ಯಾವುದೇ ಒಂದು ಸ್ಮಾರ್ಟ್ಫೋನ್ (Smasrtphone) ಖರೀದಿ ಮಾಡುವಾಗ ಆರಂಭದಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಕೆಲವು ಸಮಯಗಳು ಕಳೆದಾಗ ನಿಮ್ಮ ಮೊಬೈಲ್ ಬಳಕೆ ಕೂಡ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ನಿಮ್ಮ ಮೊಬೈಲ್ (Mobile) ಸ್ವಲ್ಪ ಮಟ್ಟಿಗೆ ಹ್ಯಾಂಗ್ (Hang) ಆಗಲು ಪ್ರಾರಂಭಿಸುತ್ತದೆ. ಇನ್ನೂ ಕೆಲವರು ಸೋಶಿಯಲ್ ಮೀಡಿಯಾಗಳನ್ನು (Social Media) ಬಳಕೆ ಮಾಡುತ್ತಿರುತ್ತಾರೆ. ಆದರೆ ಈ ಸೋಶಿಯಲ್ ಮೀಡಿಯಾಗಳಿಂದ ಅದರಲ್ಲಿ ಶೇರ್ ಮಾಡುವಂತಹ ವಿಡಿಯೋ, ಫೋಟೋಗಳಿಂದ ದೊಡ್ಡದಾಗಿ ಸ್ಟೋರೇಜ್ (Storage) ತುಂಬಿಕೊಳ್ಳುತ್ತದೆ. ಆ ಸಂದರ್ಭಗಳಲ್ಲಿ ಮೊಬೈಲ್ಕೂಡ ಸರಿಯಅಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ಇದನ್ನು ಕ್ಲಿಯರ್ ಮಾಡುವ ಮೂಲಕ ಸ್ಮಾರ್ಟ್ಫೋನ್ ವೇಗವಾಗಿ ಕೆಲಸ ಮಾಡುವಂತೆ ಮಾಡ್ಬಹುದು.
ವಾಟ್ಸಪ್ ಸ್ಟೋರೇಜ್ ಚೆಕ್ ಮಾಡಿ
ಯಾವುದೇ ಡೇಟಾವನ್ನು ನಿಮ್ಮ ಮೊಬೈಲ್ನಿಂದ ಡಿಲೀಟ್ ಮಾಡುವ ಮೊದಲು, ವಾಟ್ಸಪ್ ಅಪ್ಲಿಕೇಶನ್ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಎಷ್ಟು ಸ್ಟೋರೇಜ್ ಅನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಚೆಕ್ ಮಾಡಿ. ಇದನ್ನು ಚೆಕ್ ಮಾಡುವ ಮೂಲಕ ಇಂಟರ್ನಲ್ ಸ್ಟೋರೇಜ್ ಅನ್ನು ಕ್ಲಿಯರ್ ಮಾಡಬಹುದು. ಅದಕ್ಕೂ ಮುನ್ನ ವಾಟ್ಸಾಪ್ ಡೇಟಾವನ್ನು ಪರಿಶೀಲಿಸಬೇಕು. ವಾಟ್ಸಾಪ್ ಡೇಟಾ ನೋಡಲು, ಮೊದಲು ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ್ ಆ್ಯಪ್ ಓಪನ್ ಮಾಡ್ಬೇಕು.
ಇದನ್ನೂ ಓದಿ: ಜನಪ್ರಿಯ ’ಕೂ’ ಆ್ಯಪ್ನ ಟ್ವಿಟರ್ ಅಕೌಂಟ್ ಡಿಲೀಟ್! ಕಾರಣ ಏನು ಗೊತ್ತಾ?
ಈ ನಂತರ ವಾಟ್ಸಪ್ ಸೆಟ್ಟಿಂಗ್ಸ್ಗೆ ಹೋಗಿ, ಅಲ್ಲಿ ಸ್ಟೋರೇಜ್ ಮತ್ತು ಡೇಟಾ ಆಯ್ಕೆಯನ್ನು ಓಪನ್ ಮಾಡಿ. ಅದರ ನಂತರ ಮ್ಯಾನೇಜ್ ಸ್ಟೋರೇಜ್ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಇಲ್ಲಿ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸಪ್ ಎಷ್ಟು ಸ್ಟೋರೇಜ್ ಅನ್ನು ಬಳಸಿಕೊಂಡಿದೆ ಎಂದು ನೋಡಬಹುದಾಗಿದೆ.
ವಾಟ್ಸಪ್ನ ಮೀಡಿಯಾ ಫೈಲ್ಗಳನ್ನು ಡಿಲೀಟ್ ಮಾಡುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ