HOME » NEWS » Tech » MILLIONS OF AIRTEL NUMBERS WITH AADHAAR DETAILS AND USER DATA LIKELY LEAKED HG

Shocking: ಆಧಾರ್ ನಂಬರ್ ಸೇರಿದಂತೆ 2.5 ಮಿಲಿಯನ್ ಏರ್​​ಟೆಲ್​ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆ!

ಇಂಟರ್​ನೆಟ್​ ಭದ್ರತಾ ಸಂಶೋಧಕರಾದ ರಾಜಶೇಖರ್​ ರಾಜಹಾರಿಯಾ ತಮ್ಮ ಟ್ವಿಟ್ಟರ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸುಮಾರು 2.5 ಮಿಲಿಯನ್​ ಏರ್​ಟೆಲ್​ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಹ್ಯಾಕರ್​ಗಳು ಬಳಕೆದಾರರ ಮಾಹಿತಿ ಕದ್ದು ಮಾರಾಟ ಮಾರಲು ಯತ್ನಿಸಿದ್ದರು ಎಂದು ರಾಜಶೇಖರ್​ ಮಾಹಿತಿ ನೀಡಿದ್ದಾರೆ.

news18-kannada
Updated:February 3, 2021, 11:27 AM IST
Shocking: ಆಧಾರ್ ನಂಬರ್ ಸೇರಿದಂತೆ 2.5 ಮಿಲಿಯನ್ ಏರ್​​ಟೆಲ್​ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆ!
airtel
  • Share this:
ಹ್ಯಾಕರ್​ಗಳ ಉಪಟಳ ಹೆಚ್ಚಾಗುತ್ತಿದ್ದು, ಇದೀಗ ಟೆಲಿಕಾಂ ಸಂಸ್ಥೆಯಾದ ಏರ್​ಟೆಲ್​​ ಗ್ರಾಹಕರ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ. ಖಾಸಗಿ ಮಾಹಿತಿ ಸೇರಿದಂತೆ ಟೆಲಿಫೋನ್​ ನಂಬರ್​, ವಿಳಾಸ, ಆಧಾರ್​ ಕಾರ್ಡ್​ ನಂಬರ್​, ಲಿಂಗ ಮುಂತಾದ ಮಾಹಿತಿಗಳನ್ನು ಸೋರಿಕೆ​ ಮಾಡಿದ್ದಾರೆ ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.

ಇಂಟರ್​ನೆಟ್​ ಭದ್ರತಾ ಸಂಶೋಧಕರಾದ ರಾಜಶೇಖರ್​ ರಾಜಹಾರಿಯಾ ತಮ್ಮ ಟ್ವಿಟ್ಟರ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸುಮಾರು 2.5 ಮಿಲಿಯನ್​ ಏರ್​ಟೆಲ್​ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಹ್ಯಾಕರ್​ಗಳು ಬಳಕೆದಾರರ ಮಾಹಿತಿ ಕದ್ದು ಮಾರಾಟ ಮಾರಲು ಯತ್ನಿಸಿದ್ದರು ಎಂದು ರಾಜಶೇಖರ್​ ಮಾಹಿತಿ ನೀಡಿದ್ದಾರೆ.

ಬಳಕೆದಾರರ ಖಾಸಗಿ ಮಾಹಿತಿಯನ್ನು ಇಟ್ಟುಕೊಂಡು ಹ್ಯಾಕರ್ಸ್​ಗಳು ಏರ್​ಟೆಲ್​ ಕಂಪೆನಿಗೆ ಬೆದರಿಕೆ ಹಾಕಿದ್ದಾರೆ. ಜೊತೆಗೆ 3,500 ಬಿಟ್​ ಕಾಯಿನ್​ ನೀಡಬೇಕು ಎಂದು ಬೆದರಿಸಿದ್ದಾರೆ. ಆದರೆ ಏರ್​ಟೆಲ್​ ಸಂಸ್ಥೆ ಮಾತ್ರ ಈ ಬೆದರಿಕೆಗೆ ಜಗ್ಗಲಿಲ್ಲ ಎಂದು ರಾಜ್​ಶೇಖರ್​ ತಿಳಿಸಿದ್ದಾರೆ.

ಏರ್​ಟೆಲ್​ ಹಣ ನೀಡದೆ ಇದ್ದ ಕಾರಣಕ್ಕೆ ಹ್ಯಾಕರ್ಸ್​ಗಳು ಬೇರೆ ವೆಬ್​ಸೈಟ್​ ಒಂದಕ್ಕೆ ಮಾಹಿತಿಯನ್ನು ಮಾರಲು ಹೊರಟಿದ್ದರು. ಆದರೆ ನಂತರ ಈ ವೆಬ್​ಸೈಟ್​ ಅನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸರ್ಕಾರಿ ಏಜೆನ್ಸಿಗಳ ಮುಖಾಂತರ ಮಾಹಿತಿಗಳು ಸೋರಿಕೆ ಆಗಿದೆ ಎಂದು ತಿಳಿದುಬಂದಿದೆ. ಸೋರಿಕೆಯಾದ ಎಲ್ಲಾ ಮಾಹಿತಿಗಳು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಏರ್​ಟೆಲ್​ ಗ್ರಾಹಕರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.
Youtube Video

ರಾಜಶೇಖರ್​ ರಾಜಹಾರಿಯಾ ಟ್ವಿಟ್ಟರ್​​ ಖಾತೆಯಲ್ಲಿ ಫೋಟೋ ಸಮೇತ ಮಾಹಿತಿಯನ್ನು ನೀಡಿದ್ದಾರೆ. ಸದ್ಯ ಈ ವಿಚಾರ ವೈರಲ್​ ಆಗಿದೆ.  ಏರ್​ಟೆಲ್​ ಸಂಸ್ಥೆ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮಿಂದ ಯಾವುದೇ ಮಾಹಿತಿಗಳು ಸೋರಿಕೆಯಾಗಿಲ್ಲ. ಸೂಕ್ತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹ್ಯಾಕರ್ಸ್​ಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
Published by: Harshith AS
First published: February 3, 2021, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories