ಇತ್ತೀಚೆಗೆ ಟಿಕ್ಟಾಕ್ ಆ್ಯಪ್ಗೆ ಸೆಡ್ಡು ಹೊಡೆಯಲು ‘ಮಿತ್ರೋ‘ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದ್ದರು. ಈ ಆ್ಯಪ್ ಭಾರತ ಮೂಲದ್ದು ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ, ಸಾಕಷ್ಟು ಬಳಕೆದಾರರನ್ನು ಹೊಂದುವ ಮೂಲಕ ಟಿಕ್ಟಾಕ್ಗೆ ಪೈಪೋಟಿಯನ್ನು ನೀಡುತ್ತಿದೆ.
ಆದರೀಗ ಭಾರತೀಯ ಮೂಲಕ ‘ಮಿತ್ರೋ‘ ಆ್ಯಪ್ಗೆ ಪಾಕಿಸ್ತಾನದ ಸಂಪರ್ಕವಿದೆ ಎಂಬ ಮಾಹಿತಿ ಹೊರಬಿದ್ದಿದೆ. ‘ಮಿತ್ರೋ‘ ಆ್ಯಪ್ನ ಮೂಲ ಕೋಡ್ ಪಾಕಿಸ್ತಾನ ಟಿಕ್ಟಿಕ್ ಆ್ಯಪ್ನದ್ದು ಎಂದು ಹೇಳಲಾಗಿದೆ.
ಪಾಕಿಸ್ತಾನ ಕ್ಯೂಬಾಕ್ಸಸ್ ಟೀಂನ ಡೆವಲಪರ್ ದೇಶದ ಪತ್ರಕರ್ತರನ್ನು ಸಂಪರ್ಕಿಸಿದ್ದು, ಆರಂಭದಲ್ಲಿ ಅವರು ಟಿಕ್ಟಾಕ್ಗೆ ಪ್ರತಿಯಾಗಿ ಟಿಕ್ಟಿಕ್ ಎಂಬ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದ್ದರು. ಆ ಬಳಿಕ ಟಿಕ್ಟಿಕ್ ಕೋಡ್ ಅನ್ನು ಕೋಡ್ಕ್ಯಾನನ್ ಮೂಲಕ ಮಾರಾಟಕ್ಕೆ ಇರಿಸಿದ್ದರು. ಮಾಹಿತಿ ಪ್ರಕಾರ 277 ಜನರು ಈ ಕೋಡ್ ಅನ್ನು 2,500 ರೂ ನೀಡಿ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಟಿಕ್ಟಿಕ್ನಲ್ಲಿ ಬಳಸಿರುವ ಕೋಡ್ ಅನ್ನು ‘ಮಿತ್ರೋ‘ ಆ್ಯಪ್ನಲ್ಲಿ ಬಳಸಲಾಗಿದೆ. ಹಾಗಾಗಿ ‘ಮಿತ್ರೋ‘ ಆ್ಯಪ್ ಫೀಚರ್ ಟಿಕ್ಟಿಕ್ ಆ್ಯಪ್ ಹೋಳಿಕೆಯಂತಿದೆ.
ಈ ಬಗ್ಗೆ ಮಾತನಾಡಿರುವ ಕ್ಯೂಬಾಕ್ಸನ ಇರ್ಫಾನ್ ಶೇಖ್ ‘ಟಿಕ್ಟಿಕ್ ಕೋಡ್ ಬಳಸಿ ಅದರ ವಿನ್ಯಾಸದಲ್ಲಿ ಕೊಂಚ ಬದಲಿಸಿ ‘ಮಿತ್ರೋ‘ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ‘ ಎಂದು ಹೇಳಿದರು.
ಇನ್ನು ಟಿಕ್ಟಿಕ್ ಕೋಡ್ ಆ್ಯಪ್ ಅಭಿವೃದ್ಧಿ ಪಡಿಸುವವರಿಗೆ ಸುಲಭವಾಗಿ ಸಿಗುತ್ತಿದೆ. ಕೋಡ್ಕ್ಯಾನಲ್ನಲ್ಲಿ ಲಭ್ಯವಿದೆ. ಹಾಗಾಗಿ ಈ ಆ್ಯಪ್ ಅನ್ನು ಯಾರು ಬೇಕಾದರು ಖರೀದಿಸಿ, ಮಾರ್ಪಾಡಿಸಿ ಆ್ಯಪ್ ತಯಾರಿಸಬಹುದಾಗಿದೆ. ‘ಮಿತ್ರೋ‘ ಆ್ಯಪ್ ಕೂಡ ಈ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದಾರೆ ಎನ್ನಲಾಗಿದೆ.
ಟಿಕ್ಟಾಕ್ ಬ್ಯಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಲೇ ಇದೆ. ಅನೇಕರು ಟಿಕ್ಟಾಕ್ ಆ್ಯಪ್ ಅನ್ಇನ್ಸ್ಟಾಲ್ ಮೂಡುವ ಮೂಲಕ ಅಭಿಯಾನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಮಿತ್ರೋ‘ ಆ್ಯಪ್ ಜನಪ್ರಿಯತೆ ಗಳಿಸಿತ್ತು. ಪ್ಲೇ ಸ್ಟೋರ್ನಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಡೌನ್ಲೋಡ್ ಕೂಡ ಕಂಡಿದೆ. ಆದರೀಗ ಇದರ ಮೂಲ ಕೋಡ್ ಪಾಕಿಸ್ತಾನದ್ದಾಗಿದೆ ಎಂದು ತಿಳಿದುಬಂದಿದೆ.
ಕೊಹ್ಲಿಗೆ ಹೆಮ್ಮಯ ಗರಿ; ಪೋರ್ಬ್ಸ್ ಬಿಡುಗಡೆ ಮಾಡಿರುವ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ