ಮೈಕ್ರೋಸಾಫ್ಟ್ ನೋಟ್ ಫ್ರಂಟ್ ಕನಿಷ್ಠ ಪಕ್ಷ 15 ಎಫ್‌ಪಿಎಸ್‌ನೊಂದಿಗೆ (1280x720 ಪಿಕ್ಸೆಲ್‌ಗಳು) ರೆಸಲ್ಯೂಶನ್ ಕ್ಯಾಮೆರಾ ಇರಲಿದೆ. ಈ ಕ್ಯಾಮೆರಾ ಅಟೊ ಎಕ್ಸ್‌ಪೋಶರ್ ಮತ್ತು ಅಟೊ ವೈಟ್ ಬ್ಯಾಲೆನ್ಸ್‌ಗೆ ಬೆಂಬಲವನ್ನು ಒದಗಿಸಲಿದೆ. ಮೈಕ್ರೋಸಾಫ್ಟ್ ಹೇಳಿರುವಂತೆ ಮಂದ ಬೆಳಕಿನಲ್ಲಿ ಕ್ಯಾಮೆರಾ ಕನಿಷ್ಠ ಪಕ್ಷ 10 fpsಗೆ ಬೆಂಬಲ ನೀಡಲಿದೆ. ಅಂತೂ ಇಂತೂ 2023 ರಿಂದ ವಿಂಡೋಸ್ 11 ತನ್ನ ಲ್ಯಾಪ್‌ಟಾಪ್‌ಗಳಲ್ಲಿ ಕ್ಯಾಮೆರಾ ಅಥವಾ ಸಬ್-ಎಚ್‌ಡಿ ಕ್ಯಾಮೆರಾಗಳಿಲ್ಲದಂತೆ ನಿರ್ಮಿಸುವುದರತ್ತ ಗಮನಹರಿಸಲಿದೆ.
ಮೈಕ್ರೋಸಾಫ್ಟ್ ಇತ್ತೀಚೆಗೆ ಅತ್ಯಾಧುನಿಕ ಜೆನ್ ವಿಂಡೋಸ್ 11 ಅನ್ನು ಬಿಡುಗಡೆ ಮಾಡಿದ್ದು ಹೆಚ್ಚಿನ ಉತ್ಪಾದಕತೆ ಮತ್ತು ಗೇಮಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಸಾಫ್ಟ್‌ವೇರ್ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಕುರಿತು ಸರಿಯಾದ ಮಾಹಿತಿ ಇಲ್ಲ ಆದರೆ ಇದು ಕನಿಷ್ಠ ಪ್ರಮಾಣದ ಹಾರ್ಡ್‌ವೇರ್ ಅಗತ್ಯಗಳನ್ನು ಹೊಂದಲಿದೆ ಎಂಬುದಾಗಿ ಮಾಹಿತಿ ದೊರಕಿದೆ. ಲ್ಯಾಪ್‌ಟಾಪ್‌ನಲ್ಲಿರುವ ಫ್ರಂಟ್ ಕ್ಯಾಮೆರಾ ಇಂಪ್ರೆಸ್ಸೀವ್ ಆಗಿರಲಿದ್ದು ಕ್ಯಾಮೆರಾದ ಅಸ್ತಿತ್ವದ ಬಗ್ಗೆ ನಿರ್ಧಾರವಾಗಿಲ್ಲ. ಎಲ್ಲಾ ವಿಂಡೋಸ್ – 11 ಲ್ಯಾಪ್‌ಟಾಪ್‌ಗಳಲ್ಲಿ ಈ ಹಾರ್ಡ್‌ವೇರ್ ಅಗತ್ಯತೆ ಕಡ್ಡಾಯವಾಗಿ ಇರಲಿದೆ. ಇನ್ನು ಕಂಪೆನಿ ಹೇಳಿಕೊಂಡಿರುವಂತೆ ವಿಂಡೋಸ್ – 11, 2023 ರಿಂದ ಕ್ಯಾಮೆರಾ ರಹಿತವಾಗಿ ಅಥವಾ ಸಬ್-ಎಚ್‌ಡಿ ಕ್ಯಾಮೆರಾಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲವೆಂದಿದೆ.
ಇನ್ನು ಕ್ಯಾಮೆರಾ ಬಟನ್ ಅಳವಡಿಸಿದಲ್ಲಿ ಇದು ಡ್ಯುಯಲ್ ಆ್ಯಕ್ಷನ್ ಕ್ಯಾಮೆರಾವಾಗಿರಲಿದೆ. ಕೆಲವೊಂದು ವಿಚಾರಗಳು ವಿಂಡೋಸ್ 11 ವಿಷಯದಲ್ಲಿ ಅಲಭ್ಯವಾಗಿದ್ದು ವಿಂಡೋಸ್ ಹೆಲೋ ಎಂಬ ಫೀಚರ್ ಇದರಲ್ಲಿರಲಿದೆ ಎಂಬ ಮಾಹಿತಿ ದೊರಕಿದೆ. ಫೇಸ್ ರೆಕಗ್ನಿಶನ್ ಮೂಲಕ ಲ್ಯಾಪ್‌ಟಾಪ್ ಆ್ಯಕ್ಸೆಸ್ ಮಾಡಬಹುದಾಗಿದ್ದು ಪಾಸ್‌ಕೋಡ್ ಅಗತ್ಯವಿರುವುದಿಲ್ಲ. ಲ್ಯಾಪ್‌ಟಾಪ್ ಕ್ಯಾಮೆರಾ ಅಥವಾ ಮೈಕ್ರೋಫೋನ್‌ಗಳು ಎಷ್ಟು ಸುರಕ್ಷಿತವಾಗಿದೆ. ಇದು ಯಾವುದಾದರೂ ಗೌಪ್ಯತೆ ನಿಯಮಾವಳಿಗಳನ್ನು ಒಳಗೊಂಡಿದೆಯೇ ಎಂಬುದು ತಿಳಿಯಬೇಕಾಗಿದೆ.
ಲ್ಯಾಪ್‌ಟಾಪ್ ಹಾಗೂ ಮೈಕ್ರೋಫೋನ್‌ಗೆ ಮೀಸಲಾದ ಮ್ಯೂಟ್ ಬಟನ್ ಹಾಗೂ ಕ್ಯಾಮೆರಾ ಶಟರ್‌ನೊಂದಿಗೆ ಲೆನ್ಸ್ ಕವರ್ ಮಾಡುವ ಅವಕಾಶವನ್ನೊದಗಿಸುತ್ತದೆ. ಗೇಮಿಂಗ್ ಹಾಗೂ ಮನರಂಜನೆಗೆ ಇದು ಸಂಪೂರ್ಣ ಅವಕಾಶವನ್ನೊದಗಿಸಲಿದ್ದು ಅಪ್ಲಿಕೇಶನ್‌ಗಳ ವ್ಯಾಪಕ ಕ್ಯಾಟಲಾಗ್ ಅನ್ನು ಒಳಗೊಂಡಿದೆ. ಈ ಮೊದಲೇ ನಾವು ತಿಳಿಸಿರುವಂತೆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ವಿಂಡೋಸ್ 11 ಆವೃತ್ತಿಯಲ್ಲಿರಲಿದ್ದು ಅಮೆಜಾನ್ ಅಪ್ಲಿಕೇಶನ್‌ಗಳು ನಿಮಗೆ ಲಭ್ಯವಾಗಲಿದೆ.
ವಿಂಡೋಸ್ 11 ಇಂಟರ್ಫೇಸ್ ತಾಜಾ, ಸ್ವಚ್ಛವಾಗಿದ್ದು ಅರ್ಥಗರ್ಭಿತವಾದ ವಿಶೇಷತೆಗಳನ್ನು ಒಳಗೊಂಡಿದೆ. ಬಳಕೆದಾರರು ಸುಲಭವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದ್ದು ಕ್ರಿಯಾತ್ಮಕತೆಗೆ ಇದೊಳ್ಳೆ ವೇದಿಕೆಯಾಗಲಿದೆ. ಸ್ಕ್ರೀನ್ ಮಧ್ಯಭಾಗದಲ್ಲಿ ಸ್ಟಾರ್ಟ್ ಬಟನ್ ಇರುವುದರಿಂದ ಅದನ್ನು ಕ್ಲಿಕ್ ಮಾಡುವ ಮೂಲಕ ಬಳಕೆದಾರರು ತಮಗೆ ಬೇಕಾದ್ದನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಹೈಬ್ರೀಡ್ ಕೆಲಸ ಮತ್ತು ಕಲಿಕೆಗೆ ಪೂರಕವಾದ ಸುರಕ್ಷಿತ ಆಪರೇಟಿಂಗ್ ಸಿಸ್ಟಂ ಆಗಿ ಈ ಹೊಸ ವಿಂಡೋಸ್ 11 ಅನ್ನು ವಿನ್ಯಾಸಗೊಳಿಸಲಾಗಿದೆ. ವಿಂಡೋಸ್ 11 ಮೂಲಕ ಪ್ರತಿಯೊಬ್ಬರೂ ಕ್ರಿಯಾತ್ಮಕ ರಚನೆ, ಕಲಿಕೆ, ಗೇಮ್ ಪ್ಲೇ ಹೀಗೆ ಸುಧಾರಿತವಾದ ಆರಾಮದಾಯಕ ಸ್ಥಳವನ್ನು ಬಳಕೆದಾರರು ಇಲ್ಲಿ ಪಡೆದುಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ