CamScanner App: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ ಇದೆಯಾ? ಹಾಗಿದ್ದರೆ ಕೂಡಲೇ ಡಿಲೀಟ್ ಮಾಡಿ!

10 ಕೋಟಿ ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಕ್ಯಾಮ್​ ಸ್ಕ್ಯಾನರ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಲಾಗಿತ್ತು. ಇದೀಗ ಈ ಆ್ಯಪ್​ ಅನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದುಹಾಕಲಾಗಿದೆ.

news18-kannada
Updated:August 29, 2019, 12:20 PM IST
CamScanner App: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ ಇದೆಯಾ? ಹಾಗಿದ್ದರೆ ಕೂಡಲೇ ಡಿಲೀಟ್ ಮಾಡಿ!
ಸಾಂದರ್ಭಿಕ ಚಿತ್ರ
news18-kannada
Updated: August 29, 2019, 12:20 PM IST
ಸ್ಮಾರ್ಟ್​ಫೋನ್​ ನಮ್ಮ ಕೈಗೆ ಬಂದ ನಂತರ ಜೀವನಶೈಲಿಯೇ ಬದಲಾಗಿದೆ. ಬೆರಳ ತುದಿಯಲ್ಲಿ ಇಡೀ ಜಗತ್ತೇ ಸಿಗುತ್ತಿದೆ. ರೀಚಾರ್ಜ್​, ಟಿಕೆಟ್ ಬುಕಿಂಗ್, ಹಣ ವರ್ಗಾವಣೆ, ಬಿಲ್ ಸಂದಾಯ ಎಲ್ಲದಕ್ಕೂ ಜನರು ಮೊಬೈಲನ್ನೇ ಅವಲಂಬಿಸತೊಡಗಿದ್ದಾರೆ. ಮೊಬೈಲ್​ ತುಂಬ ನಮಗೆ ಅಗತ್ಯವಿರುವ, ಇಲ್ಲದ ಆ್ಯಪ್​ಗಳೇ ತುಂಬಿರುತ್ತವೆ. ಟ್ವಿಟ್ಟರ್, ಫೇಸ್​ಬುಕ್, ಇನ್​ಸ್ಟಾಗ್ರಾಂ, ವಾಟ್ಸಾಪ್, ಯೂಟ್ಯೂಬ್, ಫೋನ್ ಪೇ, ಗೂಗಲ್ ಪೇ, ಪೇಟಿಎಂನಂತಹ ಅಗತ್ಯ ಆ್ಯಪ್​ಗಳ ಜೊತೆಗೆ ವಿಡಿಯೋ ಕಟರ್, ಆಡಿಯೋಕಟರ್, ಟಿಕ್​ಟಾಕ್​ ಮುಂತಾದ ಹೊಸ ಹೊಸ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುತ್ತಲೇ ಇರುತ್ತೇವೆ. ಆದರೆ, ಆ ಆ್ಯಪ್​ಗಳು ನಮ್ಮ ಮೊಬೈಲ್​ನಲ್ಲಿರುವ ಖಾಸಗಿ ವಿಚಾರಗಳನ್ನು ಎಷ್ಟರ ಮಟ್ಟಿಗೆ ಗುಪ್ತವಾಗಿಡುತ್ತವೆ? ಎಂದು ಯೋಚಿಸಿದ್ದೇವಾ?

ಪ್ಲೇಸ್ಟೋರ್​ನಿಂದ ಡೌನ್​ಲೋಡ್ ಮಾಡಿಕೊಳ್ಳುವ ಎಲ್ಲ ಆ್ಯಪ್​ಗಳು ನಮ್ಮ ಕಾಂಟ್ಯಾಕ್ಟ್​, ಫೋಟೋಗ್ಯಾಲರಿಗಳನ್ನು ಆ್ಯಕ್ಸೆಸ್​ ಮಾಡಲು ಅನುಮತಿ ಕೇಳುತ್ತವೆ. ಇದರಿಂದ ನಮ್ಮ ವೈಯಕ್ತಿಕ ಸಂಗತಿಗಳನ್ನು ತಿಳಿದುಕೊಳ್ಳಲು ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ. ಆದರೆ, ನೀವು ಆ್ಯಪ್​ಗಳಿಗೆ ನಿಮ್ಮ ಗ್ಯಾಲರಿಯನ್ನು ಆ್ಯಕ್ಸೆಸ್ ಮಾಡಲು ಅನುಮತಿ ನೀಡದಿದ್ದರೆ ಆ ಆ್ಯಪ್ ಓಪನ್ ಆಗುವುದಿಲ್ಲ. ಹೀಗಾಗಿ, ಅನೇಕರು ಅದರ ನಿಯಮಗಳನ್ನು ಓದದೆ ಅಕ್ಸೆಪ್ಟ್​ ಕೊಡುತ್ತಾರೆ.

ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​; ಕಡಿಮೆ ಬೆಲೆಗೆ ಐಫೋನ್​ ಎಕ್ಸ್​ಆರ್​

ನೀವೇನಾದರೂ ಕ್ಯಾಮ್​ ಸ್ಕ್ಯಾನರ್ ಆ್ಯಪ್ ಡೌನ್​ಲೋಡ್ ಮಾಡಿಕೊಂಡಿದ್ದರೆ ಅದನ್ನು ಡಿಲೀಟ್ ಮಾಡಿ. ಚೀನಾ ಸೆಟ್​ಗಳಲ್ಲಿ ಕೆಲವು ಆ್ಯಪ್​ಗಳನ್ನು ಇನ್​ಬಿಲ್ಟ್​ ಮಾಡಲಾಗಿರುತ್ತದೆ. ಇದರಿಂದ ಕೆಲವು ವೈರಸ್​ಗಳು ನಿಮ್ಮ ಮೊಬೈಲ್ ಪ್ರವೇಶಿಸಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಮೊಬೈಲ್​ನಲ್ಲೇ ಪಿಡಿಎಫ್​ ಮಾಡಿಕೊಳ್ಳಲು ಸುಲಭವಾಗಲೆಂದು ಬಹುತೇಕರು ತಮ್ಮ ಮೊಬೈಲ್​ನಲ್ಲಿ ಕ್ಯಾಮ್ ಸ್ಕ್ಯಾನರ್​ ಆ್ಯಪ್ ಇಟ್ಟುಕೊಂಡಿರುತ್ತಾರೆ. ಆದರೆ, ಈ ಬಗ್ಗೆ ಸೈಬರ್ ಸೆಕ್ಯುರಿಟಿ ಸಂಸ್ಥೆ​ ಎಚ್ಚರಿಕೆ ನೀಡಿದ್ದು, ಕ್ಯಾಮ್​ ಸ್ಕ್ಯಾನರ್​ ಆ್ಯಪ್​ ಅನ್ನು ಪ್ಲೇ ಸ್ಟೋರ್​ನಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

Instagram Bug: ದೋಷವನ್ನು ಕಂಡು ಹಿಡಿದ ಚೆನ್ನೈ ಟೆಕ್ಕಿಗೆ 7,14,900 ರೂ. ಬಹುಮಾನ

ಕ್ಯಾಮ್​ ಸ್ಕ್ಯಾನರ್​ನಲ್ಲಿ ಹಿಡನ್ ವೈರಸ್​ಗಳು ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಪಿಡಿಎಫ್​ ಕ್ರಿಯೇಟರ್​ ಕ್ಯಾಮ್​ ಸ್ಕ್ಯಾನರ್​ ಅನ್ನು ರಿಮೂವ್ ಮಾಡಲಾಗಿದೆ. ಯಾರದ್ದಾದರೂ ಆ್ಯಂಡ್ರಾಯ್ಡ್​ ಮೊಬೈಲ್​ನಲ್ಲಿ ಈ ಆ್ಯಪ್ ಇದ್ದರೆ ಅದನ್ನು ಅನ್​ಇನ್​ಸ್ಟಾಲ್​ ಮಾಡಲು ಸೂಚಿಸಿದೆ. ಈ ಬಗ್ಗೆ ಗೂಗಲ್​ಗೂ ವರದಿ ನೀಡಲಾಗಿದೆ ಎಂದು 'ಇಂಡಿಯನ್ ಎಕ್ಸ್​ಪ್ರೆಸ್' ವರದಿ ಮಾಡಿದೆ.

10 ಕೋಟಿ ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಕ್ಯಾಮ್​ ಸ್ಕ್ಯಾನರ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಲಾಗಿತ್ತು. ಮೊದಲು ಈ ಆ್ಯಪ್​​ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಇತ್ತೀಚಿನ ಅಪ್​ಡೇಟೆಡ್​ ಆ್ಯಪ್​ನಲ್ಲಿ ವೈರಸ್​ಗಳು ಕಂಡುಬಂದಿದೆ ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ತಿಳಿಸಿದೆ.
Loading...

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

 
First published:August 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...