ಬ್ಲಾಕ್​ಬೋರ್ಡ್​ ಬದಿಗಿಡಿ, ಮೈಕ್ರೋಸಾಫ್ಟ್​ ವೈಟ್​ಬೋರ್ಡ್​ ಬಳಸಿ!


Updated:July 14, 2018, 4:50 PM IST
ಬ್ಲಾಕ್​ಬೋರ್ಡ್​ ಬದಿಗಿಡಿ, ಮೈಕ್ರೋಸಾಫ್ಟ್​ ವೈಟ್​ಬೋರ್ಡ್​ ಬಳಸಿ!

Updated: July 14, 2018, 4:50 PM IST
ಶಾಲಾ ತರಗತಿಯಲ್ಲಿ ಬಳಸುವ ಕಪ್ಪುಹಲಗೆಯ ಮಾದರಿಯಲ್ಲೇ ಕಂಪ್ಯೂಟರ್​ ಅಥವಾ ಲ್ಯಾಪ್​ಟಾಪ್​ನಲ್ಲಿ ಸ್ಟಿಕ್ಕರ್​, ನೋಟ್ಸ್​ಗಳನ್ನು ಬರೆದಿಟ್ಟುಕ್ಕೊಳ್ಳಲು ಮೈಕ್ರೋಸಾಫ್ಟ್​ನ ವೈಟ್​ಬೋರ್ಡ್​ ಆಪ್ಲಿಕೇಶನ್​ ಇದೀಗ ವಿಂಡೋಸ್​ 10 ಬಳಕೇದಾರರಿಗೆ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಐಒಎಸ್​ ಬಳಕೇದಾರೂ ಸೇರಿದಂತೆ ಮೊಬೈಲ್​ ಆ್ಯಪ್​ ಮಾರುಕಟ್ಟೆಗೆ ತರುವುದಾಗಿ ಭರವಸೆ ನೀಡಿದೆ.

ಮೈಕ್ರೋಸಾಫ್ಟ್​ ಸ್ಟೋರ್​ನಲ್ಲಿ ಈ ಆ್ಯಪ್​ ಲಭ್ಯವಿದ್ದು, ಈವರೆಗೆ ಅಪ್ಲಿಕೇಶನ್​ನಲ್ಲಿ ಚಿತ್ರ ರಚನೆ, ಬರೆದಿರುವುದನ್ನು ಅಳಿಸಿಹಾಕುವ, ಸ್ಟಿಕ್ಕಿ ನೋಟ್ಸ್​ ಬಳಕೆಗೆ ಆಸ್ಪದವಿತ್ತು. ಆದರೆ ಇದೀಗ ಇದಕ್ಕೆ ಇನ್ನೂ ಹೆಚ್ಚಿನ ಅಪ್​ಡೇಟ್​ ನೀಡಲಾಗಿದೆ. ಅಂತರ್ಜಾಲದಲ್ಲಿರುವ ಚಿತ್ರಗಳನ್ನು ಡೌನ್​ಲೋಡ್​ ಮಾಡಿ ಬಳಸಿಕೊಳ್ಳಬಹುದಾಗಿದೆ.

ವೈಟ್​ಬೊರ್ಡ್​ ಬಳಕೆ ಹೇಗೆ ?
ಏಕಕಾಲದಲ್ಲಿ ವೈಟ್​ಬೋರ್ಡ್​ ಖಾತೇದಾರರು ಬೇರೆ ಬೇರೆ ಪ್ರದೇಶದಿಂದ ಈ ಆ್ಯಪ್​ನ್ನು ಬಳಸಬಹುದು. ಕಚೇರಿ ಮೀಟಿಂಗ್​, ಶಾಲಾ ಪ್ರಾಜೆಕ್ಟ್​ ಹೀಗೆ ಹಲಾವರು ಸಂದರ್ಭದಲ್ಲಿ ಈ ಆ್ಯಪ್​ ಹೆಚ್ಚು ಮಹತ್ವನ ಪಾತ್ರ ವಹಿಸುತ್ತದೆ.

ಮೊದಲು ಈ ಆ್ಯಪ್​ಗೆ ಲಾಗ್​ ಇನ್​ ಆಗಿ ಬಳಿಕ ನಿಮಗೆ ಬೇಕಾದ ಸ್ಟಿಕ್ಕರ್​ , ನೊಟ್ಸ್​ ಚಿತ್ರಗಳನ್ನು ಇಲ್ಲಿ ಬರೆಯಬಹುದು. ಏಕಕಾಲದಲ್ಲಿ ಈ ನಿಮ್ಮ ಮಿತ್ರರೂ ಕೂಡಾ ಇದರಲ್ಲು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಅವರೂ ಕೂಡಾ ಈ ಚಿತ್ರಗಳನ್ನು ಅಥವಾ ಮಾಹಿತಿಯನ್ನು ಎಡಿಟ್​ ಮಾಡುವ ಸೌಲಭ್ಯವಿದೆ.

ತ್ರಿಡಿ ತಂತ್ರಜ್ಞಾನ ಸೌಲಭ್ಯ ಸೇರಿದಂತೆ ಹಲವಾರು ವಿಶೇಷತೆಗಳಿಂದ ಕೂಡಿದ ಈ ವೈಟ್​ಬೋರ್ಡನ್ನು ಚಿತ್ರ ರಚನೇಕಾರರಿಗೆ ಹೇಳಿ ಮಾಡಿಸಿದಂತಿದೆ. ಸದ್ಯ ಈ ಆ್ಯಪ್​ ಕಂಪ್ಯೂಟರ್​ಗಳಿಗೆ ಮಾತ್ರಾ ಲಭ್ಯವಿದೆ.
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...