ಜನಪ್ರಿಯ ಶಿಯೋಮಿ ಕಳೆದ ಕೆಲವು ತಿಂಗಳ ಹಿಂದೆ MIUI 12 (ಮೊಬೈಲ್ ಇಂಟರ್ನೆಟ್ ಯೂಸರ್ ಇಂಟರ್ಫೇಸ್)ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಅದರಂತೆ ಇಂದು ಶಿಯೋಮಿ ಸಂಸ್ಥೆ ಭಾರತದಲ್ಲಿ MIUI 12 ಬಿಡುಗಡೆ ಬಗ್ಗೆ ಮಾಹಿತಿ ಹೊರಹಾಕಿದ್ದು, ಸದ್ಯದಲ್ಲಿ ಎಲ್ಲಾ ಸ್ಮಾರ್ಟ್ಫೋನ್ಗಳಿಗೆ ಸಿಗಲಿದೆ ಎಂದಿದೆ.
MIUI 12 ಮೂಲಕ ಶಿಯೋಮಿ ಸ್ಮಾರ್ಟ್ಫೋನ್ ಬಳಕೆದಾರರು ಸೂಪರ್ ವಾಲ್ ಪೇಪರ್, ಫ್ಲೋಟಿಂಗ್ ವಿಂಡೋಸ್ ಫೀಚರ್, ಯುನಿವರ್ಸಲ್ ಕಾಸ್ಟಿಂಗ್ ಟೂಲ್ ಮುಂತಾದ ವೈಶಿಷ್ಟ್ಯವನ್ನು ಪಡೆಯಬಹುದಾಗಿದೆ.
ಮಿ 10, ರೆಡ್ಮಿ ನೋಟ್, ರೆಡ್ಮಿ ನೋಟ್ 9 ಪ್ರೊ, ರೆಡ್ಮಿ ನೋಟ್ 8, ರೆಡ್ಮಿ ನೋಟ್ 8 ಪ್ರೊ, ರೆಡ್ಮಿ ನೋಟ್ 7, ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್ಫೋನ್ ಬಳಕೆದಾರರು ಅಪ್ಡೇಟ್ ಮಾಡಿಕೊಳ್ಳುವ ಮೂಲಕ MIUI 12 ವರ್ಷನ್ ಅನ್ನು ಬಳಸಬಹುದಾಗಿದೆ. ಇದರ ಜೊತೆಗೆ ಕಂಪನಿ ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ಗಳು MIUI 12 ಅಪ್ಡೇಟ್ ಪಡೆಯಲಿವೆ ಎಂದು ಶಿಯೋಮಿ ಹೇಳಿದೆ.
Mi fans, #MIUI12 is here to make your life a lot easier.
- All-new design
- Intuitive visuals
- Super wallpapers
- Built-in app drawer
- New Camera UI
- Improved productivity features
Rolling out soon.
Which feature of #MIUI12 are you most excited about? pic.twitter.com/Ks6EPUnO12
— Mi India (@XiaomiIndia) August 12, 2020
MIUI 12 ಸಿಸ್ಟಂ- ವೈಡ್ ಡಾರ್ಕ್ ಮೋಡ್ನೊಂದಿಗೆ ಮತ್ತು ಥರ್ಡ್ ಪಾರ್ಟಿ ಆ್ಯಪ್ಗಳನ್ನು ಬೆಂಬಲಿಸುವಂತೆ ಸಿದ್ಧಪಡಿಸಲಾಗಿದೆ. ಬಳಕೆದಾರರಿಗೆ ಬ್ಯಾಗ್ರೌಂಡ್, ಸ್ಕ್ರಾಲ್ ಬಾರ್ ಮತ್ತು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ. ಜೊತೆಗೆ ಅ್ಯನಿಮೇಷನ್ 3ಡಿ ಐಕಾನ್ಗಳನ್ನು ತೋರಿಸುತ್ತದೆ.
ಭೂಮಿ ಮತ್ತು ಮಂಗಳ ಗ್ರಹದ ಚಿತ್ರವನ್ನು MIUI 12 ಹೊಂದಿದೆ. ಅದರ ಜೊತೆಗೆ ಬಾಹ್ಯಕಾಶದ ನಾನಾ ಚಿತ್ರಗಳನ್ನು ಇದರಲ್ಲಿ ತೋರಿಸಲಿದೆ. ಹೀಗೆ ಹಲವು ಫೀಚರ್ಗಳು MIUI 12 ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ