ವಾಟ್ಸಾಪ್ (WhatsApp) ದೇಶದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಇದೆ. ಜೊತೆಗೆ ಬಳಕೆದಾರರ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಕ್ರಮಗಳನ್ನು ಸಹ ತೆಗೆದುಕೊಂಡಿದೆ. ಇದೀಗ ವಾಟ್ಸಾಪ್ 2023 ಜನವರಿ ತಿಂಗಳ ಬಳಕೆದಾರರ (Users) ಸುರಕ್ಷತೆಯ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಸಾಕಷ್ಟು ಶಾಕಿಂಗ್ ವಿಚಾರಗಳು ಬಿಡುಗಡೆಯಾಗಿದ್ದು, 29 ಲಕ್ಷಕ್ಕೂ ಅಧಿಕ ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ (WhatsApp Ban) ಮಾಡಿರುವುದಾಗಿ ವಾಟ್ಸಾಪ್ ಹೇಳಿಕೊಂಡಿದೆ. ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ವಾಟ್ಸಾಪ್ ಮುಂದುವರೆಸಿದೆ. ಇದರ ಪರಿಣಾಮ ಭಾರತದಲ್ಲಿ ಜನವರಿ ತಿಂಗಳಿನಲ್ಲಿ 29 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳು ಬ್ಯಾನ್ ಆಗಿವೆ.
ವಾಟ್ಸಾಪ್ ಬಳಕೆದಾರರು ಮಾಡಿದ ರಿಪೋರ್ಟ್ ಹಾಗೂ ಐಟಿ ನಿಯಮಗಳ ಅನ್ವಯ ವಾಟ್ಸಾಪ್ ಬ್ಯಾನ್ ಆಗಿದ್ದು, ಈ ಸಾಲಿನಲ್ಲಿ ಇದೀಗ ಬಂದ ಜನವರಿ ತಿಂಗಳ ವರದಿಯ ಪ್ರಕಾರ ಬರೋಬ್ಬರಿ 29 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆಗಳು ಬ್ಯಾನ್ ಆಗಿದೆ. ಕಾರಣ ನೋಡಿದ್ರೆ ಶಾಕ್ ಆಗ್ತೀರಾ.
ಬಳಕೆದಾರರ ರಿಪೋರ್ಟ್ ಮತ್ತು ನಿಯಮಗಳ ಅನುಸಾರ ವಾಟ್ಸಾಪ್ ಬ್ಯಾನ್
ವಾಟ್ಸಾಪ್ ಜನವರಿಯಲ್ಲಿ 29 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ಬ್ಯಾನ್ ಮಾಡಿದೆ. ಈ ಮೂಲಕ ಹೊಸ ವರ್ಷದ ಸಮಯದಲ್ಲಿ ಭಾರತೀಯರಿಗೆ ಬಿಗ್ ಶಾಕ್ ನೀಡಿದೆ ಅಂತಾನೇ ಹೇಳ್ಬೋದು. ಇನ್ನು ಈ ನಿಯಮವನ್ನು ಯಾವುದೇ ಕಾರಣವಿಲ್ಲದೆ ತೆಗೆದುಕೊಂಡಿಲ್ಲ.
ಇದನ್ನೂ ಓದಿ: ಈ ಆ್ಯಪ್ ಮೂಲಕ ಸುಲಭದಲ್ಲಿ ಹತ್ತಿರದಲ್ಲಿರುವ ಪಾರ್ಕ್ಗಳನ್ನು ಹುಡುಕ್ಬಹುದು! ಈಗ್ಲೇ ಡೌನ್ಲೋಡ್ ಮಾಡಿ
ಬದಲಿಗೆ ಬಳಕೆದಾರರು ಮಾಡಿದ ರಿಪೋರ್ಟ್ ಹಾಗೂ ಹೊಸ ಐಟಿ ನಿಯಮಗಳಿಗೆ ತಕ್ಕಂತೆ ವಾಟ್ಸಾಪ್ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಭಾರತದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಪ್ರತಿ ತಿಂಗಳು ಬಳಕೆದಾರರ ಸುರಕ್ಷತೆಗಾಗಿ ತಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ವರದಿ ನೀಡುವುದು ಕಡ್ಡಾಯವಾಗಿದೆ. ಈ ವರದಿಯಲ್ಲಿ ವಾಟ್ಸಾಪ್ನ ಈ ವರದಿಯು ಬಹಿರಂಗವಾಗಿದೆ.
ಜನವರಿ ತಿಂಗಳಲ್ಲೇ ವಾಟ್ಸಾಪ್ ಖಾತೆ ಬ್ಯಾನ್
ಇನ್ನು ಭಾರತ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ನಿಯಮ 4(1)(ಡಿ) ಅಡಿಯಲ್ಲಿ ವಾಟ್ಸಾಪ್ ಈ ಅಕೌಂಟ್‌ಗಳನ್ನು ಬ್ಯಾನ್ ಮಾಡಿದೆ. ಜನವರಿ 1 ರಿಂದ ಜನವರಿ 31, 2023 ರ ನಡುವೆ ಈ ಅಕೌಂಟ್‌ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ವಾಟ್ಸಾಪ್ ಹೇಳಿದೆ. ಬಳಕೆದಾರರಿಂದ ಸ್ವೀಕರಿಸಿದ ರಿಪೋರ್ಟ್ಗಳ ಅನುಸಾರ ಈ ಅಕೌಂಟ್‌ಗಳನ್ನು ಬ್ಯಾನ್ ಮಾಡಲಾಗಿದೆ. ಭಾರತದ ಕಾನೂನುಗಳನ್ನು ಅಥವಾ ವಾಟ್ಸಾಪ್ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣಕ್ಕಾಗಿ ಈ ರೀತಿಯ ಕ್ರಮ ಕೈಗೊಂಡಿರುವುದಾಗಿ ವಾಟ್ಸಾಪ್ ಹೇಳಿದೆ.
ಬಳಕೆದಾರರಿಂದ ರಿಪೋರ್ಟ್ ಬರುವ ಮೊದಲೇ 10 ಲಕ್ಷಕ್ಕೂ ಹೆಚ್ಚು ಅಕೌಂಟ್ ಬ್ಯಾನ್
ಇನ್ನು ವಾಟ್ಸಾಪ್ ಜನವರಿಯಲ್ಲಿ ಬ್ಯಾನ್ ಮಾಡಿರುವ 2,918,000 ಬ್ಯಾನ್ ಅಕೌಂಟ್‌ಗಳಲ್ಲಿ ಯಾವುದೇ ರಿಪೋರ್ಟ್‌ಗಳನ್ನು ಸ್ವೀಕರಿಸುವ ಮೊದಲು ಸುಮಾರು 1,038,000 ಖಾತೆಗಳನ್ನು ಬ್ಯಾನ್ ಮಾಡಿರುವುದಾಗಿ ವರದಿಯಾಗಿದೆ. ಇನ್ನು ಜನವರಿ ತಿಂಗಳು ಮುಗಿಯುವ ಹೊತ್ತಿಗೆ ಬ್ಯಾನ್ ಆದ ಅಕೌಂಟ್ಗಳ ಸಂಖ್ಯೆ 29 ಲಕ್ಷಕ್ಕೆ ಏರಿದೆ.
ಬಳಕೆದಾರರ ಸುರಕ್ಷತೆಗಾಗಿ ಈ ಕ್ರಮ
ಇನ್ನು ವಾಟ್ಸಾಪ್ ಈ ನಿರ್ಧಾರ ಬಳಕೆದಾರರಿಗೆ ಇತ್ತೀಚೆಗೆ ಆಗುತ್ತಿರುವ ವಂಚನೆಯನ್ನು ಗಮನಿಸಿ ಕೈಗೊಂಡಿದೆ. ಇತ್ತೀಚೆಗಂತೂ ವಾಟ್ಸಾಪ್ ಅನ್ನು ದುರುಪಯೋಗ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಎಲ್ಲ ವಿಷಯಗಳನ್ನು ಗಮನಿಸಿದ ವಾಟ್ಸಾಪ್ ಕಂಪೆನಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳ್ಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ