• Home
 • »
 • News
 • »
 • tech
 • »
 • Cloth Charging: ಬಟ್ಟೆಯಿಂದಲೇ ಮೊಬೈಲ್ ಚಾರ್ಜ್‌ ಮಾಡಿಕೊಳ್ಳಬಹುದಂತೆ! ಹೇಗೆ ಅಂತೀರಾ? ಇಲ್ಲಿದೆ ನೋಡಿ

Cloth Charging: ಬಟ್ಟೆಯಿಂದಲೇ ಮೊಬೈಲ್ ಚಾರ್ಜ್‌ ಮಾಡಿಕೊಳ್ಳಬಹುದಂತೆ! ಹೇಗೆ ಅಂತೀರಾ? ಇಲ್ಲಿದೆ ನೋಡಿ

battery charge with clothes

battery charge with clothes

ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ಗೆ ಚಾರ್ಜರ್‌ ಬಳಸಬೇಕಿಲ್ಲ. ಇನ್ನು ಮುಂದೆ ತಾವು ಧರಿಸುವ ಬಟ್ಟೆ ಮೂಲಕವೂ ಚಾರ್ಜ್‌ ಮಾಡಬಹುದು. ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

 • Share this:

  ಇತ್ತೀಚಿನ ತಂತ್ರಜ್ಞಾನ (Technology) ಯುಗ ಬಹಳಷ್ಟು ಮುಂದುವರೆದಿದೆ. ಈಗ ಯಾವುದೇ ರೀತಿಯಲ್ಲೂ ತಂತ್ರಜ್ಞಾನಗಳು ಬರಲು ಸಾಧ್ಯವಿದೆ. ಇನ್ನುಮುಂದೆ  ತಂತ್ರಜ್ಞಾನಗಳು ಯಾವ ರೀತಿಗಳಲ್ಲೆಲ್ಲಾ ಬರುತ್ತವೆ ಎಂದು ಊಹಿಸಲೂ ಸಾಧ್ಯವಿಲ್ಲ. ಕೆಲವು ತಂತ್ರಜ್ಞಾನಗಳು ನಮ್ಮ ಜೀವನವನ್ನೇ ಬದಲಾಯಿಸಿವೆ. ಪ್ರಸ್ತುತ ಸ್ಮಾರ್ಟ್‌ಫೋನ್ (Smartphone) ನಮ್ಮೆಲ್ಲರ ಜೀವನದ ಮುಖ್ಯ ಭಾಗವಾಗಿದೆ ಎನ್ನಬಹುದು. ಆದರೆ ಈಗ ಸ್ಮಾರ್ಟ್‌ಫೋನಿನ ಅತಿಯಾದ ಬಳಕೆಯಿಂದ ಚಾರ್ಜ್‌ (Charge) ಉಳಿಯುವುದಿಲ್ಲ. ಇನ್ನು ಕೆಲವು ಸ್ಮಾರ್ಟ್‌ಫೋನಿನ ಬ್ಯಾಟರಿಯೇ (Battery) ಹಾಳಾಗಿ ಬಿಡುತ್ತದೆ. ಇದಕ್ಕಾಗಿ ಒಂದು ‌ಹೊಸ ತಂತ್ರಜ್ಞಾನ ಬರುತ್ತಿದೆ. ಇದು ಯಾರೂ ಊಹಿಸಲಾಗದ ತಂತ್ರಜ್ಞಾನವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮೊಬೈಲ್‌ನ ಬ್ಯಾಟರಿಯ (Mobile Battery) ಸುರಕ್ಷತೆಗಾಗಿ ಪವರ್‌ ಬ್ಯಾಂಕ್‌ (Power bank)  ಅಥವಾ ಇನ್ನಿತರ ಸಾಧನಗಳನ್ನು ಇಟ್ಟುಕೊಳ್ಳುತ್ತಾರೆ.


  ಆದರೆ ಇನ್ನು ಮುಂದೆ ನಿಮಗೆ ಈ ಸಮಸ್ಯೆಯೇ ಇರುವುದಿಲ್ಲ. ಮಾರುಕಟ್ಟೆಯಲ್ಲಿ E-Textile ಎಂಬ ಹೊಸ ತಂತ್ರಜ್ಞಾನ ಬಂದಿದ್ದು ನಿಮ್ಮ ಬಟ್ಟೆಗಳಿಂದಲೇ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಬಹುದಾಗಿದೆ. ವಿಶೇಷ ಎಂದರೆ, ಕಣ್ಣು ಮಿಟುಕಿಸುವುದರೊಳಗೆ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಫುಲ್ ಆಗುತ್ತೆ. ಏನಿದು ಸ್ಪೆಷಲ್‌ ಫೀಚರ್‌ ಇಲ್ಲಿದೆ ಮಾಹಿತಿ.


  ಏನಿದು ಇ-ಟೆಕ್ನಾಲಜಿ :


  ಇದೊಂದು ಈಗಿನ ಟೆಕ್ನಾಲಜಿ ಯುಗದಲ್ಲಿರುವಂತಹ ಉತ್ತಮ ಫೀಚರ್‌ ಆಗಿದೆ.ಇ-ಟೆಕ್ಸ್ಟೈಲ್ ವಾಸ್ತವವಾಗಿ ವಿಶೇಷವಾದ ಬಟ್ಟೆಯಾಗಿದ್ದು ಅದು ಸಾಮಾನ್ಯ ಬಟ್ಟೆಗಳಿಗಿಂತ ತುಂಬಾ ಭಿನ್ನವಾಗಿದೆ. ಈ ಬಟ್ಟೆ ಕೇವಲ ಧರಿಸಲು ಮಾತ್ರವಲ್ಲ ಇದರ ವಿಶೇಷ ಫೀಚರ್ ಬಗ್ಗೆ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ಬಟ್ಟೆಯ ವಿಶೇಷತೆಯೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ಮಾಡಬಲ್ಲದು.


  ಇದನ್ನೂ ಓದಿ: WhatsApp ತರುತ್ತಿದೆ ಮತ್ತೊಂದು ಹೊಸ ಫೀಚರ್ಸ್, ಒಮ್ಮೆ ಸೆಂಡ್‌ ಮಾಡಿದ ಮೆಸೇಜ್‌ ಮತ್ತೆ ಎಡಿಟ್‌ ಮಾಡ್ಬಹುದಂತೆ!


  ಹೇಗೆಂದರೆ ಇದು ಮೊದಲಿಗೆ ಸೌರಶಕ್ತಿಯನ್ನು ತನ್ನೊಳಗೆ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ನಿಮಗೆ ಅಗತ್ಯವಾದಾಲ ಇದರ ಸಹಾಯದಿಂದ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ ಮಾಡಿಕೊಳ್ಳಬಹುದು. ಇದು ಸ್ವಲ್ಪ ಮಟ್ಟಿಗೆ ದೊಡ್ಡ ಗಾತ್ರದಲ್ಲಿದ್ದು ಹೆಚ್ಚು ಸೌರಶಕ್ತಿಯನ್ನು ತನ್ನೊಳಗೆ ಸಂಗ್ರಹಿಸಿ ಇಡುವ ಸಾಮರ್ಥ್ಯವಿದೆ. ಈ ರೀತಿಯ ಸಾಮರ್ಥ್ಯ ಹೊಂದಿರುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ ಮಾಡಲು ಇನ್ನಷ್ಟು ಅವಕಾಶಗಳಿರುತ್ತವೆ.


  Mobile can be charged with clothes See how see here
  charging cloth


  ಈ ತಂತ್ರಜ್ಞಾನ ಎಲ್ಲಿಂದ ಬಂತು ?


  ಈ ವಿಶೇಷ ಬಟ್ಟೆಯನ್ನು ನಾಟಿಂಗ್ಹ್ಯಾಮ್ ಟ್ರೆಂಡ್‌ ಎಂಬ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆವಿಷ್ಕಾರ ಮಾಡಿದ್ದಾರೆ. ಇಲ್ಲಿಯವರೆಗೆ ಈ ರೀತಿಯ ಸುದ್ದಿಗಳನ್ನು ಜನರು ಕೇವಲ ಕಲ್ಪನೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಇದು ನಿಜವಾಗಿದೆ. ಈ ವಿಶೇಷ ಫ್ಯಾಬ್ರಿಕ್ ಸೌರ ಶಕ್ತಿಯನ್ನು ತನ್ನೊಳಗೆ ಸಂಗ್ರಹಿಸುತ್ತದೆ, ಇದರಿಂದ ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಈ ತಂತ್ರಜ್ಞಾನ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಬಡ್‌ಗಳನ್ನು ಚಾರ್ಜ್‌ ಮಾಡುವ ಸಾಮರ್ಥ್ಯವನ್ನು ಹೊಂದಿದೆ.


  ಈ ಬಟ್ಟೆಯಲ್ಲಿ ಸೌರ ಕೋಶಗಳನ್ನು ಅಳವಡಿಸಲಾಗಿದೆ:


  ಈ ವಿಶೇಷ ಬಟ್ಟೆ ಫ್ಯಾಬ್ರಿಕ್ ಸೌರ ಶಕ್ತಿಯನ್ನು ರಕ್ಷಿಸುತ್ತದೆ ಮತ್ತು ಇದಕ್ಕಾಗಿ ವಿಜ್ಞಾನಿಗಳು 1,200 ಸಣ್ಣ ದ್ಯುತಿವಿದ್ಯುಜ್ಜನಕ ಕೋಶಗಳನ್ನು (ಸೌರ ಫಲಕಗಳು) ಬಳಸಿದ್ದಾರೆ. ಸೌರಶಕ್ತಿಯು ಅದರೊಳಗೆ ಚೆನ್ನಾಗಿ ಸಂಗ್ರಹವಾಗಲು ಇದು ಕಾರಣವಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಬಹುದು.


  ಈ ಫ್ಯಾಬ್ರಿಕ್ 400 ಮಿಲಿವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಆದ್ದರಿಂದ ನೀವು ನಿಮ್ಮ ಗ್ಯಾಜೆಟ್‌ಗಳನ್ನು ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈಗ ಈ ತಂತ್ರಜ್ಞಾನದ ಕೆಲಸ ಈಗಲೂ ನಡೆಸುತ್ತಿದ್ದಾರೆ ಆದರೆ ಭವಿಷ್ಯದಲ್ಲಿ ಇದು ಎಲ್ಲರಿಗೂ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.


  ಇದನ್ನೂ ಓದಿ: ನಿಮ್ಮ ಮೊಬೈಲ್​ನಲ್ಲಿದ್ದ ಕಾಂಟಾಕ್ಟ್​​ ಡೀಲಿಟ್ ಆಗಿದ್ಯಾ? ಹೀಗ್ ರಿಕವರಿ ಮಾಡಿಕೊಳ್ಳಿ!


  ಇದು ಈಗಿನ ತಂತ್ರಜ್ಞಾನದಲ್ಲಿ ಅಗುತ್ತಿರುವಂತಹ ಬದಲಾವಣೆಯಾಗಿದೆ. ಎಲ್ಲರೂ ಬದಲಾವಣೆಗಳನ್ನು ಬಯಸುತ್ತಲೇ ಇರುತ್ತಾರೆ. ಅದೇ ಈ ರೀತಿ ಇಈ ಹೊಸ ತಂತ್ರಾಜ್ಞಾನ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಯನ್ನು ತರಬಹುದೆಂಬ ನಂಬಿಕೆಯಿದೆ.

  Published by:Harshith AS
  First published: