ನಿಮ್ಮ ಮೊಬೈಲ್​ ಮೂರನೇ ಮಹಡಿಯಿಂದ ಬಿದ್ದರು ಏನು ಆಗಲ್ಲ..!

ನಿಮ್ಮ ಮೊಬೈಲ್​ ಎಷ್ಟೇ ಎತ್ತರದಿಂದ ಕೆಳಕ್ಕೆ ಬಿದ್ದರು ಯಾವುದೇ ಹಾನಿಯಾಗದಂತಹ ತಂತ್ರಜ್ನಾನವನ್ನು ಇದರಲ್ಲಿ ಅಳವಡಿಸಿದ್ದು, ಇನ್ನೂ ಮೇಲೆ ಐ ಫೋನ್​ ಬಳಕೆದಾರ ಇಂತಹ ತೊಂದರೆಯಿಂದ ಮುಕ್ತಿ ಸಿಗಲಿದೆ.

Harshith AS | news18
Updated:January 31, 2019, 9:54 PM IST
ನಿಮ್ಮ ಮೊಬೈಲ್​ ಮೂರನೇ ಮಹಡಿಯಿಂದ ಬಿದ್ದರು ಏನು ಆಗಲ್ಲ..!
'ಆ್ಯಡ್​ ಕೇಸ್​‘
Harshith AS | news18
Updated: January 31, 2019, 9:54 PM IST
ಐಫೋನ್​ ​ ಮೊಬೈಲ್​ ಬಳಕೆದಾರರಿಗೆ ಮೊಬೈಲ್​ ಕೈ ಜಾರಿ ಬೀಳುವುದನ್ನು ತಪ್ಪಿಸಲು ಜರ್ಮನಿ ದೇಶದ ಸಂಶೋಧನ ವಿದ್ಯಾರ್ಥಿಗಳು ಹೊಸದಾದ ತಂತ್ರಜ್ನಾನವೊಂದನ್ನು ಕಂಡುಹಿಡಿದಿದ್ದಾರೆ. ನಿಮ್ಮ ಮೊಬೈಲ್​ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದರು ಯಾವುದೇ ಹಾನಿಯಾಗದಂತಹ ತಂತ್ರಜ್ನಾನವನ್ನು ಇದರಲ್ಲಿ ಅಳವಡಿಸಿದ್ದು, ಇನ್ನೂ ಮೇಲೆ ಐಫೋನ್​ ಬಳಕೆದಾರ ಇಂತಹ ತೊಂದರೆಯಿಂದ ಮುಕ್ತಿ ಸಿಗಲಿದೆ.

ಇದನ್ನೂ ಓದಿ:  ಈ ದೇಶದ ಶಾಲಾ ನಿಯಮವನ್ನು ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ..!

ಐಫೋನ್​ ಮೊಬೈಲ್​ ಬಳಕೆದಾರರಿಗೆಂದೆ ಈ ತಂತ್ರಜ್ನಾನವನ್ನು ಕಂಡು ಹಿಡಿಯಲಾಗಿದ್ದು, ಸಂಶೋಧನಕಾರರು 'ಆ್ಯಡ್​ ಕೇಸ್​‘ ಎಂದು ಹೆಸರು ನೀಡಿದ್ದಾರೆ. ಈ ಹಿಂದೆ ಐಫೋನ್​ ಮೊಬೈಲ್​ಗಳು ಕೈ ಜಾರಿ ಬಿದ್ದು ಹಾನಿಯಾಗುದನ್ನು ತಪ್ಪಿಸಲು ಸಂಶೋಧನಕಾರರು ಮೊಬೈಲ್​ಗಾಗಿ ಏರ್​ ಬ್ಯಾಗ್​ ಕಂಡು ಹಿಡಿದಿದ್ದರು. ಏರ್​ ಬ್ಯಾಗ್​ಗಳು ಮೊಬೈಲ್​ಗಳಿಗೆ ಸೂಕ್ತವಲ್ಲವೆಂದು 'ಆ್ಯಡ್​ ಕೇಸ್​‘​ ತಂತ್ರಜ್ನಾನವನ್ನು ಬೆಳಕಿಗೆ ತಂದಿದಿದ್ದಾರೆ.

'ಆ್ಯಡ್​ ಕೇಸ್​‘ ಮೊಬೈಲ್​ಗೆ 360 ಡಿಗ್ರಿಯಲ್ಲಿ ರಕ್ಷಣೆ ನೀಡುವ ತಂತ್ರಾಂಶವನ್ನು ಹೊಂದಿದ್ದು. ಮೊಬೈಲ್​ ಕೈ ಜಾರಿ ಬೀಳುವ ಹಂತದಲ್ಲಿ 'ಆ್ಯಡ್​ ಕೇಸ್​‘ನ ನಾಲ್ಕೂ ರೆಕ್ಕೆಗಳು ಮೊಬೈಲ್​ಗೆ ರಕ್ಷಣೆ ನೀಡುತ್ತದೆ. ಈ ತಂತ್ರಜ್ನಾನವು ಚಾರ್ಜ್​ ಮಾಡುವ ಮೂಲಕ ಕಾರ್ಯ ನಿರ್ವಹಿಸುತ್ತದೆ. ಹಾಗಿದ್ದರೆ ಈ ತಂತ್ರಜ್ನಾನ ನೋಡಲು ಹೇಗಿದೆ ಎಂದು ತಿಳಿದಿದೆಯಾ..?  ಆ್ಯಡ್​​ ಕೇಸ್​ಗಳು ಐಫೋನ್​ಗೆ ಎಷ್ಟು ಸೂಕ್ತವೆಂಬುದು ಇಲ್ಲಿದೆ ನೋಡಿ

ಕೃಪೆ: ಆ್ಯಡ್​ ಕೇಸ್​

First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ