಎಂಬುದರತ್ತ ಒಂದು ಇಣುಕುನೋಟ ಬೀರೋಣ


ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್21 ಎಫ್ಇ: ಈ ಸ್ಮಾರ್ಟ್‌ಫೋನ್ ಹಲವು ಸಮಾರಂಭಗಳ ಮೂಲಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಹೇಳಲಾಗಿದೆಯಾದರೂ, ಈ ಸ್ಮಾರ್ಟ್‌ಫೋನ್ ಅನ್ನು ಈವರೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿಯೇ ಇಲ್ಲ. "ರೂಪಾಂತಗೊಂಡಿರುವ" ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 21 ಸರಣಿಯ ನೂತನ ಆವೃತ್ತಿಯು ಇನ್ನೆರಡು ವಾರಗಳಲ್ಲಿ ವಿದ್ಯುನ್ಮಾನ ಗ್ರಾಹಕರ ಮೇಳ-2022ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್22 ಸರಣಿ: ಎಲ್ಲ ವರ್ಷಗಳಲ್ಲಿ ವಿಪರೀತ ನಿರೀಕ್ಷೆ ಹುಟ್ಟಿಸುವ ಸ್ಯಾಮ್‌ಸಂಗ್‌, ಈ ಬಾರಿ ಗೆಲಾಕ್ಸಿ ಎಸ್ ಸರಣಿಯನ್ನು ಬಿಡುಗಡೆಗೊಳಿಸಲಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್22 ಸರಣಿಯ ಸ್ಮಾರ್ಟ್‌ಫೋನ್‌ಗಳು 2022ರ ಆರಂಭದಲ್ಲಿ ಬಿಡುಗಡೆಗೊಳ್ಳಲಿವೆ ಎಂದು ಹೇಳಲಾಗಿದ್ದು, ತನ್ನ ಹಿಂದಿನ ಮಾದರಿಗಳಿಂತ ಹೆಚ್ಚು ಸುಧಾರಣೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಆದರೆ, ಸಾಕಷ್ಟು ಸುದ್ದಿಯಲ್ಲಿದ್ದ ವೆನಿಲ್ಲಾ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್22, ಗ್ಯಾಲಕ್ಸಿ ಎಸ್22+, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್22 ಅಲ್ಟ್ರಾ ಬಗ್ಗೆ ಈವರೆಗೆ ಏನೂ ತಿಳಿದು ಬಂದಿಲ್ಲ.

ಇದನ್ನೂ ಓದಿ: Realme GT 2 Pro ನೋಟಕ್ಕೆ ಸೋತ ಸ್ಮಾರ್ಟ್​ಫೋನ್ ಪ್ರಿಯರು! ತುದಿಗಾಲಿನಲ್ಲಿ ಕಾಯುತ್ತಿದ್ದಾರೆ ಖರೀದಿಸಲು

ಒನ್‌ಪ್ಲಸ್ 10 ಸರಣಿ: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌ ಸರಣಿಯ ಸ್ಮಾರ್ಟ್‌ಫೋನ್‌ಗಳಂತೆಯೇ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಕುರಿತೂ ಎಲ್ಲ ವರ್ಷಗಳಲ್ಲೂ ವರ್ಷ ಭಾರಿ ನಿರೀಕ್ಷೆ ಇದೆ. ಒನ್‌ಪ್ಲಸ್ 10 ಪ್ರೋ ಸಾಕಷ್ಟು ಸುದ್ದಿಯಲ್ಲಿತ್ತು. ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ದಾಂಗುಡಿ ಇಡುವ ಸುಳಿವು ನೀಡಿತ್ತು.
ಐಫೋನ್ 14:ಪ್ರತಿ ವರ್ಷವೂ ಭಾರಿ ನಿರೀಕ್ಷೆ ಹುಟ್ಟಿಸಿ, ಬಿಡುಗಡೆ ಸಂದರ್ಭದಲ್ಲಿ ಚರ್ಚೆಗೆ ಕಾರಣವಾಗುವ ಐಫೋನ್ 14 ಸರಣಿಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ಹರಡಿರುವ ವದಂತಿಗಳ ಪ್ರಕಾರ, ಭವಿಷ್ಯದ ತಲೆಮಾರಿನ ಐಫೋನ್ ಹೋಲ್ ಪಂಚ್ ಕಟ್‌ಔಟ್ ವಿನ್ಯಾಸ ಅಂತಿಮವಾದ ನಂತರವಷ್ಟೇ ತನ್ನ ಗೂಡಿನಿಂದ ಹೊರಬರಲಿದೆ ಎನ್ನಲಾಗಿದೆ.

ಐಫೋನ್ ಎಸ್‌ಇ 3: 2020ರಲ್ಲಿ ಆ್ಯಪಲ್ ಕಂಪನಿಯು ಗ್ರಾಹಕರ ಕೈಗೆಟುಕುವ ದರದ ಐಫೋನ್ ಎಸ್ಇ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 2022ರಲ್ಲಿ ಈ ದೈತ್ಯ ಕಂಪನಿಯು ತನ್ನ ಮೂರನೆಯ ಕೈಗೆಟುಕುವ ದರದ ಐಫೋನ್ ಎಸ್ಇ 3 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಈ ಸರಣಿಯು ಐಫೋನ್ ಎಕ್ಸ್‌ಆರ್ ಆವೃತ್ತಿಯನ್ನು ಆಧರಿಸಿದೆ. ಈ ಸ್ಮಾರ್ಟ್‌ಫೋನ್ 5ಜಿ ತರಂಗಾಂತರ ಸಂಪರ್ಕ ಸಾಮರ್ಥ್ಯ ಹೊಂದಿರಲಿದ್ದು, ಈ ವರ್ಷದ ಆ್ಯಪಲ್ ಎ15 ಬಯಾನಿಕ್ ಚಿಪ್‌ಸೆಟ್‌ನ ನೆರವು ಪಡೆದಿರಲಿದೆ.

ಶಿಯೋಮಿ 12 ಸರಣಿ: ಈ ವಾರದ ಆರಂಭದಲ್ಲಿ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಶಿಯೋಮಿ 12 ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತ ಹಾಗೂ ಇನ್ನಿತರ ಮಾರುಕಟ್ಟೆಗಳಲ್ಲೂ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ. ಶಿಯೋಮಿ 12 ಸರಣಿಯು ಶಿಯೋಮಿ 12, ಶಿಯೋಮಿ 12 ಪ್ರೋ ಹಾಗೂ ಶಿಯೋಮಿ 12ಎಕ್ಸ್ ಒಳಗೊಂಡಿರಲಿದೆ.

ಪಿಕ್ಸೆಲ್ 6ಎ: ಕ್ಯಾಲಿಫೋರ್ನಿಯಾದ ಮೌಂಟೆನ್ ವ್ಯೂ ಮೂಲದ ಗೂಗಲ್ ಕಂಪನಿಯು ತನ್ನ ಸ್ವನಿರ್ಮಿತ ಟೆನ್ಸರ್ ಚಿಪ್ ಒಳಗೊಂಡಿರುವ ಪಿಕ್ಸೆಲ್ 6 ಯಶಸ್ಸಿನಿಂದ ಉತ್ತೇಜಿತಗೊಂಡಿದ್ದು, ಮುಂದಿನ ವರ್ಷ ಪಿಕ್ಸೆಲ್ 6ನ ಪರಿಷ್ಕೃತ ಮಾದರಿ ಪಿಕ್ಸೆಲ್ 6ಎ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Tecno Spark Go 2022: ಟೆಕ್ನೋ ಪರಿಚಯಿಸಿದೆ 8 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​, ಇದರಲ್ಲಿದೆ ಬೆಲೆಗೆ ತಕ್ಕಂತ ಫೀಚರ್ಸ್​!

ರಿಯಲ್‌ಮಿ ಜಿಟಿ 2 ಸರಣಿ: ಬಿಬಿಕೆ ಎಲೆಕ್ಟ್ರಾನಿಕ್ಸ್ ಪ್ರಾಯೋಜಕತ್ವದ ರಿಯಲ್‌ಮಿ ಜಿಟಿ 2 ಸರಣಿಯೂ ತೀವ್ರ ನಿರೀಕ್ಷೆ ಹುಟ್ಟಿಸಿದ್ದು, ಮುಂದಿನ ವರ್ಷಾರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ರಿಯಲ್‌ಮಿ ಜಿಟಿ 12 ಹಾಗೂ ರಿಯಲ್‌ಮಿ ಜಿಟಿ 12 ಪ್ರೋ ಬಿಡುಗಡೆಯನ್ನು ದೃಢೀಕರಿಸಿರುವ ಕಂಪನಿಯು, ತಾನು ಈವರೆಗೆ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳ ಪೈಕಿ ಈ ಮಾದರಿಯು ಹಲವು ವೈಶಿಷ್ಟ್ಯಗಳಿಂದ ಸಮೃದ್ಧವಾಗಿದೆ ಎಂದು ಹೇಳಿಕೊಂಡಿದೆ

.


Published by:vanithasanjevani vanithasanjevani
First published: