ಆ್ಯಪಲ್​ ಐಪ್ಯಾಡ್​ಗೆ ಸೆಡ್ಡು ಹೊಡೆಯುತ್ತಾ ಸರ್ಫೇಸ್​ ಗೊ?


Updated:July 30, 2018, 3:55 PM IST
ಆ್ಯಪಲ್​ ಐಪ್ಯಾಡ್​ಗೆ ಸೆಡ್ಡು ಹೊಡೆಯುತ್ತಾ ಸರ್ಫೇಸ್​ ಗೊ?

Updated: July 30, 2018, 3:55 PM IST
ಆ್ಯಪಲ್​ ಸಂಸ್ಥೆಯ ಐಪ್ಯಾಡ್​ಗೆ ಸೆಡ್ಡು ಹೊಡೆಯಲು ಅತ್ಯಂತ ಕಡಿಮೆ ಬೆಲೆಯಲ್ಲಿ ನಿರ್ಮಾಣಗೊಂಡಿರುವ ಮೈಕ್ರೋಸಾಫ್ಟ್​ನವರ ಮಿನಿ ಕಂಪ್ಯೂಟರ್​ ಸರ್ಫೇಸ್​ ಗೊ ಗ್ರಾಹಕರಿಗೆ ಹೆಚ್ಚು ಸಂತಸ ನೀಡಲಿದೆ.

ಇನ್ನೆರಡು ದಿನಗಳಲ್ಲಿ ಅಮೆಜಾನ್​.ಕಾಂನಲ್ಲಿ ಅಧಿಕೃತವಾಗಿ ಮಾರಾಟಗೊಳ್ಳಲಿರುವ ಮೈಕ್ರೋಸಾಫ್ಟ್​ ಸರ್ಫೇಸ್​ ಗೋ, 4ಜಿಬಿ RAM ಹಾಗು 64 ಜಿಬಿ ಮತ್ತು 8GB RAM 128GB SSD ಸಾಮರ್ಥ್ಯ ಹೊಂದಿದೆ. ವರ್ಷಾಂತ್ಯಕ್ಕೆ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿರುವ ನೂತನ ಸರ್ಫೇಸ್​ ಗೊ, 399 ಡಾಲರ್​( ಸುಮಾರ್​ 27,000) ಮತ್ತು 549ಡಾಲರ್​( 38,000) ಲಭ್ಯವಿದೆ. ಒಂದು ವೇಳೆ ನಿಮಗೆ ಬ್ಲಾಕ್​ ಟೈಪ್​ ಕವರ್​( ಕೀಲಿ ಮಣೆ) ಬೇಕಾದರೆ ನೀವು 99 ಡಾಲರ್​ ಹೆಚ್ಚು ಪಾವತಿಸಬೇಕು.

ಈ ವರೆಗೆ ಬಿಡುಗಡೆಯಾಗಿರುವ ಸರ್ಫೇಸ್​ ಪ್ರೊ, ಸರ್ಫೇಸ್​ ಲ್ಯಾಪ್​ಟಾಪ್​​​, ಮತ್ತು ಸರ್ಫೇಸ್​ ಬುಕ್​ 2ಗೆ ಹೋಲಿಸಿದರೆ ಉತ್ತಮ ಆಲ್​ ಇನ್​ ಒನ್​ ಲ್ಯಾಪ್​ಟಾಪ್​ ಆಗಿದೆ. ಬಜೆಟ್​ ಪ್ರಿಯರಿಗೆ ಅನುಗುಣವಾಗಿ 10.6 ಇಂಚುಗಳ ಡಿಸ್​ಪ್ಲೇ ಹೊಂದಿದ್ದು, ಆ್ಯಪಲ್​ನವರ ಈಪ್ಯಾಡ್​ಗೆ ಹೋಲಿಸಿದರೆ 7th ಜೆನರೇಷನ್​ ಇಂಟೆಲ್​ ಪ್ರೊಸೆಸರ್​ನ್ನು ಸರ್ಫೇಸ್​ ಗೊಗೆ ಅಳವಡಿಸಲಾಗಿದೆ. ಐ ಪ್ಯಾಡ್​ನಲ್ಲಿ ಮಾತ್ರಾ ಆ್ಯಪಲ್​ ಅಭಿವೃದ್ಧಿ ಪಡಿಸಿದ A10 ಫ್ಯೂಷನ್​ ಪ್ರೊಸೆಸರ್​ ನೀಡಲಾಗಿದೆ.

ಪ್ರೊಸೆಸರ್​ ವಿಚಾರದಲ್ಲಿ ಸರ್ಫೇಸ್​ ಗೊ ಅತ್ಯಂತ ಕಳಪೆ ಪ್ರಮಾಣದಲ್ಲೇ ಕಾರ್ಯ ನಿರ್ವಹಿಸಲಿದೆ ಎನ್ನಬಹುದು, ಇಂಟೆಲ್​ ಪೆಂಟಿಯಮ್​ ಗೋಲ್ಡ್​ ಪ್ರೊಸೆಸರ್​ ಕೇವಲ ದೈನಂದಿನ ಕೆಲಸಗಳಿಗೆ ಉಪಯೋಗ ಮಾಡಬಹುದು, ಆದರೆ ಆ್ಯಪಲ್​ ಫ್ಯೂಷನ್​ ಪ್ರೊಸೆಸರ್​ ಅತ್ಯುತ್ತಮ ಗಾಫಿಕಲ್​ ಟಾಸ್ಕ್​ಗಳನ್ನು ಯಾವುದೇ ಅಡಚಡಣೆ ಇಲ್ಲದೇ ನಿರ್ವಹಿಸಲು ಸೂಕ್ತವಾಗಿದೆ.

ಡಿಸ್​ಪ್ಲೇ ವಿಚಾರದಲ್ಲೂ ಸರ್ಫೇಸ್​ ಗೊ ಅತ್ಯುತ್ತಮ ಡಿಸ್​ಪ್ಲೇಯನ್ನು ಆ್ಯಪಲ್ ಐಪ್ಯಾಡ್​ನಲ್ಲಿ ಬಳಕೆ ಮಾಡಲಾಗಿದೆ,. ಈವರೆಗೆ ಬಿಡುಗಡೆಯಾಗಿರುವ ಸರ್ಫೇಸ್​ ಪ್ರೊ, 12.3 ಇಂಚುಗಳ ಪಿಕ್ಸೆಲ್​ ಸೆನ್ಸ್​ ಡಿಸ್​ಪ್ಲೇ, ಸರ್ಫೇಸ್​ ಲ್ಯಾಪ್​ಟಾಪ್​ನಲ್ಲಿ 13.5 ಇಂಚುಗಳ ಪಿಕ್ಸೆಲ್​ ಸೆನ್ಸ್​ ಡಿಸ್​ಪ್ಲೇ ಅಳವಡಿಸಲಾಗಿದೆ. ಆದರೆ ಸರ್ಫೇಸ್​ ಗೋ 10.6 ಇಂಚುಗಳ ಡಿಸ್​ಪ್ಲೇ ಹೊಂದಿದ್ದು, 1,800 x 1,200 ರೆಸಲ್ಯೂಷನ್​ ಹೊಂದಿದೆ. ಆ್ಯಪಲ್​ ಇದಕ್ಕಿಂತಲೂ ಉತ್ತಮ 2,048 x 1,536 ಡಿಸ್​ಪ್ಲೇ ರೆಸಲ್ಯೂಷನ್​ ಪಡೆದಿದೆ.

ಇನ್ನು ಆಪರೇಟಿಂಗ್​ ಸಿಸ್ಟಂ ನೊಡುವರಿಗೆ ಮೈಕ್ರೋಸಾಫ್ಟ್​ ತನ್ನ ವಿಂಡೋಸ್​ ಎಸ್​ ಎಂಬ ನೂತನ್​ ಒಸ್​ ಅಳವಡಿಸಿದೆ. ಅದಕ್ಕೆ ಆಫರ್​ ಎಂಬಂತೆ ಮೈಕ್ರೋಸಾಫ್ಟ್​ ಆಫಿಸ್​ 365 ಮತ್ತು ಕ್ಲೌಡ್​ನ್ನು ನೀಡುತ್ತಿದೆ. ಇದರಲ್ಲಿ ಸಿಮ್​ ಅಳವಡಿಸಲು ಯಾವುದೇ ಅವಕಾಶವಿಲ್ಲ, ಆದರೆ ಆ್ಯಪ್​ ಐಪ್ಯಾಡ್​ ಸಿಮ್​ ಹಾಗೂ ವೈಫೈ ಆಯ್ಕೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಎಲ್​ಟಿಇ ಆಯ್ಕೆ ನೀಡುವುದಾಗಿ ಮೈಕ್ರೋಸಾಫ್ಟ್​ ಹೇಳಿಕೊಂಡಿದೆಯಾದರೂ ಈ ವಿಚಾರದಲ್ಲಿ ಪ್ರಸಕ್ತ ಸ್ಥಿತಿಯಲ್ಲಿ ಆ್ಯಪಲ್​ಗೆ ಕೌಂಟರ್​ ನೀಡಲು ಮೈಕ್ರೋಸಾಫ್ಟ್​ ಸೋತಿದಎ ಎನ್ನಬಹುದು.

ಆದರೆ ಅತ್ಯಂತ ಹೈಟೆಕ್​ ಫೀಚರ್​ನನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ತರುವ ಮೂಲಕ ಆ್ಯಪಲ್​ಗೆ ಸೆಡ್ಡು ಹೊಡೆಯಲು ತೀರ್ಮಾನಿಸಿರುವ ಮೈಕ್ರೋಸಾಫ್ಟ್​ ಧೈರ್ಯವನ್ನು ನಾವು ಮೆಚ್ಚಲೇಬೇಕು.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ