Mitron App: ಗೂಗಲ್​ ಪ್ಲೇ ಸ್ಟೋರ್​​ನಿಂದ ಮಾಯವಾದ ‘ಮಿತ್ರೋ‘ ಆ್ಯಪ್​!

Mitron App: ಸಾಕಷ್ಟು ಜನರು ‘ಮಿತ್ರೋ‘ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿದ್ದರು. ಸುಮಾರು 50 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಕಂಡಿತ್ತು. ಇದರ ನಡುವೆ ‘ಮಿತ್ರೋ‘ ಆ್ಯಪ್​ನಲ್ಲಿ ಬಳಸಲಾದ ಕೋಡ್​ ಪಾಕಿಸ್ತಾನದ ಮೂಲದ್ದು ಎಂಬ ಮಾತುಗಳು ಕೇಳಿಬಂದಿತು

news18-kannada
Updated:June 2, 2020, 7:45 PM IST
Mitron App: ಗೂಗಲ್​ ಪ್ಲೇ ಸ್ಟೋರ್​​ನಿಂದ ಮಾಯವಾದ ‘ಮಿತ್ರೋ‘ ಆ್ಯಪ್​!
ಮಿತ್ರೋ
  • Share this:
ದೇಶಿಯ ಆ್ಯಪ್​ ಎಂದು ಜನಪ್ರಿಯತೆ ಪಡೆಯುವ ಮೂಲಕ ಅನೇಕ ಬಳಕೆದಾರರನ್ನು ಹೊಂದಿದ್ದ ‘ಮಿತ್ರೋ‘ ಆ್ಯಪ್​ ಪ್ಲೇ ಸ್ಟೋರ್​​ನಿಂದ ಕಣ್ಮರೆಯಾಗಿದೆ.

ಇತ್ತೀಚೆಗೆ ಚೀನಾ ವಸ್ತುಗಳ ಬಳಸದಂತೆ ಅಭಿಯಾನವು ಆರಂಭವಾಗಿತ್ತು. ಪ್ರಮುಖವಾಗಿ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಮಾಡುವ ಬಗ್ಗೆ ಅಭಿಯಾನ ನಡೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಬ್ಯಾನ್​ ಟಿಕ್​ಟಾಕ್​​ ಅಭಿಯಾನದ ಜೊತೆ ಅನೇಕರು ಕೈ ಜೋಡಿಸಿದ್ದರು. ಟಿಕ್​ಟಾಕ್​ ಅನ್​ಇನ್​ಸ್ಟಾಲ್ ಮಾಡುವ ಮೂಲಕ ಅಭಿಯಾನ ನಡೆಸುತ್ತಿದ್ದರು. ಈ ನಡುವೆ ‘ಮಿತ್ರೋ‘ ಎಂಬ ಆ್ಯಪ್​​​ ಜನಪ್ರಿಯತೆ ಪಡೆಡುಕೊಂಡಿತ್ತು.

ಸಾಕಷ್ಟು ಜನರು ‘ಮಿತ್ರೋ‘ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿದ್ದರು. ಸುಮಾರು 50 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಕಂಡಿತ್ತು. ಇದರ ನಡುವೆ ‘ಮಿತ್ರೋ‘ ಆ್ಯಪ್​ನಲ್ಲಿ ಬಳಸಲಾದ ಕೋಡ್​ ಪಾಕಿಸ್ತಾನದ ಮೂಲದ್ದು ಎಂಬ ಮಾತುಗಳು ಕೇಳಿಬಂದಿತು.

ಪಾಕಿಸ್ತಾನದಲ್ಲಿ ಟಿಕ್​ಟಾಕ್​ಗೆ ಪ್ರತಿಸ್ಪರ್ಧಿಯಾಗಿ ಟಿಕ್​ಟಿಕ್​ ಹೆಸರಿನಲ್ಲಿ ಆ್ಯಪ್​​ ಬಿಡುಗಡೆ ಮಾಡಲಾಗಿತ್ತು. ಈ ಆ್ಯಪ್​ನಲ್ಲಿ ಬಳಸಿರುವ ಕೋಡಿಂಗ್ ಅನ್ನು​ ಕೋಡ್​ಕ್ಯಾನನ್​​ನಲ್ಲಿ ಮಾರಾಟ ಇರಿಸಿದ್ದರು. ಸುಮಾರು 277 ಜನರು ಈ ಕೋಡ್​ ಅನ್ನು 2,500 ರೂ.ನೀಡಿ ಖರೀದಿಸಿದ್ದರು. ‘ಮಿತ್ರೋ‘ ಆ್ಯಪ್​ ಕೂಡ ಟಿಕ್​ಟಿಕ್​ಗೆ ಬಳಸಿದ ಕೋಡಿಂಗ್​ ಅನ್ನು ಕಾಪಿ ಮಾಡಿ ‘ಮಿತ್ರೋ‘ ಆ್ಯಪ್​ಗೆ ಬಳಸಿಕೊಂಡಿತ್ತು.

ಆದರೀಗ ಪ್ಲೇ ಸ್ಟೋರ್​​‘ ಮಿತ್ರೋ‘ ಆ್ಯಪ್​ ಅನ್ನು ತೆಗೆದು ಹಾಕಿದೆ. ಇನ್ನು ‘ಮಿತ್ರೋ‘ ಆ್ಯಪ್​ ಕಣ್ಣರೆಯಾದಂತೆ ಸಾಕಷ್ಟು ‘ಮಿತ್ರೋ‘ ಹೆಸರಿನ ನಕಲಿ ಆ್ಯಪ್​​​ಗಳು ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ನಕಲಿ ಆ್ಯಪ್​ಗಳ ಬಳಸಿಕೊಂಡು ಸಮಸ್ಯೆ ಸಿಲುಕುವ ಮೊದಲು ಎಚ್ಚರಿಕೆಯಿಂದ ಇರುವುದು ಒಳಿತು.

BSNL: ಬಿಎಸ್​ಎನ್​ಎಲ್​ ಪ್ರಿಪೇಯ್ಡ್ ಪ್ಲಾನ್​; 2GB ಡೇಟಾ ಜೊತೆಗೆ ಒಂದು ವರ್ಷ ವ್ಯಾಲಿಡಿಟಿ!
First published: June 2, 2020, 7:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading