ಮೈಕ್ರೋಸಾಫ್ಟ್ (Microsoft) ಚಾಟ್‌ಜಿಪಿಟಿಯ ಸಂಯೋಜನೆಯೊಂದಿಗೆ ಪರಿಷ್ಕೃತಗೊಂಡ ಹುಡುಕಾಟ ಎಂಜಿನ್ ಬಿಂಗ್ ಅನ್ನು ಪರಿಚಯಿಸಿದೆ. ಹುಡುಕಾಟಕ್ಕೆ ಇನ್ನಷ್ಟು ನವೀನತೆಯನ್ನು ದೊರಕಿಸಿಕೊಡುವ ಚಾಟ್‌ಜಿಪಿಟಿಯ (ChatGPT) ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಾದ ಹೊಸ ಕ್ರಾಂತಿ ಎಂದು ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾಡೆಲ್ಲಾ ಕರೆದಿದ್ದಾರೆ. ಇದೀಗ ಮೈಕ್ರೋಸಾಫ್ಟ್‌ಗೆ ಪೈಪೋಟಿ ನೀಡುವಂತೆ ಗೂಗಲ್ (Google) ಕೂಡ ಚಾಟ್‌ಬಾಟ್ ಬಾರ್ಡ್ ಅನ್ನು ಪರಿಚಯಿಸಿದ್ದು, ತನ್ನ ಸರ್ಚ್ ಎಂಜಿನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಯಾವಾಗ ಸೇರಿಸಲಿದೆ ಎಂಬ ಮಾಹಿತಿಯನ್ನು ಇದುವರೆಗೆ ನೀಡಿಲ್ಲ ಆದರೆ ತನ್ನ ವೈಶಿಷ್ಟ್ಯವನ್ನು ಇನ್ನಷ್ಟು ಪ್ರಯೋಜನಕಾರಿಯಾಗಿಸಬೇಕೆಂಬ ಗುರಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ.
ಮೈಕ್ರೋಸಾಫ್ಟ್ ಹಾಗೂ ಗೂಗಲ್ ಜಟಾಪಟಿ
ಮೈಕ್ರೋಸಾಫ್ಟ್ ಹಾಗೂ ಗೂಗಲ್ ತಮ್ಮ ಸರ್ಚ್ ಎಂಜಿನ್‌ಗಳನ್ನು ಅತ್ಯುತ್ತಮಗೊಳಿಸುವ ಹೋರಾಟದಲ್ಲಿ ನಿರತವಾಗಿದ್ದು ಇವುಗಳ ನಡುವಿನ ಪೈಪೋಟಿ 14 ವರ್ಷಗಳಷ್ಟು ಹಳೆಯದು ಎಂಬುದಕ್ಕೆ ದಾಖಲೆಗಳಿವೆ. ಗೂಗಲ್‌ಗೆ ಸ್ಪರ್ಧಿಯಾಗಿ ಸ್ಟೀವ್ ಬಾಲ್ಮರ್ ಮತ್ತು ಮೈಕ್ರೋಸಾಫ್ಟ್ ಸರ್ಚ್ ಇಂಜಿನ್ ಬಿಂಗ್ ಅನ್ನು ಪ್ರಾರಂಭಿಸಿದರು.
ಯಾಹೂ, ಲೈಕೋಸ್ ಹಾಗೂ ಎಕ್ಸೈಟ್‌ನಂತಹ ಇತರ ಸರ್ಚ್ ಎಂಜಿನ್‌ಗಳನ್ನು ಮೂಲೆಗೊತ್ತಿ ಗೂಗಲ್ ಲಾಭತರುವ ಹಾಗೂ ವ್ಯವಹಾರ ಮಾದರಿಯ ಸಂಯೋಜನೆಯ ಮೂಲಕ ವರ್ಚುವಲ್ ಏಕಸ್ವಾಮ್ಯವಾಗಿ ನೆಲೆನಿಲ್ಲುವ ಹಾದಿಯನ್ನು ನಿರ್ಮಿಸಿಕೊಂಡಿತು.
ಮೊದಲ ಯುದ್ಧದಂತೆಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ಬಿಂಗ್-ಗೂಗಲ್ ಹುಡುಕಾಟ ಯುದ್ಧವು ಅದೇ ರೀತಿಯದ್ದಾಗಿತ್ತು ಎಂಬುದಾಗಿ ತಂತ್ರಜ್ಞರು ಬಣ್ಣಿಸಿದ್ದಾರೆ. ಹುಡುಕಾಟ ಕ್ಷೇತ್ರದಲ್ಲಿ ಜಯದಾಖಲಿಸಿದ ಗೂಗಲ್ 90% ಕ್ಕಿಂತ ಹೆಚ್ಚಿನ ಹುಡುಕಾಟ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ ಹಾಗೂ ಲಾಭ ಆದಾಯದಲ್ಲಿ ಮೈಕ್ರೋಸಾಫ್ಟ್ ಅನ್ನು ಹಿಂದಿಕ್ಕಿದೆ. ಹೀಗಾಗಿಯೇ ಕೃತಕ ಬುದ್ಧಿಮತ್ತೆಯನ್ನು ಬಿಂಗ್‌ನಲ್ಲಿ ಸೇರ್ಪಡೆಗೊಳಿಸುವ ಮೂಲಕ ಗೂಗಲ್‌ಗೆ ಹೆಚ್ಚಿನ ಸ್ಪರ್ಧೆಯನ್ನು ನೀಡುವ ಸನ್ನಾಹದಲ್ಲಿ ಮೈಕ್ರೋಸಾಫ್ಟ್ ನಿರತವಾಗಿದೆ ಹಾಗೂ ಸತ್ಯ ನಾಡೆಲ್ಲಾ ಇದನ್ನು ಎರಡನೆಯ ವಿಶ್ವಯುದ್ಧ ಎಂದು ಕರೆದಿದ್ದಾರೆ.
ಓಪನ್ಎಐನೊಂದಿಗೆ ಮೈಕ್ರೋಸಾಫ್ಟ್ ಹೂಡಿಕೆ
ಮೈಕ್ರೋಸಾಫ್ಟ್ 2019 ರಿಂದ ಓಪನ್ಎಐ ನೊಂದಿಗೆ ಹೂಡಿಕೆ ಮಾಡಿಕೊಂಡಿದ್ದು ಪಾಲುದಾರ ಎಂದೆನಿಸಿದೆ ಹಾಗೂ ಸಂಸ್ಥೆಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ನೆರವನ್ನು ನೀಡಿದೆ. $10 ಬಿಲಿಯನ್ ಹೂಡಿಕೆಯೊಂದಿಗೆ ಇನ್ನಷ್ಟು ಪೈಪೋಟಿಯನ್ನು ನೀಡಿದೆ. ಮೈಕ್ರೋಸಾಫ್ಟ್ ಕ್ಷಿಪ್ರಗತಿಯಲ್ಲಿ ಕೆಲವೊಂದು ಯೋಜನೆಗಳನ್ನು ಪರಿಚಯಿಸುತ್ತಿದ್ದು ಇತರ ಸ್ಟಾರ್ಟಪ್‌ಗಳು ಹೇಗೆ ಕಲಿಯಬಹುದೆಂಬುದನ್ನು ತೋರಿಸಿಕೊಟ್ಟಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.
ಗೂಗಲ್ ಹುಡುಕಾಟ ಆದಾಯ ಮೈಕ್ರೋಸಾಫ್ಟ್‌ಗಿಂತ 20 ಪಟ್ಟು ಅಧಿಕ
ಗೂಗಲ್‌ನ ಹುಟುಕಾಟ ವ್ಯವಹಾರ ಆದಾಯವು $225 ಶತಕೋಟಿಯಾಗಿದ್ದು ಇದು ಮೈಕ್ರೋಸಾಫ್ಟ್ ಬಿಂಗ್‌ನ 20 ಪಟ್ಟು ಹೆಚ್ಚು ಎಂದೆನಿಸಿದೆ. ದಿನಕ್ಕೆ 8.5 ಶತಕೋಟಿ ಹುಡುಕಾಟಗಳೊಂದಿಗೆ, Google ಬೃಹತ್ ನೆಟ್‌ವರ್ಕ್ ಪರಿಣಾಮಗಳು, ಉನ್ನತ ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಅನುಕೂಲಗಳನ್ನು ಹೊಂದಿದೆ ಮತ್ತು ಹುಡುಕಾಟಕ್ಕೆ ಸಮಾನಾರ್ಥಕವಾಗಿರುವ ಬ್ರ್ಯಾಂಡ್ ಅನ್ನು ಹೊಂದಿದೆ.
ಮೈಕ್ರೋಸಾಫ್ಟ್ ಅನ್ನು ಹಿಂದಿಕ್ಕಿರುವ ಗೂಗಲ್
ಈ ಸಮಯದಲ್ಲಿ ಮೈಕ್ರೋಸಾಫ್ಟ್ ಗೂಗಲ್‌ನ ಮಾರುಕಟ್ಟೆ ಪಾಲನ್ನು ಕಬಳಿಸುವ ಸನ್ನಾಹದಲ್ಲಿದ್ದು ಚಾಟ್‌ಜಿಪಿಟಿ ಮೂಲಕ ಹುಡುಕಾಟ ಕ್ಷೇತ್ರದಲ್ಲಿ ಗೂಗಲ್ ಅನ್ನು ಹಿಮ್ಮೆಟ್ಟಿಸುವ ಸನ್ನಾಹದಲ್ಲಿ ಮೈಕ್ರೋಸಾಫ್ಟ್ ಗುರಿ ಇಟ್ಟಿದೆ. ಮೈಕ್ರೋಸಾಫ್ಟ್ ಹುಡುಕಾಟ ಕ್ಷೇತ್ರದಲ್ಲಿ ಮಾತ್ರ ಗುರಿ ನೆಟ್ಟಿರುವುದಲ್ಲದೆ ಎಂಟರ್‌ಪ್ರೈಸ್ ಸಾಫ್ಟ್‌ವೇರ್, ಕ್ಲೌಡ್ ಮತ್ತು ಗೇಮಿಂಗ್‌ನಲ್ಲಿ ಉತ್ತಮ ಮೌಲ್ಯಗಳನ್ನು ಹೊಂದಿದೆ. ತನ್ನ ಒಟ್ಟು ಆದಾಯದಲ್ಲಿ ಸರ್ಚ್ ಆದಾಯ ಮಾತ್ರ 5%ವಾಗಿದೆ. ಆದರೆ ಗೂಗಲ್ ಈ ವಿಷಯದಲ್ಲಿ ವಿರುದ್ಧವಾಗಿದ್ದು ಹುಟುಕಾಟ ಆದಾಯದಲ್ಲೇ 80% ಪಾಲನ್ನು ಹೊಂದಿದೆ. ಇನ್ನು ಸಂಸ್ಥೆಯ ಇನ್ನಿತರ ದೊಡ್ಡ ವ್ಯವಹಾರಗಳಾದ ಕ್ಲೌಡ್‌ನಲ್ಲಿ ಅರ್ಧಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಕಳೆದುಕೊಂಡಿದೆ. ಹೀಗಾಗಿ ಕ್ಲೌಡ್‌ನಲ್ಲಿ ನಷ್ಟವಾದ ಆದಾಯವನ್ನು ಇನ್ನಿತರ ಕ್ಷೇತ್ರಗಳಲ್ಲಿ ಪಡೆದುಕೊಳ್ಳಬೇಕೆಂಬ ದೃಷ್ಟಿಯನ್ನು ಗೂಗಲ್ ಹೊಂದಿದೆ.
ಬಿಂಗ್‌ನಲ್ಲಿ ಓಪನ್‌ಎಐ ಬಳಸಿಕೊಂಡಿರುವ ಮೈಕ್ರೋಸಾಫ್ಟ್
ಹುಡುಕಾಟ ಜಾಹೀರಾತು ಗೂಗಲ್‌ಗೆ ಅತ್ಯಂತ ಲಾಭದಾಯಕವಾಗಿದೆ, ಮತ್ತು ಮೈಕ್ರೋಸಾಫ್ಟ್ ಇದನ್ನೇ ಬಂಡವಾಳವಾಗಿಸಿಕೊಂಡು ಗೂಗಲ್ ಮೇಲೆ ದಾಳಿನಡೆಸಲು ಆರಂಭಿಸಿದೆ. ಇಂದಿನಿಂದ ಹುಡುಕಾಟದ ವೇಗ ಹಾಗೂ ಗತಿ ಬದಲಾಗಲಿದೆ ಎಂದು ತಿಳಿಸಿರುವ ನಾಡೆಲ್ಲಾ ಮೈಕ್ರೋಸಾಫ್ಟ್‌ನ ಸಾಫ್ಟ್‌ವೇರ್ ಉತ್ಪನ್ನಗಳ ಹೆಚ್ಚಿನ ಗುಣಮಟ್ಟಗಳೊಂದಿಗೆ ಸಂಯೋಜಿಸಲಾದ ಓಪನ್‌ಎಐ ಹೊಸತನವು ಬಳಕೆದಾರರನ್ನು ಗೂಗಲ್‌ನಿಂದ ಮೈಕ್ರೋಸಾಫ್ಟ್‌ನತ್ತ ಸೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ