Mitron App: ಪ್ಲೇ ಸ್ಟೋರ್​ಗೆ ಮತ್ತೆ ಮರಳಿದ ಭಾರತೀಯ ‘ಮಿತ್ರೋ ಆ್ಯಪ್​​‘!

Google Play store: ಈ ಮೊದಲು ‘ಮಿತ್ರೋ ಆ್ಯಪ್‘​​ ಅನ್ನು ಪಾಕಿಸ್ತಾನಿ ಮೂಲಕ ‘ಟಿಕ್​ಟಿಕ್​ ಆ್ಯಪ್‘​ ಕೋಡಿಂಗ್​ ಬಳಸಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದನ್ನು ಮನಗಂಡ ಗೂಗಲ್​​ ಕಾನೂನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿತ್ತು. ನಂತರ ‘ಮಿತ್ರೋ ಆ್ಯಪ್‘​​ನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಗೂಗಲ್​ ಪ್ಲೇ ಸ್ಟೋರ್​ ಮಿತ್ರೋ ಡೆವಲಪರ್​ಗೆ ತಿಳಿಸಿದ್ದರು.

news18-kannada
Updated:June 6, 2020, 2:07 PM IST
Mitron App: ಪ್ಲೇ ಸ್ಟೋರ್​ಗೆ ಮತ್ತೆ ಮರಳಿದ ಭಾರತೀಯ ‘ಮಿತ್ರೋ ಆ್ಯಪ್​​‘!
ಮಿತ್ರೋ
  • Share this:
ದೇಶಿಯ ‘ಟಿಕ್​ಟಾಕ್‘​ ಎಂದು ಖ್ಯಾತಿ ಪಡೆದಿರುವ  ‘ಮಿತ್ರೋ ಆ್ಯಪ್‘​ ಪ್ಲೇ ಸ್ಟೋರ್​ನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದೆ ‘ಮಿತ್ರೋ ಆ್ಯಪ್‘​​ ಗೂಗಲ್​ ಪ್ಲೇ ಸ್ಟೋರ್​ನಿಂದ ಕಣ್ಮರೆಯಾಗಿತ್ತು. ಆದರೀಗ ಮತ್ತೆ ಹಿಂತಿರುವ ಮೂಲಕ ಬಳಕೆದಾರರಿಗೆ ಸಂತಸ ಮೂಡಿಸಿದೆ.

ಈ ಮೊದಲು ‘ಮಿತ್ರೋ ಆ್ಯಪ್‘​​ ಅನ್ನು ಪಾಕಿಸ್ತಾನಿ ಮೂಲಕ ‘ಟಿಕ್​ಟಿಕ್​ ಆ್ಯಪ್‘​ ಕೋಡಿಂಗ್​ ಬಳಸಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದನ್ನು ಮನಗಂಡ ಗೂಗಲ್​​ ಕಾನೂನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿತ್ತು. ನಂತರ ‘ಮಿತ್ರೋ ಆ್ಯಪ್‘​​ನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ಗೂಗಲ್​ ಪ್ಲೇ ಸ್ಟೋರ್​ ಮಿತ್ರೋ ಡೆವಲಪರ್​ಗೆ ತಿಳಿಸಿದ್ದರು.

ಇದೀಗ 'ಮಿತ್ರೋ ಆ್ಯಪ್'​​ ತನ್ನ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮತ್ತೆ ಪ್ಲೇ ಸ್ಟೋರ್​ಗೆ ಹಿಂತಿರುಗಿದೆ. ಪ್ಲೇ ಸ್ಟೋರ್​ನಿಂದ ‘ಮಿತ್ರೋ ಆ್ಯಪ್​‘ ರಿಮೂವ್​ ಆಗುವ ಮೊದಲು 50 ಲಕ್ಷಕ್ಕೂ ಹೆಚ್ಚು ಡೌನ್​ಲೋಡ್​​ ಕಂಡಿತ್ತು. ಅಷ್ಟೇ ಅಲ್ಲದೆ, ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು.  ಚೀನಾ ಮೂಲಕದ ಟಿಕ್​ಟಾಕ್​​ನಂತೆ ಮಿತ್ರೋ ಆ್ಯಪ್​ ಅನ್ನು ಸಿದ್ಧಪಡಿಸಲಾಗಿತ್ತು.

ಮಿತ್ರೋ ಆ್ಯಪ್


ಇತ್ತೀಚೆಗೆ ಭಾರತದಲ್ಲಿ ಚೀನಾ ಆ್ಯಪ್​​ಗಳ ನಿಷೇಧ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಗಿತ್ತು. ವಿಶೇಷವಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಚೀನಾ ಮೂಲದ ‘TikTok‘ ಆ್ಯಪ್​​​ ಬ್ಯಾನ್​ ಆಗಬೇಕೆಂಬ ಕೂಗು ಕೇಳಿಬಂದಿತ್ತು. ಅದಕ್ಕಾಗಿ ಬ್ಯಾನ್​ ಟಿಕ್​​ಟಾಕ್​ ಅಭಿಯಾನ ಪ್ರಾರಂಭವಾಗಿತ್ತು. ಈ ಹಿನ್ನಲೆಯಲ್ಲಿ ಅನೇಕರು ‘ಟಿಕ್​ಟಾಕ್‘​ ಅನ್​​ಇನ್​ಸ್ಟಾಲ್​ ಮಾಡುವ ಮೂಲಕ ಅಭಿಯಾನ ಮಾಡಿದ್ದರು. ಇಂತಹ ಸಂದರ್ಭದಲ್ಲಿ ‘Mitron App‘​ ಜನಪ್ರಿಯತೆಗಳಿಸಿತ್ತು. ಐಐಟಿ ರೂರ್ಕಿಯ ವಿದ್ಯಾರ್ಥಿ ಶಿಬಾಂಕ್ ಅಗರ್ ವಾಲ್ ಈ ‘ಮಿತ್ರೋ‘ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

Jio Offer: ಜಿಯೋದಿಂದ ಸೂಪರ್​ ಡೂಪರ್​ ಆಫರ್​​; 1 ವರ್ಷ ಹಾಟ್​​ಸ್ಟಾರ್​​ ಉಚಿತವಾಗಿ ವೀಕ್ಷಿಸಿ

ಒಂದೇ IMEI ಸಂಖ್ಯೆಯಲ್ಲಿ 13,500 ಸ್ಮಾರ್ಟ್​ಫೋನ್​​​ ಉತ್ಪಾದಿಸಿದ ವಿವೋ; ಪ್ರಕರಣ ದಾಖಲುಬದಲಾಗು ನೀನು…. ಬದಲಾಯಿಸು ನೀನು ಹಾಡು ಬಿಡುಗಡೆ; ಕನ್ನಡಿಗರಿಂದ ಭಾರೀ ಮೆಚ್ಚುಗೆ
First published: June 6, 2020, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading