Mitron App: ಗೂಗಲ್​ ಪ್ಲೇ ಸ್ಟೋರ್​​ಗೆ​ ಮತ್ತೆ ಬರಲಿದೆ ಭಾರತೀಯ ‘ಮಿತ್ರೋ‘ ಆ್ಯಪ್​​!

ಗೂಗಲ್​​ ಪ್ಲೇ ಸ್ಟೋರ್​ ಮತ್ತು ಆ್ಯಂಡ್ರಾಯ್ಡ್​​​ ವಿಭಾಗದ ಉಪಾಧ್ಯಕ್ಷ ಸಮೀರ್​​​ ಸಮತ್​​​​ ತಮ್ಮ ಬ್ಲಾಗ್​ ಪೋಸ್ಟ್​​ನಲ್ಲಿ ‘ ನಮ್ಮ ತಂಡವು ಮಿತ್ರೋ ಆ್ಯಪ್​​ ಡೆವಲಪರ್​​ ಜೊತೆಗೆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಅಪ್ಲಿಕೇಶನ್​ ಅನ್ನು ಮತ್ತೆ ಸಲ್ಲಿಸಲು ಹೇಳಿದ್ದೇವೆ.

news18-kannada
Updated:June 4, 2020, 5:50 PM IST
Mitron App: ಗೂಗಲ್​ ಪ್ಲೇ ಸ್ಟೋರ್​​ಗೆ​ ಮತ್ತೆ ಬರಲಿದೆ ಭಾರತೀಯ ‘ಮಿತ್ರೋ‘ ಆ್ಯಪ್​​!
ಮಿತ್ರೋ
  • Share this:
ಇತ್ತೀಚೆಗೆ ‘ಮಿತ್ರೋ ಆ್ಯಪ್‘​ ದೇಶಿಯ ‘ಟಿಕ್​ಟಾಕ್‘​ ಎಂದು ಖ್ಯಾತಿ ಪಡೆದಿತ್ತು. ಸುಮಾರು 50 ಲಕ್ಷಕ್ಕೂ ಅನೇಕ ಭಾರತೀಯರು ಈ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿ ಬಳಸುತ್ತಿದ್ದರು. ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಆದರೆ ‘ಮಿತ್ರೋ ಆ್ಯಪ್‘​ನಲ್ಲಿ ಪಾಕಿಸ್ತಾನಿ ಮೂಲಕ ‘ಟಿಕ್​ಟಿಕ್​ ಆ್ಯಪ್‘​ ಕೋಡಿಂಗ್​ ಅನ್ನು ಬಳಸಿ ‘ಮಿತ್ರೋ ಆ್ಯಪ್​‘ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದಾದ ನಂತರ ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ಮಿತ್ರೋ ಆ್ಯಪ್​​​ ಅನ್ನು ತೆಗೆದುಹಾಕಿದೆ.

ಆದರೀಗ ‘ಮಿತ್ರೋ ಆ್ಯಪ್‘​ ಸದ್ಯದಲ್ಲೇ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಳ್ಳಲಿದೆ. ‘ಮಿತ್ರೋ ಆ್ಯಪ್‘​ ಕಾನೂನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿತ್ತು.

ಗೂಗಲ್​​ ಪ್ಲೇ ಸ್ಟೋರ್​ ಮತ್ತು ಆ್ಯಂಡ್ರಾಯ್ಡ್​​​ ವಿಭಾಗದ ಉಪಾಧ್ಯಕ್ಷ ಸಮೀರ್​​​ ಸಮತ್​​​​ ತಮ್ಮ ಬ್ಲಾಗ್​ ಪೋಸ್ಟ್​​ನಲ್ಲಿ ‘ ನಮ್ಮ ತಂಡವು ‘ಮಿತ್ರೋ ಆ್ಯಪ್‘​​ ಡೆವಲಪರ್​​ ಜೊತೆಗೆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಅಪ್ಲಿಕೇಶನ್​ ಅನ್ನು ಮತ್ತೆ ಸಲ್ಲಿಸಲು ಹೇಳಿದ್ದೇವೆ.

ನಮ್ಮ ತಂಡ  ಮಿತ್ರೋ ಆ್ಯಪ್​ ಡೆವಲಪರ್​ಗೆ ಕೆಲವು ಮಾರ್ಗದರ್ಶನ ನೀಡಿದ್ದೇವೆ. ಮಿತ್ರೋ ಡೆವಲಪರ್​​ ತಮ್ಮ ಸಮಸ್ಯೆಯನ್ನು ಬಗೆಹರಿಸಿದ ನಂತರ ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಳ್ಳಲು ಸಹಾಯ ಮಾಡುತ್ತೇವೆ‘ ಎಂದು ಸಮೀರ್​​ ಸಮತ್​ ತಮ್ಮ ಬ್ಲಾಗ್​ ಪೋಸ್ಟ್​ನಲ್ಲಿ  ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ಚೀನಾ ಆ್ಯಪ್​​ಗಳ ನಿಷೇಧ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಗಿತ್ತು. ವಿಶೇಷವಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಚೀನಾ ಮೂಲದ ‘ಟಿಕ್​ಟಾಕ್‘ ಆ್ಯಪ್​​​ ಬ್ಯಾನ್​ ಆಗಬೇಕೆಂಬ ಕೂಗು ಕೇಳಿಬಂದಿತ್ತು. ಅದಕ್ಕಾಗಿ ಬ್ಯಾನ್​ ಟಿಕ್​​ಟಾಕ್​ ಅಭಿಯಾನ ಪ್ರಾರಂಭವಾಗಿತ್ತು. ಈ ಹಿನ್ನಲೆಯಲ್ಲಿ ಅನೇಕರು ‘ಟಿಕ್​ಟಾಕ್‘​ ಅನ್​​ಇನ್​ಸ್ಟಾಲ್​ ಮಾಡುವ ಮೂಲಕ ಅಭಿಯಾನ ಮಾಡಿದ್ದರು. ಇಂತಹ ಸಂದರ್ಭದಲ್ಲಿ ‘ಮಿತ್ರೋ ಆ್ಯಪ್‘​ ಜನಪ್ರಿಯತೆಗಳಿಸಿತ್ತು.

ಪಾಕಿಸ್ತಾನ ‘ಟಿಕ್​ಟಾಕ್‘​ ಆ್ಯಪ್​ಗೆ ಪ್ರತಿಸ್ಪರ್ಧಿಯಾಗಿ ‘ಟಿಕ್​ಟಿಕ್‘​ ಆ್ಯಪ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿತ್ತು. ಈ ಆ್ಯಪ್​ಗೆ ಬಳಸಿರುವ ಕೋಡಿಂಗ್​ ಅನ್ನು ಕೋನ್​ಕ್ಯಾನನ್​​ ಮೂಲಕ ಮಾರಾಟ ಇಟ್ಟಿದ್ದರು. ಸುಮಾರು 277 ಜನರು ಈ ಕೋಡ್​ ಅನ್ನು 2,500 ರೂ.ನೀಡಿ ಖರೀದಿಸಿದ್ದರು. ‘ಮಿತ್ರೋ‘ ಆ್ಯಪ್​ ಕೂಡ ‘ಟಿಕ್​ಟಿಕ್‘​ಗೆ ಬಳಸಿದ ಕೋಡಿಂಗ್​ ಅನ್ನು ಕಾಪಿ ಮಾಡಿ ‘ಮಿತ್ರೋ‘ ಆ್ಯಪ್​ಗೆ ಬಳಸಿಕೊಂಡಿತ್ತು. ಹಾಗಾಗಿ ಮಿತ್ರೋ ಆ್ಯಪ್​ ಕಾನೂನು ಉಲ್ಲಂಘನೆ ಮಾಡಿದೆ ಎಂಬ ಕಾರಣಕ್ಕೆ ಗೂಗಲ್​​ ಪ್ಲೇ ಸ್ಟೋರ್​​ನಿಂದ ತೆಗೆದುಹಾಕಿದೆ.

ಇನ್ನು ಭಾರತದಲ್ಲಿ ಚೀನಾ ಆ್ಯಪ್​ ಬಳಕೆ ನಿಷೇಧ ಮಾಡಬೇಕೆಂಬ ಅಭಿಯಾನದ ಕೂಗು ಕೇಳಿಬಂದಾಗ ಜೈಪುರ ಮೂಲದ ಒನ್​ಟಚ್​​ ಆ್ಯಪ್​​ಲ್ಯಾಬ್ಸ್​​ ಸಂಸ್ಥೆ ‘ರಿಮೂವ್​ ಚೀನಾ ಆ್ಯಪ್‘ ಎಂಬ ಅಪ್ಲಿಕೇಶನ್​​​ ಅನ್ನು ಅಭಿವೃದ್ಧಿ ಪಡಿಸಿತ್ತು. ಮೇ 17ರಂದು ಭಾರತದಲ್ಲಿ ಬಿಡುಗಡೆಮಾಡಿತು. ಬಿಡುಗಡೆಯಾದ 10 ದಿನಗಳಲ್ಲಿ 10 ಲಕ್ಷ  ಡೌನ್​ಲೋಡ್​ ಕಂಡಿತ್ತು.‘ರಿಮೂವ್​ ಚೀನಾ ಆ್ಯಪ್‘​​ ಅನ್ನು ಇನ್​ಸ್ಟಾಲ್​ ಮಾಡಿದರೆ ಸ್ಮಾರ್ಟ್​ಫೋನ್​​ನಲ್ಲಿ ಚೀನಾ ಆ್ಯಪ್​ ಅನ್ನು ಸುಲಭವಾಗಿ ಪತ್ತೆ ಹಚ್ಚವಂತೆ ಅಭಿಚೃದ್ಧಿ ಪಡಿಸಲಾಗಿತ್ತು. ಮಾತ್ರವಲ್ಲದೆ, ಒಂದೇ ಟಚ್​ನಲ್ಲಿ ಚೀನಾ ಆ್ಯಪ್​​ ಅನ್ನು ಅನ್​ಇನ್​ಸ್ಟಾಲ್​​ ಮಾಡುವ ಆಯ್ಕೆಯನ್ನು ನೀಡಿತ್ತು. ಹಾಗಾಗಿ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಜನಪ್ರಿಯತೆ ಪಡೆದಿತ್ತು.

ಆದರೆ ‘ರಿಮೂವ್​​ ಚೀನಾ ಆ್ಯಪ್​‘​​​ ಕಾನೂನು ಉಲ್ಲಂಘನೆ ಮಾಡಿರುವ ಕಾರಣಕ್ಕೆ ಈ ಆ್ಯಪ್​​ ಅನ್ನು ಗೂಗಲ್​ ಪ್ಲೇ ಸ್ಟೋರ್​​ ತೆಗದು ಹಾಕಿದೆ. ಆದರೆ ‘ಮಿತ್ರೋ ಆ್ಯಪ್‘​​ ತನ್ನ ಸಮಸ್ಯೆಯನ್ನು ಸರಿಪಡಿಸಿ ಮತ್ತೆ ಗೂಗಲ್​ ಪ್ಲೇ ಸ್ಟೋರ್​ಗೆ ಮರಳುವ ಮುನ್ಸೂಚನೆಯಲ್ಲಿದೆ.
First published: June 4, 2020, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading