Mi ಸ್ಮಾರ್ಟ್ ಬ್ಯಾಂಡ್ 6 ವಿಮರ್ಶೆ: ಬಜೆಟ್ ಬೆಲೆಯ ಸ್ಮಾರ್ಟ್ ಫಿಟ್​ನೆಸ್​ ಬ್ಯಾಂಡ್ ಹೇಗೆ..? ಇಲ್ಲಿದೆ ವಿವರ...

Mi ಸ್ಮಾರ್ಟ್ ಬ್ಯಾಂಡ್ 6 ಬೆಲೆ ಭಾರತದಲ್ಲಿ 3,499 ಆಗಿದೆ. ಆದರೆ ಹಿಂದಿನ ಆವೃತ್ತಿಯ Mi ಸ್ಮಾರ್ಟ್ ಬ್ಯಾಂಡ್ ಮಾಡೆಲ್ ಹೊಂದಿರುವವರು 500 ರೂ. ಡಿಸ್ಕೌಂಟ್ ಬೆಲೆಯಲ್ಲಿ ಅಂದರೆ 2,999 ರೂ.ಗೆ Mi ಸ್ಮಾರ್ಟ್ ಬ್ಯಾಂಡ್ 6 ಖರೀದಿಸಬಹುದಾಗಿದೆ.

ಎಂಐ ಸ್ಮಾರ್ಟ್​ 6.

ಎಂಐ ಸ್ಮಾರ್ಟ್​ 6.

  • Share this:
    ಫಿಟ್‌ನೆಸ್ ಪ್ರಿಯರಿಗೆಂದೇ ಶಿಯೋಮಿ ತನ್ನ ಹೊಚ್ಚ ಹೊಸ Mi ಸ್ಮಾರ್ಟ್ ಬ್ಯಾಂಡ್ 6 ಪರಿಚಯಿಸಿದ್ದು ಹೆಸರಾಂತ ಫಿಟ್‌ನೆಸ್ ಟ್ರ್ಯಾಕರ್ ಸಾಲಿಗೆ ಈ ಸ್ಮಾರ್ಟ್‌ಬ್ಯಾಂಡ್‌ ಹೊಸ ಸೇರ್ಪಡೆಯಾಗಿದೆ. Mi ಸ್ಮಾರ್ಟ್ ಬ್ಯಾಂಡ್ 6, SpO2 ಅಳತೆ ಹೊಂದಿದ್ದು Mi ಸ್ಮಾರ್ಟ್ ಬ್ಯಾಂಡ್ 5 ಗಿಂತ ಹೆಚ್ಚಿನ ವ್ಯಾಯಾಮಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ. ಹಾಗಾದರೆ Mi ಸ್ಮಾರ್ಟ್ ಬ್ಯಾಂಡ್ 6 ಫೀಚರ್‌ಗಳು ಇದು Mi ಸ್ಮಾರ್ಟ್ ಬ್ಯಾಂಡ್ 5ಗಿಂತ ಹೇಗೆ ವಿಭಿನ್ನವಾಗಿದೆ.. ಬೆಲೆ ಮೊದಲಾದ ಅಂಶಗಳನ್ನು ತಿಳಿದುಕೊಳ್ಳೋಣ.

    ಭಾರತದಲ್ಲಿ Mi ಸ್ಮಾರ್ಟ್ ಬ್ಯಾಂಡ್ 6 ಬೆಲೆ:

    Mi ಸ್ಮಾರ್ಟ್ ಬ್ಯಾಂಡ್ 6 ಬೆಲೆ ಭಾರತದಲ್ಲಿ 3,499 ಆಗಿದೆ. ಆದರೆ ಹಿಂದಿನ ಆವೃತ್ತಿಯ Mi ಸ್ಮಾರ್ಟ್ ಬ್ಯಾಂಡ್ ಮಾಡೆಲ್ ಹೊಂದಿರುವವರು 500 ರೂ. ಡಿಸ್ಕೌಂಟ್ ಬೆಲೆಯಲ್ಲಿ ಅಂದರೆ 2,999 ರೂ.ಗೆ Mi ಸ್ಮಾರ್ಟ್ ಬ್ಯಾಂಡ್ 6 ಖರೀದಿಸಬಹುದಾಗಿದೆ. ಶಿಯೋಮಿ ಈ ಬ್ಯಾಂಡ್ ಅನ್ನು ಕಪ್ಪು ಬಣ್ಣದೊಂದಿಗೆ ಕಪ್ಪು ಬಣ್ಣದ ಸ್ಟ್ರಾಪ್‌ನೊಂದಿಗೆ ಲಾಂಚ್ ಮಾಡಿದ್ದು ನಿಮ್ಮ ಫಿಟ್‌ನೆಸ್ ಬ್ಯಾಂಡ್ ಕಸ್ಟಮೈಸ್ ಮಾಡಲು ಬೇರೆ ಬೇರೆ ಬಣ್ಣದ ಸ್ಟ್ರಾಪ್‌ಗಳನ್ನು (ಪಟ್ಟಿ) ನೀವು ಖರೀದಿಸಬಹುದಾಗಿದೆ.

    Mi ಸ್ಮಾರ್ಟ್ ಬ್ಯಾಂಡ್ 6 ವಿನ್ಯಾಸ ಹಾಗೂ ವಿಶೇಷತೆಗಳು:

    ಈ ಹಿಂದಿನ Mi ಸ್ಮಾರ್ಟ್ ಬ್ಯಾಂಡ್‌ಗಳಂತೆಯೇ Mi ಸ್ಮಾರ್ಟ್ ಬ್ಯಾಂಡ್ 6 ಎರಡು ವಿಭಾಗಗಳನ್ನು ಹೊಂದಿದ್ದು, ಕ್ಯಾಪ್ಯುಲ್ ಆಕಾರದ ಕೋರ್ ಹಾಗೂ ಟಿಪಿಯು ಸ್ಟ್ರಾಪ್ ಹೊಂದಿದೆ. Mi ಸ್ಮಾರ್ಟ್ ಬ್ಯಾಂಡ್ 6 ಹಿಂದಿನ Mi ಸ್ಮಾರ್ಟ್ ಬ್ಯಾಂಡ್ 5 ಅನ್ನೇ ಹೋಲುವಂತಿದ್ದು ಡಿಸ್‌ಪ್ಲೇಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. Mi ಸ್ಮಾರ್ಟ್ ಬ್ಯಾಂಡ್ 5 ಸಣ್ಣ ಆಯತಾಕಾರದ ಡಿಸ್‌ಪ್ಲೇ ಹೊಂದಿದ್ದರೆ Mi ಸ್ಮಾರ್ಟ್ ಬ್ಯಾಂಡ್ 6 ಕ್ಯಾಪ್ಯುಲ್‌ನ ಮೂಲೆಗಳನ್ನು ವಿಸ್ತಾರಗೊಳಿಸಿದ್ದು ತೆಳುವಾದ ಅಂಚುಗಳನ್ನು ಮೇಲ್ಭಾಗ ಹಾಗೂ ಬದಿಗಳಲ್ಲಿ ಹೊಂದಿದೆ. AMOLED ಡಿಸ್‌ಪ್ಲೇ 1.56 ಇಂಚುಗಳಲ್ಲಿದ್ದು ರೆಸಲ್ಯೂಶನ್ 152x486 ಪಿಕ್ಸೆಲ್‌ಗಳನ್ನು ಹೊಂದಿದೆ. ಮೇಲ್ಭಾಗದಲ್ಲಿ ಟೆಂಪರ್ಡ್ ಗ್ಲಾಸ್ ಹೊಂದಿದ್ದು ಆ್ಯಂಟಿ ಫಿಂಗರ್‌ಪ್ರಿಂಟ್ ಕೋಟಿಂಗ್ ಒಳಗೊಂಡಿದೆ.

    ಮ್ಯಾಗ್ನೆಟಿಕ್ ಚಾರ್ಜರ್ ಬಳಸಿಕೊಂಡು ಡಿವೈಸ್ ಚಾರ್ಜ್ ಮಾಡಬಹುದಾಗಿದೆ. ಕ್ಯಾಪ್ಸುಲ್ ಆಕಾರದ ಡಿವೈಸ್ ಚಾರ್ಜಿಂಗ್ ಪಿನ್ ಹೊಂದಿದ್ದು 125mAh ಬ್ಯಾಟರಿಯನ್ನು ಒಳಗೊಂಡಿದೆ. ಡಿವೈಸ್ ಬಟನ್‌ಗಳನ್ನು ಹೊಂದಿಲ್ಲ, ಬದಲಿಗೆ ಸ್ಪರ್ಶ ಆಧಾರಿತವಾಗಿದೆ. ಜಲಪ್ರತಿರೋಧಕವಾಗಿದ್ದು 5ATMವರೆಗೆ ಪ್ರತಿರೋಧಕ ಶಕ್ತಿ ಹೊಂದಿದೆ. ಇದು ಸ್ವಿಮ್ಮಿಂಗ್ ಅನ್ನು ಟ್ರ್ಯಾಕ್ ಮಾಡುತ್ತದೆ ಎಂಬ ಅಂಶ ಇಲ್ಲಿ ಗಮನಿಸಬೇಕಾದುದು.

    Mi ಸ್ಮಾರ್ಟ್ ಬ್ಯಾಂಡ್ 6 ಫೀಚರ್‌ಗಳು ಹಾಗೂ ಸಾಫ್ಟ್‌ವೇರ್:

    Mi ಸ್ಮಾರ್ಟ್ ಬ್ಯಾಂಡ್ 6 ಫೀಚರ್ ಆಧಾರಿತವಾಗಿದೆ. ಶಿಯೋಮಿ ಉಲ್ಲೇಖಿಸಿರುವಂತೆ 30 ವಿಭಿನ್ನ ಫಿಟ್‌ನೆಸ್ ಮೋಡ್‌ಗಳನ್ನು ಹೊಂದಿದ್ದು ಆರು ವಿಭಿನ್ನ ರೀತಿಯ ವರ್ಕ್‌ಔಟ್‌ಗಳನ್ನು ಪತ್ತೆಹಚ್ಚುತ್ತದೆ. ನೀವು ಹೆಜ್ಜೆಗಳು, ಅಂತರ, ನಿದ್ದೆಯನ್ನು ಟ್ರ್ಯಾಕ್ ಮಾಡುತ್ತದೆ. SpO2ನೊಂದಿಗೆ Mi ಸ್ಮಾರ್ಟ್ ಬ್ಯಾಂಡ್ 6 ಒತ್ತಡ ಟ್ರ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದ್ದು, ಋತುಚಕ್ರದ ಟ್ರ್ಯಾಕಿಂಗ್ ಮಾಡಲಿದೆ.

    Mi Smart Band 6ಗೆ ಆ್ಯಪ್ ಪೇರಿಂಗ್ ಮಾಡುವುದು ಸರಳವಾಗಿದ್ದು ಬ್ಯಾಂಡ್‌ನ ಸೆಟ್ಟಿಂಗ್‌ಗಳನ್ನು ಈ ಮೂಲಕ ಬದಲಾಯಿಸಬಹುದಾಗಿದೆ. ಯಾವ ವಿಜೆಟ್ Mi ಸ್ಮಾರ್ಟ್ ಬ್ಯಾಂಡ್ 6ನಲ್ಲಿ ಗೋಚರಿಸಬಹುದು ಹಾಗೂ ಯಾವ ಆರ್ಡರ್‌ನಲ್ಲಿ ಇದು ಇರಬೇಕು ಎಂಬುದನ್ನು ನೀವು ಆಯ್ಕೆಮಾಡಬಹುದಾಗಿದೆ. ಹೆಚ್ಚಿನ ವಿಜೆಟ್ ಆಯ್ಕೆಗಳಿದ್ದರೂ ಕೇವಲ ಆರು ವಿಜೆಟ್‌ಗಳನ್ನು ಮಾತ್ರವೇ ಸ್ಮಾರ್ಟ್ ಬ್ಯಾಂಡ್ 6ನಲ್ಲಿ ಸೇರಿಸಬಹುದಾಗಿದೆ.

    ಕನೆಕ್ಟ್ ಆದ ಆ್ಯಪ್ ಬಳಸಿ ಆರೋಗ್ಯ ಮೇಲ್ವಿಚಾರಣೆ ವೈಶಿಷ್ಟ್ಯಗಳನ್ನು ಕೂಡ ಕಾನ್ಫಿಗರ್ ಮಾಡಬಹುದಾಗಿದೆ. ಹೃದಯ ಬಡಿತ ಟ್ರ್ಯಾಕಿಂಗ್‌ನ ಆವರ್ತನೆ, ಸಂಪೂರ್ಣ ದಿನದ ಒತ್ತಡ ಟ್ರ್ಯಾಕಿಂಗ್ ಹಾಗೂ ನಿದ್ದೆ ಸಹಾಯಕವನ್ನು (ಸ್ಲೀಪ್ ಅಸಿಸ್ಟೆಂಟ್) ಸಕ್ರಿಯಗೊಳಿಸಹು ದಾಗಿದೆ. ಮಲಗಿರುವಾಗ ನಿಮ್ಮ ರಕ್ತದ ಆಮ್ಲಜನಕದ ಮಟ್ಟ ಪತ್ತೆಹಚ್ಚಲು Mi ಸ್ಮಾರ್ಟ್ ಬ್ಯಾಂಡ್ 6 ತನ್ನ SpO2 ಸಂವೇದಕವನ್ನು ಬಳಸುತ್ತದೆ.

    Mi ಸ್ಮಾರ್ಟ್ ಬ್ಯಾಂಡ್ 6 ಕಾರ್ಯಕ್ಷಮತೆ ಹಾಗೂ ಬ್ಯಾಟರಿ ದೀರ್ಘತೆ:

    ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಎಂದೇ ಹೇಳಬಹುದಾದ ಸ್ಮಾರ್ಟ್ ಬ್ಯಾಂಡ್ ಇದಾಗಿದೆ. ಹೆಜ್ಜೆಗಳ ಎಣಿಕೆ, ಅಂತರಗಳ ಮಾಪನ ಅದೇ ರೀತಿ ವ್ಯಾಯಾಮಗಳ ಟ್ರ್ಯಾಕಿಂಗ್ ಅನ್ನು ಸ್ಮಾರ್ಟ್ ಬ್ಯಾಂಡ್‌ನಲ್ಲಿ ನೋಡಬಹುದಾಗಿದೆ. ಆ್ಯಪಲ್ ವಾಚ್ ಎಸ್‌ಇಯಂತೆಯೇ ಸ್ಮಾರ್ಟ್ ಬ್ಯಾಂಡ್ 6 ಅದೇ ಶ್ರೇಯಾಂಕಾದಲ್ಲಿ ಹೃದಯ ಬಡಿತ ರೀಡಿಂಗ್‌ಗಳನ್ನು ದಾಖಲಿಸುತ್ತದೆ. ನಿದ್ದೆಯ ಟ್ರ್ಯಾಕಿಂಗ್ ವೈಶಿಷ್ಟ್ಯ ಕೂಡ ಸ್ಮಾರ್ಟ್ ಬ್ಯಾಂಡ್ 6ನಲ್ಲಿ ನಿಖರವಾಗಿದೆ. ಶಿಯೋಮಿ ಹೇಳಿರುವಂತೆ ಸ್ಮಾರ್ಟ್ ಬ್ಯಾಂಡ್ 14 ದಿನಗಳ ಬ್ಯಾಟರಿ ದೀರ್ಘತೆಯನ್ನು ನೀಡುತ್ತದೆ ಎಂದಾಗಿದೆ. ನೀವು ವಾರದಲ್ಲಿ ಐದು ದಿನಗಳ ಕಾಲ ವ್ಯಾಯಾಮ ಮಾಡಿ ಎಲ್ಲಾ ಮಾನದಂಡಗಳನ್ನು ನಿಯಮಿತವಾಗಿ ಟ್ರ್ಯಾಕ್ ಮಾಡಿದಲ್ಲಿ ಇಷ್ಟು ದಿನಗಳ ಬ್ಯಾಟರಿ ಬರುವುದು ಸಂದೇಹವಾಗಿದೆ.

    Mi ಸ್ಮಾರ್ಟ್ ಬ್ಯಾಂಡ್ 6 ಹೆಚ್ಚಿನ ಫೀಚರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹೀಗಾಗಿ ಇದು ಹೃದಯ ಬಡಿತವನ್ನು ನಿರಂತರವಾಗಿ ಟ್ರ್ಯಾಕ್ ಮಾಡುವುದಿಲ್ಲ. ಅದೇ ರೀತಿ ನಿಮಗೆ ಬೇಕಿದ್ದರೆ ಮಾತ್ರವೇ ಅದು ಅಪ್ಲಿಕೇಶನ್ ನೋಟಿಫಿಕೇಶನ್‌, ಒತ್ತಡವನ್ನು ಮಾನಿಟರ್ ಮಾಡುವುದು ಮೊದಲಾದ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

    ಇನ್ನು ಬ್ಯಾಂಡ್ ಚಾರ್ಜ್ ಮಾಡುವುದು ಸರಳವಾಗಿದೆ. ಬ್ಯಾಂಡ್‌ನ ಒಳಭಾಗದಲ್ಲಿ ಮ್ಯಾಗ್ನೆಟಿಕ್ ಚಾರ್ಜರ್ ಅನ್ನು ಸುರಕ್ಷಿತವಾಗಿ ಅಳವಡಿಸಲಾಗಿದೆ. 0ಯಿಂದ 40% ಚಾರ್ಜ್ ಅನ್ನು 30 ನಿಮಿಷಗಳಲ್ಲಿ ಮಾಡಬಹುದಾಗಿದ್ದು 83% ಚಾರ್ಜ್ ಅನ್ನು ಒಂದು ಗಂಟೆಯಲ್ಲಿ ಮಾಡಬಹುದು. Mi ಸ್ಮಾರ್ಟ್ ಬ್ಯಾಂಡ್ 5ಗಿಂತ ಬ್ಯಾಟರಿ ದೀರ್ಘತೆ ಕಡಿಮೆ ಇರುವುದರಿಂದ, ನೀವು ಆಗಾಗ್ಗೆ ಚಾರ್ಜ್ ಮಾಡಬೇಕಾಗುತ್ತದೆ.

    ಇದನ್ನೂ ಓದಿ: Sofa Set: ಮನೆಗೆ ಸೂಕ್ತವಾದ ಸೋಫಾ ಸೆಟ್ ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸೂಪರ್​ ಟಿಪ್ಸ್‌

    ಅಂತಿಮ ಮಾತು:

    Mi ಸ್ಮಾರ್ಟ್ ಬ್ಯಾಂಡ್ 5ಗೆ ಹೋಲಿಸಿದಾಗ ಶಿಯೋಮಿ ತನ್ನ Mi ಸ್ಮಾರ್ಟ್ ಬ್ಯಾಂಡ್ 6 ಸಾಕಷ್ಟು ಫೀಚರ್‌ಗಳನ್ನು ಸುಧಾರಿಸಿದೆ. ಇನ್ನು Mi ಸ್ಮಾರ್ಟ್ ಬ್ಯಾಂಡ್ 6 ಬ್ಯಾಟರಿಯಲ್ಲಿ ಅಷ್ಟೊಂದು ಧನಾತ್ಮಕ ಅಂಶವನ್ನು ಹೊಂದಿಲ್ಲ. ಅದಾಗ್ಯೂ 8-10 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ಹಾಗಾಗಿ ಈ ಬೆಲೆಗೆ ಇದೊಂದು ಉತ್ತಮ ಫಿಟ್‌ನೆಸ್ ಬ್ಯಾಂಡ್ ಆಗಿದೆ.
    Published by:MAshok Kumar
    First published: