Microsoft: ಕೋವಿಡ್​ ಸಂಕಷ್ಟದಲ್ಲೂ ಮೈಕ್ರೋಸಾಫ್ಟ್​ ಉದ್ಯೋಗಿಗಳಿಗೆ ಒಂದು ಲಕ್ಷ ರೂ ಬೋನಸ್

ಗುರುವಾರ ಈ ಬೋನಸ್​ ಕುರಿತು ಪ್ರಕಟಿಸಿದ ಮೈಕ್ರೋಸಾಫ್ಟ್​ ಸಿಪಿಒ, ಜುಲೈ ಮತ್ತು ಆಗಸ್ಟ್​ ಒಳಗೆ ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಈ ಬೋನಸ್​ ಕೈ ಸೇರಲಿದೆ.

ಮೈಕ್ರೋಸಾಫ್ಟ್​

ಮೈಕ್ರೋಸಾಫ್ಟ್​

  • Share this:
    ಕೋವಿಡ್​ ಸಂಕಷ್ಟದಿಂದ ಅನೇಕ ಉದ್ಯಮಗಳು ನಷ್ಟಕ್ಕೆ ಒಳಗಾದವು. ಅದರಲ್ಲೂ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಮಂದಿ ಅನೇಕ. ಈ ನಡವೆ ಕೆಲಸ ಉಳಿಸಿಕೊಂಡವರು ಯಾವುದೇ ಬೋನಸ್​, ಸೌಲಭ್ಯ ಸಿಗದೇ ವಂಚಿತರಾದರು. ಇಂತಹ ಸಂಕಷ್ಟದ ನಡುವೆಯೂ ತಂತ್ರಜ್ಞಾನ ದಿಗ್ಗಜ್ಜ ಮೈಕ್ರೋಸಾಫ್ಟ್​ ಮಾತ್ರ ಉದ್ಯೋಗಿಗಳಿಗೆ ಬಂಪರ್​ ಉಡುಗೊರೆ ನೀಡಿದೆ. ತನ್ನ ನೌಕರರಿಗೆ ಒಂದು ಲಕ್ಷ ಬೋನಸ್​ ನೀಡಲು ಕಂಪನಿ ನಿರ್ಧರಿಸಿದೆ. ವರ್ಜ್​ ವರದಿ ಮಾಡಿರುವಂತೆ, ಕೋವಿಡ್​ ಸೋಂಕಿನಿಂದ ವರ್ಕ್​ ಫ್ರಂ ಹೋಂನಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಸಹಾಯ ಮಾಡಲು ಈ ನಿರ್ಧಾರವನ್ನು ತೆಗೆದುಕೊಂಡಿದೆಯಂತೆ. ಇಂತಹ ಸಂಕಷ್ಟ ಸಮಯದಲ್ಲಿ ಉದ್ಯೋಗಿಗಳ ಮತ್ತು ಕಂಪನಿಯ ಮೌಲ್ಯಯುತ ಸಂಬಂಧವನ್ನು ಇರಿಸಿಕೊಳ್ಳುವ ಉದ್ದೇಶದಿಂದ ಈ ಬೋನಸ್​ ನೀಡಲಾಗುತ್ತಿದೆ.

    ಈ ಬೋನಸ್​ನಿಂದ ಕಂಪನಿಗೆ ಸುಮರು 200 ಮಿಲಿಯನ್​ ಡಾಲರ್​ ಆರ್ಥಿಕ ವೆಚ್ಚ ಹೆಚ್ಚಾಗಲಿದೆ, ಆದರೆ ಉದ್ಯೋಗಿ ಮತ್ತು ಕಂಪನಿ ನಡುವಿನ ನಂಬಿಕೆ ಉಳಿಸಿಕೊಳ್ಳಲು, ಸಂಸ್ಥೆಗಾಗಿ ಶ್ರಮ ಪಡುತ್ತಿರುವು ಉದ್ಯೋಗಿಗಳಿಗೆ ಇದು ಅಗತ್ಯ ಎಂದು ತಿಳಿಸಿದೆ
    ಈ ವರ್ಷದ ಮೊದಲ ತ್ರೈ ಮಾಸಿಕದ ಅಂತ್ಯದ ವೇಳೆ ಮೈಕ್ರೋಸಾಫ್ಟ್​ 125 ಬಿಲಿಯನ್​ ಡಾಲರ್​ ಹೂಡಿಕೆ ಮಾಡಿದೆ. ಗುರುವಾರ ಈ ಬೋನಸ್​ ಕುರಿತು ಪ್ರಕಟಿಸಿದ ಮೈಕ್ರೋಸಾಫ್ಟ್​ ಸಿಪಿಒ, ಜುಲೈ ಮತ್ತು ಆಗಸ್ಟ್​ ಒಳಗೆ ಕಂಪನಿಯ ಪ್ರಪಂಚದ ಎಲ್ಲ ಮೂಲೆಯಲ್ಲಿರುವ ಉದ್ಯೋಗಿಗಳಿಗೆ ಈ ಬೋನಸ್​ ಕೈ ಸೇರಲಿದೆ. ಮೈಕ್ರೋಸಾಫ್ಟ್​ ಉಪಾಧ್ಯಕ್ಷ, ಗಿಟ್​ಹಬ್​ ಮತ್ತು ಲಿಂಕ್ಡಿನ್​ ಮತ್ತು ಜೆನಿಮ್ಯಾಕ್ಸ್​ ಉದ್ಯೋಗೊಗಳಿಗೆ ಈ ಬೋನಸ್​ ಸಿಗುವುದಿಲ್ಲ.

    ಕಾರ್ಪೊರೇಟ್​ ಉಪಾಧ್ಯಕ್ಷನ ಕೆಳ ಸ್ಥಾನದಿಂದ ಮತ್ತು 31 ಮಾರ್ಚ್​ 2021 ರೆ ಮುಂಚೆ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ ಎಲ್ಲಾ ನೌಕರರಿಗೆ ಈ ಬೋನಸ್​ ಸಿಗಲಿದೆ. ಅವರ ಹುದ್ದೆಯ ಮಾನದಂಡ ಆಧಾರಿಸಿ, ಈ ವಿಶೇಷ ಭತ್ಯೆ ನೀಡಲಾಗುವುದು. ಮೈಕ್ರೋಸಾಫ್ಟ್​ ಸಂಸ್ಥೆಯಲ್ಲಿ ಸುಮಾರು 155,508 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕಂಪನಿಯ ಒಂದು ದಿನದ ಲಾಭದ ಮೌಲ್ಯ ಬೋನಸ್ ಆಗಿ ಸಿಗಲಿದೆ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: