ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಸಾಧನಗಳಲ್ಲಿ ಮೊಬೈಲ್ (Mobile) ಕೂಡ ಒಂದು. ಈ ಸಾಧನ ಪ್ರತಿಯೊಬ್ಬರ ಅಗತ್ಯ ಅಂಶ ಎಂದರೂ ತಪ್ಪಾಗಲಾರದು. ಯಾವುದೇ ಕೆಲಸಗಳನ್ನು ಆನ್ಲೈನ್ (Online) ಮೂಲಕ ಕ್ಷಣಮಾತ್ರದಲ್ಲಿ ಈ ಸ್ಮಾರ್ಟ್ಫೋನ್ ಮೂಲಕ ಮಾಡಿಮುಗಿಸಬಹುದಾಗಿದೆ. ಅದೇ ರೀತಿ ಯಾವುದೇ ಗೇಮ್ಗಳನ್ನು ಆಡಲು, ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡಲು ತುಂಬಾನೇ ಸಹಕಾರಿಯಾಗುತ್ತದೆ. ಇತ್ತೀಚಿನ ಸ್ಮಾರ್ಟ್ಫೋನ್ಗಳ ಫೀಚರ್ಸ್ ಬಗ್ಗೆ ಮಾತನಾಡುವುದಾರೆ, ಒಂದು ರೀತಿಯಲ್ಲಿ ಇದನ್ನು ಮಿನಿ ಲ್ಯಾಪ್ಟಾಪ್ ಅಂತಾನೇ ಕರೆಯಬಹುದು. ಆದರೆ ಕೆಲವೊಂದು ಬಾರಿ ಸ್ಮಾರ್ಟ್ಫೋನ್ಗಳ (Smartphone) ಬ್ಯಾಟರಿ ಬ್ಯಾಕಪ್ ಬೇಗನೆ ಖಾಲಿಯಾಗುತ್ತದೆ ಎಂಬ ಸುದ್ದಿ ಕೇಳಿಬರುತ್ತಿದೆ. ಸ್ಮಾರ್ಟ್ಫೋನ್ನ ಬಳಕೆ ಎಷ್ಟೇ ಕಡಿಮೆ ಮಾಡಿದ್ರೂ ಬ್ಯಾಟರಿ (Battery) ತನ್ನಷ್ಟಕ್ಕೆ ಖಾಲಿಯಾಗುತ್ತದೆ ಎಂದು ಹೇಳುತ್ತಾರೆ.
ಹೌದು, ಕೆಲವೊಂದು ಸ್ಮಾರ್ಟ್ಫೋನ್ಗಳು ಸರಿಯಾದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುವುದಿಲ್ಲ. ಇನ್ನು ಕೆಲವರ ಅತಿಯಾದ ಬಳಕೆಯಿಂದ ಸ್ಮಾರ್ಟ್ಫೋನ್ನ ಬ್ಯಾಟರಿ ಬೇಗನೆ ಹಾಳಾಗಲು ಕಾರಣವಾಗುತ್ತದೆ. ಆದರೆ ಕೆಲವರು ಹೋದಲ್ಲೆಲ್ಲಾ ಸಿಕ್ಕ ಸಿಕ್ಕ ಚಾರ್ಜರ್ನಲ್ಲಿ ತಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುತ್ತಾರೆ. ಇದರಿಂದ ಮೊಬೈಲ್ನಲ್ಲಾಗುವ ಸಮಸ್ಯೆಗಳೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಬೇರೆ ಚಾರ್ಜ್ ಅನ್ನು ಬಳಕೆ ಮಾಡ್ಬಾರ್ದು
ನಿಮ್ಮ ಸ್ಮಾರ್ಟ್ಫೋನ್ ಅನ್ನು ಚಾರ್ಜ್ ಮಾಡುವಾಗ ಫೋನ್ನೊಂದಿಗೆ ನೀಡಿರುವ ಚಾರ್ಜರ್ ಅನ್ನೇ ಬಳಕೆ ಮಾಡಬೇಕು. ನಿಮ್ಮ ಚಾರ್ಜರ್ ಇಲ್ಲ ಅಂತ ಹೇಳಿ ಬೇರೆ ಕಂಪೆನಿಯ ಅಥವಾ ವಿಭಿನ್ನ ರೀತಿಯ ಚಾರ್ಜರ್ ಮೂಲಕ ನಿಮ್ಮ ಮೊಬೈಲ್ ಅನ್ನು ಚಾರ್ಜ್ನಲ್ಲಿ ಇಡಬೇಡಿ.
ಒಂದು ವೇಳೆ ನೀವು ಸಿಕ್ಕ ಸಿಕ್ಕ ಚಾರ್ಜರ್ ಮೂಲಕ ನಿಮ್ಮ ಫೋನ್ ಅನ್ನು ಚಾರ್ಜ್ನಲ್ಲಿ ಇಟ್ಟರೆ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ಮೊಬೈಲ್ ಇನ್ನಷ್ಟು ಹೀಟ್ ಆಗಲು ಪ್ರಾರಂಭವಾಗಬಹುದು.
ದಿನದಲ್ಲಿ 2 ರಿಂದ 3 ಬಾರಿ ಮಾತ್ರ ಚಾರ್ಜ್ ಮಾಡ್ಬೇಕು
ಯಾರೇ ಆಗಲಿ ತಮ್ಮ ಸ್ಮಾರ್ಟ್ಫೋನ್ ಅನ್ನು ದಿನದಲ್ಲಿ ಪದೇ ಪದೇ ಚಾರ್ಜ್ನಲ್ಲಿ ಇಡಬಾರದು. ಹಾಗೆ ದಿನಕ್ಕೆ ಒಂದೇ ಬಾರಿ ಇಡಬೇಕೆನ್ನುವ ರೂಲ್ಸ್ ಸಹ ಇಲ್ಲ. ಆದರೆ ಒಂದು ದಿನದಲ್ಲಿ 2 ರಿಂದ ಮೂರು ಬಾರಿ ಇಡುವುದರಿಂದ ನಿಮ್ಮ ಮೊಬೈಲ್ನ ಬ್ಯಾಟರಿಗೆ ಅಷ್ಟೊಂದು ಧಕ್ಕೆ ಉಂಟಾಗುವುದಿಲ್ಲ.
ಹಾಗೆಯೇ ಸಾಧ್ಯವಾದಷ್ಟು ಮೊಬೈಲ್ನ ಬ್ಯಾಟರಿ 60% ರಿಂದ 75% ಶೇಕಡಾದ ನಡುವೆ ಇಟ್ಟುಕೊಳ್ಳುವಂತೆ ಬಳಕೆ ಮಾಡಿ. ಅದೇ ರೀತಿ ಅನಿವಾರ್ಯ ಎಂದಾಗ ಮಾತ್ರ ಚಾರ್ಜ್ ಮಾಡಿ.
ಮೊಬೈಲ್ ಚಾರ್ಜ್ನಲ್ಲಿರುವಾಗ ಯಾವತ್ತೂ ಬಳಸಬಾರದು
ಹೆಚ್ಚಿನ ಜನರು ಮಾಡುವಂತಹ ತಪ್ಪೆಂದರೆ ಮೊಬೈಲ್ ಚಾರ್ಜ್ನಲ್ಲಿರುವಾಗ ಬಳಸುವುದು. ಯಾವತ್ತೂ ಯಾವುದೇ ತುರ್ತು ಸಂದರ್ಭಗಳಿರಲಿ ಸ್ಮಾರ್ಟ್ಫೋನ್ಗಳು ಚಾರ್ಜ್ನಲ್ಲಿರುವಾಗ ಕಾಲ್ನಲ್ಲಿ ಮಾತನಾಡುವುದು, ಚಾಟಿಂಗ್ ಮಾಡುವುದು ಈ ರೀತಿಯ ಕಾರ್ಯಗಳನ್ನೆಲ್ಲಾ ಮಾಡಲೇ ಬಾರದು.
ಇದರಿಂದ ಮೊಬೈಲ್ಗಳು ಹೀಟ್ ಆಗುವ ಸಂದರ್ಭಗಳು ಜಾಸ್ತಿ ಇರುತ್ತದೆ. ಆಗ ಮೊಬೈಲ್ನಿಂದ ಬಳಕೆದಾರರಿಗೆ ಏನಾದರು ಅಪಾಯ ಸಂಭವಿಸಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಸ್ಮಾರ್ಟ್ಫೋನ್ಗಳು ಚಾರ್ಜ್ನಲ್ಲಿರುವಾಗ ಬಳಕೆ ಮಾಡಬಾರದು.
ಇದನ್ನೂ ಓದಿ: ಜಿಯೋದಿಂದ ಮತ್ತೆ 16 ನಗರಗಳಲ್ಲಿ 5ಜಿ ಸೇವೆ ಆರಂಭ! ಎಲ್ಲೆಲ್ಲಿ?
ಬೆಳಗ್ಗೆವರೆಗೂ ಮೊಬೈಲ್ ಅನ್ನು ಚಾರ್ಜ್ನಲ್ಲಿಡಬಾರದು
ಎಷ್ಟೋ ಜನರಿಗೆ ರಾತ್ರಿ ಮೊಬೈಲ್ ಅನ್ನು ಚಾರ್ಜ್ನಲ್ಲಿಟ್ಟು ಮಲಗುವ ಅಭ್ಯಾಸವಿರುತ್ತದೆ. ಇದರಿಂದ ನಿಮ್ಮ ಮೊಬೈಲ್ ಓವರ್ ಚಾರ್ಜ್ ಆಗಿ ಹೀಟ್ ಆಗುವಂತಹ ಸಂದರ್ಭಗಳು ಬರುತ್ತದೆ. ಈ ರೀತಿ ಓವರ್ ಚಾರ್ಜ್ ಮಾಡಿದ್ರೆ ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಬ್ಯಾಕಪ್ ಹಾಳಾಗಲು ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ