ಭಾರತ ದೇಸಿ ಆ್ಯಪ್ಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಆ್ಯಪ್ಗಳು ಗ್ರಾಹಕರ ಬಳಕೆಗೆ ಸಿಗುತ್ತಿದೆ. ಜೊತೆಗೆ ಎಲ್ಲಾ ಕೆಲಸಗಳು ಆ ಆ್ಯಪ್ಗಳಿಂದ ಸರಾಗವಾಗಿ ಆಗುತ್ತಿದೆ. ಕಚೇರಿಗೆ ತೆರಳಿ ಮಾಡಬೇಕಾಗಿದ್ದ ಕೆಲಸಗಳು ಆ್ಯಪ್ಗಳ ಮೂಲಕ ನಿಮಿಷಾರ್ಧದಲ್ಲೇ ಮಾಡಬಹುದಾಗಿದೆ. ಇದೀಗ ಸರ್ಕಾರ ಮತ್ತೊಂದು ದೇಸಿ ಆ್ಯಪ್ ಪರಿಚಯಿಸಿದೆ. ನೂತನ ಆ್ಯಪ್ಗೆ ‘ಮೊಬೈಲ್ ಸೇವಾ ಸ್ಟೋರ್’ ಎಂದು ಹೆಸರಿಟ್ಟಿದೆ.
ಕೇಂದ್ರ ಸರ್ಕಾರ ಪರಿಚಯಿಸಿದ ‘ಮೊಬೈಲ್ ಸೇವಾ ಸ್ಟೋರ್’ ಆ್ಯಪ್ ಭಾರತೀಯರಿಗೆ ಹೆಚ್ಚು ಉಪಯೋಗವಾಗಲಿದೆ. ಆ್ಯಂಡ್ರಾಯ್ಡ್ ಬಳಕೆದಾರರು ಆ್ಯಪ್ ಬೇಕಾದಲ್ಲಿ ಗೂಗಲ್ ಪ್ಲೇ ಸ್ಟೋರ್ಗೆ ತೆರಳಿ ಡೌನ್ಲೋಡ್ ಮಾಡಬೇಕಿತ್ತು. ಐಫೋನ್ ಪ್ರಿಯರು ಆ್ಯಪ್ ಸ್ಟೋರ್ಗೆ ತೆರಳಬೇಕಾಗಿತ್ತು. ಆದರೀಗೆ ಅದಕ್ಕೆ ಪರ್ಯಾಯವೆಂಬಂತೆ ಕೇಂದ್ರ ಸರ್ಕಾರ ‘ಮೊಬೈಲ್ ಸೇವಾ ಸ್ಟೋರ್ ಆ್ಯಪ್’ ಅನ್ನು ಪರಿಚಯಿಸಿದೆ.
ಮೊಬೈಲ್ ಸೇವಾ ಆ್ಯಪ್ ಸ್ಟೋರ್ಗಾಗಿ ನಾನಾ ಹೊಸ ಅಪ್ಲಿಕೇಶನ್ ಅನ್ನು ತಯಾರಿಸಲು ಸರ್ಕಾರ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಭಾರತೀಯರು ಬೇಕೆನಿಸಿದ ಎಲ್ಲಾ ಆ್ಯಪ್ಗಳನ್ನು ಮೊಬೈಲ್ ಸೇವಾ ಸ್ಟೋರ್ ಮೂಲಕ ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ
ಇತ್ತೀಚೆಗೆ ಜನರಿಗೆ ಪಡಿತರ ಸುಲಭವಾಗಿ ಪಡೆಯಲು ಒನ್ ನೇಷನ್ ಒನ್ ರೇಷನ್ ಕಾರ್ಡ್ಗೆ ಸಂಬಂಧಿಸಿ ‘ಮೇರಾ ರೇಷನ್’ ಹೆಸರಿನ ಸ್ಮಾರ್ಟ್ಫೋನ್ ಆ್ಯಪ್ ಅನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ವಲಸೆ ಹೋಗುವವರಿಗೆ ಅಥವಾ ಒಂದು ರಾಜ್ಯದಿಂದ ಬೇರೆ ರಾಜ್ಯಕ್ಕೆ ಕೆಲಸಕ್ಕೆಂದು ತೆರಳಯವವರಿಗೆ ‘ಮೇರಾ ರೇಷನ್’ ಆ್ಯಪ್ ಬಹಳ ಸಹಾಯಕವಾಗಲಿದೆ. ಮಾತ್ರವಲ್ಲದೆ, ಹತ್ತಿರದ ನ್ಯಾಯ ಬೆಲೆ ಅಂಗಡಿಯಿಂದ ಪಡಿತರ ಧಾನ್ಯಗಳನ್ನು ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ