ಟವರ್ ಪಕ್ಕದಲ್ಲೇ ಇದ್ದರು ಮೊಬೈಲ್​ನಲ್ಲಿ ನೆಟ್​ವರ್ಕ್​ ಸಿಕ್ತಿಲ್ವಾ?; ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

ಸಾಮಾನ್ಯವಾಗಿ ಮೊಬೈಲ್​ ಬಳಕೆದಾರರು ಮನೆಯ ಮೇಲ್ಬಾಗದಲ್ಲೇ ಮೊಬೈಲ್​​ ಟವರ್​ ಇದ್ದರು ಮನೆಯೊಳಗಡೆ ನೆಟ್​ವರ್ಕ್​ ಸಿಗುತ್ತಿಲ್ಲಾ ಅಂತ ಕೊರಗುತ್ತಾರೆ. ಇನ್ನೂ ಕೆಲವರು ನೆಟ್​ವರ್ಕ್​ ಸಿಗುತ್ತಿಲ್ಲ ಅನ್ನೋ ಕಾರಣಕ್ಕಾಗಿ ಮೊಬೈಲ್​ ಫೋನ್​ ಅಥವಾ ಸಿಮ್ ಕಾರ್ಡ್​​​ ಅನ್ನು ಬದಲಿಸಿಕೊಳ್ಳುತ್ತಾರೆ

news18
Updated:April 19, 2019, 8:00 PM IST
ಟವರ್ ಪಕ್ಕದಲ್ಲೇ ಇದ್ದರು ಮೊಬೈಲ್​ನಲ್ಲಿ ನೆಟ್​ವರ್ಕ್​ ಸಿಕ್ತಿಲ್ವಾ?; ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ
ನೆಟ್​ವರ್ಕ್
  • News18
  • Last Updated: April 19, 2019, 8:00 PM IST
  • Share this:
ಸಾಮಾನ್ಯವಾಗಿ ಮೊಬೈಲ್​ ಬಳಕೆದಾರರು ಮನೆಯ ಮೇಲ್ಬಾಗದಲ್ಲೇ ಮೊಬೈಲ್​​ ಟವರ್​ ಇದ್ದರು ಮನೆಯೊಳಗಡೆ ನೆಟ್​ವರ್ಕ್​ ಸಿಗುತ್ತಿಲ್ಲಾ ಅಂತ ಕೊರಗುತ್ತಾರೆ. ಇನ್ನೂ ಕೆಲವರು ನೆಟ್​ವರ್ಕ್​ ಸಿಗುತ್ತಿಲ್ಲ ಅನ್ನೋ ಕಾರಣಕ್ಕಾಗಿ ಮೊಬೈಲ್​ ಫೋನ್​ ಅಥವಾ ಸಿಮ್ ಕಾರ್ಡ್​​​ ಅನ್ನು ಬದಲಿಸಿಕೊಳ್ಳುತ್ತಾರೆ. ಇಂತಹ ಸನ್ನಿವೇಷ ಎದುರಿಸುತ್ತಿರುವ​ವರಿಗೆ ಇಲ್ಲಿದೆ ಉತ್ತರ.

ಟವರ್​ ಮೂಲಕ ಮೊಬೈಲ್​ ನೆಟ್​ವರ್ಕ್​ಗಳನ್ನು ಪಸರಿಸುವ ಕಂಪೆನಿಗಳು ಇಂತಿಷ್ಟೇ ತರಂಗ ಅಲೆಗಳನ್ನು ಹೊರಡಿಸುತ್ತವೆ. ಪ್ರದೇಶಕ್ಕೆ ಅನುಗುಣವಾಗಿ ಹಾಗೂ ನಿಯಮಾನುಸಾರ ನೆಟ್​ವರ್ಕ್​ ಬ್ಯಾಂಡ್​ ವಿಡ್ತ್​ಗಳು ಮೆಗಾಹಟ್ಸ್​ ಮೂಲಕ ತರಂಗವನ್ನು ನೀಡುತ್ತದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಎದುರು ವಾರಣಾಸಿಯಿಂದ ಪ್ರಿಯಾಂಕ ಗಾಂಧಿ ಕಣಕ್ಕೆ?

ಸಾಮನ್ಯವಾಗಿ ಮೊಬೈಲ್​ ನೆಟ್​ವರ್ಕ್​ಗಳು 2100, 1100 ಮೆಗಾಹಟ್ಸ್​ಗಳಲ್ಲಿ ನೆಟ್​​ವರ್ಕ್​ ಅನ್ನು ನೀಡುತ್ತದೆ. ಅತೀ ಹೆಚ್ಚು ಬ್ಯಾಂಡ್​ ವಿಡ್ತ್​ ಹೊಂದಿರುವ ಟವರ್​ಗಳು ದೂರದ ಪ್ರದೇಶಕ್ಕೆ ನೆಟ್​ವರ್ಕ್​ ದೊರೆಯುವಂತೆ ಜೋಡಿಸಿರುತ್ತಾರೆ. ಆದರೆ ಇವುಗಳಿಂದ ಹತ್ತಿರ ಪ್ರದೇಶಗಳಿಗೆ ನೆಟ್​ವರ್ಕ್​ ಸಿಗುವುದು ತೀರಾ ಕಡಿಮೆ. ಇದರಿಂದ ಮನೆಯ ಮೇಲ್ಬಾಗದಲ್ಲಿ ಟವರ್​ ಇದ್ದರು ಮನೆಯೊಳಗಡೆ ನೆಟ್​ವರ್ಕ್​ ಸಮಸ್ಯೆ ಎದುರಿಸಬೇಕಾಗುತ್ತದೆ.

ಇನ್ನೂ ಕಡಿಮೆ ಬ್ಯಾಂಡ್​ ವಿಡ್ತ್​ ಹೊಂದಿರುವ ಮೊಬೈಲ್​ ನೆಟ್​ವರ್ಕ್​ಗಳು ಮನೆಯೊಳಗಿನ ಮೂಲೆ ಮೂಲೆಯಲ್ಲೂ ನೆಟ್​ವರ್ಕ್​ ಅನ್ನು ಪಸರಿಸುತ್ತದೆ. ಅನೇಕ ಮೊಬೈಲ್​ ಟವರ್​ಗಳು ಹೆಚ್ಚಿನ ಬ್ಯಾಂಡ್​ ವಿಡ್ತ್​​ ಹೊಂದಿರುವುದರಿಂದ ಮೊಬೈಲ್ ಬಳಕೆದಾರರು​ ನೆಟ್​ವರ್ಕ್​ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಕೃಪೆ: ಟೆಕ್​ ಇನ್​ ಕನ್ನಡ
First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading