Microsoft Surface Duo 2 | ತ್ರಿವಳಿ ಕ್ಯಾಮೆರಾ, 8GB RAM; ಮಡಚುವ ಫೋನ್ ಅನಾವರಣಗೊಳಿಸಿದ ಮೈಕ್ರೋಸಾಫ್ಟ್

Microsoft Surface Duo 2 ಫೋಲ್ಡೆಬಲ್ ಡಿವೈಸ್​ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್​ ಹೊಂದಿದ್ದು, RAM ಆಯ್ಕೆಯಲ್ಲಿ ಬದಲಾವಣೆ ಮಾಡಿದೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು 8GB RAM ಗೆ ಅಪ್‌ಗ್ರೇಡ್ ಮಾಡಲಾಗಿದೆ. ಮೈಕ್ರೋಸಾಫ್ಟ್ ಅಧಿಸೂಚನೆಗಳು ಮತ್ತು NFC ಗಾಗಿ ಹಿಂಜ್ ನಲ್ಲಿ ಸೈಡ್ ಪ್ಯಾನಲ್ ಅನ್ನು ಸೇರಿಸಿದೆ.

Microsoft Surface Duo 2

Microsoft Surface Duo 2

 • Share this:
  Microsoft Surface Duo 2: ಮೈಕ್ರೋಸಾಫ್ಟ್ ತನ್ನ ಮುಂದಿನ ಪೀಳಿಗೆಯ ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಫೋಲ್ಡೆಬಲ್ ಸಾಧನವನ್ನು ಅನಾವರಣಗೊಳಿಸಿದೆ. ಫಸ್ಟ್-ಜೆನ್ ಸರ್ಫೇಸ್ ಡ್ಯುಯೊ (2020) ಮತ್ತು ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಫೋಲ್ಡೆಬಲ್ ವಿನ್ಯಾಸವು ಹೆಚ್ಚು ಕಡಿಮೆ ಒಂದೇ ರೀತಿ ಹೋಲುತ್ತದೆಯಾದರೂ, ಅನಾವರಣಗೊಂಡ ನೂತನ ಡಿವೈಸ್​ ಟ್ರಿಪಲ್ ರಿಯರ್ ಕ್ಯಾಮೆರಾಗಳು ಮೂಲಕ ಬರುವುದಾಗಿ ತಿಳಿಸಿದೆ. ಜೊತೆಗೆ ಅಪ್‌ಗ್ರೇಡ್ ಪ್ರೊಸೆಸರ್ ಒಳಗೊಂಡಿದೆ.

  ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಫೋಲ್ಡೆಬಲ್ ಡಿವೈಸ್​ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್​ ಹೊಂದಿದ್ದು, RAM ಆಯ್ಕೆಯಲ್ಲಿ ಬದಲಾವಣೆ ಮಾಡಿದೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು 8GB RAM ಗೆ ಅಪ್‌ಗ್ರೇಡ್ ಮಾಡಲಾಗಿದೆ. ಮೈಕ್ರೋಸಾಫ್ಟ್ ಅಧಿಸೂಚನೆಗಳು ಮತ್ತು NFC ಗಾಗಿ ಹಿಂಜ್ ನಲ್ಲಿ ಸೈಡ್ ಪ್ಯಾನಲ್ ಅನ್ನು ಸೇರಿಸಿದೆ.

  ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಡಿವೈಸ್​ 5.8-ಇಂಚಿನ OLED ಡಿಸ್​ಪ್ಲೇಗಳನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್​, 800 ನಿಟ್ಸ್ ಹೊಳಪು ಮತ್ತು 90Hz ರಿಫ್ರೆಶ್ ರೇಟ್​ ಹೊಂದಿದೆ. ಒಟ್ಟಾಗಿ, ಎರಡು ಡ್ಯುಯೊ 2 ಡಿಸ್​​ಪ್ಲೇಗಳು 8.3 ಇಂಚುಗಳನ್ನು ಹೊಂದಿದೆ.

  ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಫೋಲ್ಡೆಬಲ್ ಡಿವೈಸ್​​ನ ಬಲಭಾಗದಲ್ಲಿರುವ ಪರದೆಯು ಸೆಲ್ಫಿ ಕ್ಯಾಮೆರಾಕ್ಕಾಗಿ ಹೋಲ್-ಪಂಚ್ ಕಟೌಟ್ ನೀಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ನಿಂದ 512GB ವರೆಗೆ ಸಂಗ್ರಹಣೆ ಮತ್ತು 8GB RAM ನೊಂದಿಗೆ ಶಕ್ತಿಯನ್ನು ಪಡೆಯುತ್ತದೆ. ಸರ್ಫೇಸ್ ಡ್ಯುಯೊ 2 ಮೈಕ್ರೋಸಾಫ್ಟ್ 365 ಆಪ್‌ಗಳ ಪೂರ್ವ ಲೋಡ್ ಆಗಿರುವ ಆಂಡ್ರಾಯ್ಡ್ 11 ರ ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

  ನೂತನ ಡಿವೈಸ್​​ನ ಹಿಂಭಾಗದಲ್ಲಿ f/1.7 ಅಪರ್ಚರ್‌ನ 12-ಮೆಗಾಪಿಕ್ಸೆಲ್ ಅಗಲ ಕ್ಯಾಮೆರಾ, 2X ಆಪ್ಟಿಕಲ್ ಜೂಮ್‌ನೊಂದಿಗೆ 12-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 16-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಬಳಸುವ ಟ್ರಿಪಲ್ ಕ್ಯಾಮೆರಾ ನೀಡಿದೆ. ಸೆಲ್ಫಗಾಗಿ  f/2.0 ಅಪರ್ಚರ್ ಮತ್ತು ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಹೊಂದಿರುವ 12 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

  ಸರ್ಫೇಸ್ ಡ್ಯುಯೊ 2 ನಲ್ಲಿನ ಕ್ಯಾಮೆರಾ ಮೂಲಕ 60 ಕೆಪಿಎಸ್ ವರೆಗೆ 4ಕೆ ವಿಡಿಯೋ ರೆಕಾರ್ಡಿಂಗ್, ಪೋರ್ಟ್ರೇಟ್ ಮೋಡ್, ಎಡ ಪ್ಯಾನೆಲ್‌ನಲ್ಲಿ ನಿಯಂತ್ರಣ, ಜೂಮ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

  ಇದನ್ನು ಓದಿ ⇒ YouTube Stop Working: ಸೆ. 27ರಿಂದ ಈ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಯ್ಯುಟೂಬ್​ ಕಾರ್ಯನಿರ್ವಹಿಸುದಿಲ್ಲ!

  ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ ವೈ-ಫೈ 6, ಬ್ಲೂಟೂತ್ 5.1, ಮತ್ತು NFC. ಸರ್ಫೇಸ್ ಡ್ಯುಯೊ 4,449mAh ಬ್ಯಾಟರಿಯನ್ನು ಅಳವಡಿಸಲಾಗಿದೆ, 28 ಗಂಟೆಗಳ ಕಾಲ ಬಳಸಬಹುದಾಗಿದೆ. ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಫೋಲ್ಡೆಬಲ್ ಡಿವೈಸ್​​ ಬೆಲೆ ಸರಿಸುಮಾರು 1,10,700 ರೂ. ನಿಂದ ಆರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ  ಗ್ಯಾಲಕ್ಸಿ Z ಫೋಲ್ಡ್ 3 ಗಿಂತ ಅಗ್ಗವಾಗಿ ಸಿಗಲಿದೆ ಎಂಬ ಮಾಃಇತಿ ಹರಿದಾಡುತ್ತಿದೆ.

  ಮೈಕ್ರೋಸಾಫ್ಟ್​​ ಕಂಪನಿಯು ನಿನ್ನೆ ಈವೆಂಟ್​ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹೊಸ ಸರ್ಫೇಸ್ ಲ್ಯಾಪ್ಟಾಪ್ ಸ್ಟುಡಿಯೋ, ಸರ್ಫೇಸ್ ಗೋ 3 ಮತ್ತು ಸರ್ಫೇಸ್ ಪ್ರೊ 8 ಅನ್ನು ಪರಿಚಯಿಸಿದೆ.

  ಮೈಕ್ರೋಸಾಪ್ಟ್ 2020ರಲ್ಲಿ​ ಫಸ್ಟ್-ಜೆನ್ ಸರ್ಫೇಸ್ ಡ್ಯುಯೊ ಡಿವೈಸ್​ ಅನ್ನು ಪರಿಚಯಿಸಿತು. ನೂತನ ಡಿವೈಸ್​ ಆಕರ್ಷಕ ಲುಕ್ ಹೊಂದಿದ್ದು, ಅಧಿಕ ಫೀಚರಸ್​ ಒಳಗೊಂಡಿತ್ತು. ಅದರಂತೆ ಇದೀಗ ಗ್ರಾಹಕರಿಗೆ ಹೆಚ್ಚಿನ ಫೀಚರ್ಸ್ ಜೊತೆಗೆ ಉತ್ತಮ ಅನುಭವ ಒದಗಿಸುವ ಸಲುವಾಗಿ ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಫೋಲ್ಡೆಬಲ್ ಡಿವೈಸ್​ ಅನ್ನು ಅನಾವರಣಗೊಳಿಸಿದೆ. ನೂತನ ಫೋನ್​ ಯಾವಾಗ ಮಾರುಕಟ್ಟೆಗೆ ಬರಲಿದೆ ಎಂದು ಕಾದು ನೋಡಬೇಕಿದೆ.

  ಒಟ್ಟಿನಲ್ಲಿ ದುಬಾರಿ ಬೆಲೆಯ ಈ ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ 2 ಫೋಲ್ಡೆಬಲ್  ಫೋನ್ ಗ್ರಾಹಕರನ್ನು ಆಕರ್ಷಿಸುವುದಲ್ಲದೆ ಮೋಡಿ ಮಾಡಲಿದೆ.
  Published by:Harshith AS
  First published: