Mi CC9 Pro: ಬಿಡುಗಡೆಯಾಯ್ತು 108 ಮೆಗಾಫಿಕ್ಸೆಲ್ ಕ್ಯಾಮೆರಾವಿರುವ ಶಿಯೋಮಿ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​

Xiaomi Mi CC9 Pro: ‘ಮಿ ಸಿಸಿ9 ಪ್ರೊ‘ ಸ್ಮಾರ್ಟ್​ಫೋನ್ 6.4​ಫುಲ್​ ಹೆಚ್​ಡಿ+ ಅಮೋಲ್ಡ್​ ವಾಟರ್​ ಡ್ರಾಪ್​ ನಾಚ್​ ಡಿಸ್​ಪ್ಲೇ ಹೊಂದಿದ್ದು, ಸ್ನಾಪ್​ಡ್ರ್ಯಾಗನ್​​ ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ.

news18-kannada
Updated:November 5, 2019, 4:24 PM IST
Mi CC9 Pro: ಬಿಡುಗಡೆಯಾಯ್ತು 108 ಮೆಗಾಫಿಕ್ಸೆಲ್ ಕ್ಯಾಮೆರಾವಿರುವ ಶಿಯೋಮಿ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​
ಮಿಸಿಸಿ 9 ಪ್ರೊ
  • Share this:
ಈಗಾಗಲೇ ಗ್ರಾಹಕರಲ್ಲಿ ಕುತೂಹಲ ಮೂಡಿಸಿರುವ ಶಿಯೋಮಿಯ ‘ಮಿಸಿಸಿ 9 ಪ್ರೊ‘ ಸ್ಮಾರ್ಟ್​ಫೋನ್​ ಇಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. 108 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಹೊಂದಿರುವ ಈ ನೂತನ ಸ್ಮಾರ್ಟ್​ಫೋನ್​ ಸದ್ಯದಲ್ಲೇ ಗ್ರಾಹಕರ ಕೈಸೇರಲಿದೆ.

ಚೀನಾದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ನೂತನ ಸ್ಮಾರ್ಟ್​ಫೋನ್​ ಬಿಡುಗಡೆಯಾಗಿದೆ. ಇದರ ಜೊತೆಗೆ ಶಿಯೋಮಿ ‘ಮಿ ಟಿವಿ 5‘ ‘ಅಕಾ ಮಿ‘ ಸ್ಮಾರ್ಟ್​ವಾಚ್​ ಅನ್ನು ಪರಿಚಯಿಸಿದೆ. ಭಾರತೀಯ ಕಾಲ ಮಾನದ ಪ್ರಕಾರ ಬೆಳಗ್ಗೆ 11:30ಕ್ಕೆ ರಿಲೀಸ್​ ಆಗಿದೆ.

‘ಮಿ ಸಿಸಿ9 ಪ್ರೊ‘ ಸ್ಮಾರ್ಟ್​ಫೋನ್ 6.4​ಫುಲ್​ ಹೆಚ್​ಡಿ+ ಅಮೋಲ್ಡ್​ ವಾಟರ್​ ಡ್ರಾಪ್​ ನಾಚ್​ ಡಿಸ್​ಪ್ಲೇ ಹೊಂದಿದ್ದು, ಸ್ನಾಪ್​ಡ್ರ್ಯಾಗನ್​​ ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್​ ಬೆಂಬಲವನ್ನು ಪಡೆದಿದೆ. ಈ ನೂತನ ಸ್ಮಾರ್ಟ್​ಫೋನ್​ 6GB RAM​ ಒಳಗೊಂಡಿದೆ.

ಕ್ಯಾಮೆರಾ ವಿಶೇಷತೆ:

ಶಿಯೋಮಿ 'ಮಿ ಸಿಸಿ9 ಪ್ರೊ' ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ​ 108 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 13 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಫೋಟೋ ತೆಗೆಯಲು ಸಹಾಯಕವಾಗುವಂತೆ ಎಲ್​ಇಡಿ ಪ್ಲಾಶ್​ ಕೂಡ ನೀಡಲಾಗಿದೆ. ಸ್ಮಾರ್ಟ್​ಫೋನ್​​ ಮುಂಭಾಗದಲ್ಲಿ 32 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ.

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading