ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ಸ್ ಕಂಪೆನಿಯ ಹೊಸ ಕಾಂಪ್ಯಾಕ್ಟ್ ಎಸ್​ಯುವಿ ಕಾರು

ಕಿಯಾ ಸೆಲ್ಟೋಸ್​. ಹುಂಡೈ ಕ್ರೆಟಾ ಕಾರುಗಳು ಕಡಿಮೆ ಬೆಲೆಗೆ ಗ್ರಾಹಕರ ಕೈ ಸೇರುತ್ತಿದ್ದು, ಈ ಕಾರಣಕ್ಕಾಗಿ ಎಂಜಿ ಹೆಕ್ಟಾರ್​,  ಸಂಸ್ಥೆ 9.50 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳನ್ನು ಉತ್ಪಾದಿಸುತ್ತಿದೆ.

news18-kannada
Updated:October 30, 2019, 3:55 PM IST
ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ಸ್ ಕಂಪೆನಿಯ ಹೊಸ ಕಾಂಪ್ಯಾಕ್ಟ್ ಎಸ್​ಯುವಿ ಕಾರು
.
  • Share this:
ಎಂಜಿ ಹೆ​ಕ್ಟಾರ್​​​ ಸಂಸ್ಥೆ ಎಸ್​ಯುವಿ ಕಾರುಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾದ ನಂತರ ಮತ್ತಷ್ಟು ಹೊಸ ಕಾರುಗಳನ್ನು ಮಾರುಕಟ್ಟೆಯತ್ತ ತರಲು ಚಿಂತನೆ ನಡೆಸಿದೆ. ಡಿಸೆಂಬರ್​ ಅಂತ್ಯಕ್ಕೆ ಜೆಡ್​ಎಸ್​ ಎಲೆಕ್ಟ್ರಿಕ್​​ ಕಾರುಗಳನ್ನು ಬಿಡುಗಡೆಗೊಳಿಸಿದ ಬಳಿಕ ಅಗ್ಗದ ಬೆಲೆಯ ಕಾರುಗಳನ್ನು ಮಾಡುಕಟ್ಟೆಗೆ ತರಲು ಯೋಜನೆ  ಹಾಕಿಕೊಂಡಿದೆ.

ಎಂಜಿ ಹೆಕ್ಟಾರ್ ಕಾ​ರುಗಳ ಆರಂಭದ ಬೆಲೆ 12. 18 ಲಕ್ಷ ರೂ ಇದ್ದು, ​ ಟಾಪ್​ ಎಂಡ್​ ಮಾದರಿ ಕಾರುಗಳು ಬೆಲೆ 16.88 ಲಕ್ಷದ ವರೆಗೆ ಇದೆ. ಹಾಗಾಗಿ ಎಂಜಿ ಹೆಕ್ಟಾರ್​ ಸಂಸ್ಥೆ ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಉತ್ಪಾದಿಸುತ್ತಿದೆ.

ಕಿಯಾ ಸೆಲ್ಟೋಸ್​. ಹುಂಡೈ ಕ್ರೆಟಾ ಕಾರುಗಳು ಕಡಿಮೆ ಬೆಲೆಗೆ ಗ್ರಾಹಕರ ಕೈ ಸೇರುತ್ತಿದ್ದು, ಈ ಕಾರಣಕ್ಕಾಗಿ ಎಂಜಿ ಹೆಕ್ಟಾರ್​  ಸಂಸ್ಥೆ 9.50 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳನ್ನು ಉತ್ಪಾದಿಸುತ್ತಿದೆ. 2020ರ ಫೆಬ್ರವರಿಯಲ್ಲಿ ನಡೆಯುವ ದೆಹಲಿ ಆಟೋ ಎಕ್ಸ್​ಪೋದಲ್ಲಿ ನೂತನ ಕಾರನ್ನು ಪರಿಚಯಿಸಲಿದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್​ ವರ್ಷನ್​ ಬಿಡುಗಡೆ​; ಹೀಗೆ ಮಾಡಿದ್ರೆ ನಿಮ್ಮ ಫೋನ್​ಗೂ ಲಭ್ಯಎಂಜಿ ಹೆಕ್ಟಾರ್​ ಕಾರು ಸಂಸ್ಥೆ ಉತ್ಪಾದಿಸುತ್ತಿರುವ ಕಡಿಮೆ ಬೆಲೆಯ ಕಾಂಪ್ಯಕ್ಟ್​​​ ಎಸ್​ಯುವಿ ಕಾರು ಹುಂಡೈ ವೆನ್ಯೂ,  ಕಿಯಾ ಮೋಟಾರ್ಸ್​, ಸುಜುಕಿ ಬ್ರೆಝಾ, ಮಹಿಂದ್ರಾ ಎಕ್ಸ್​ಯುವಿ300 ಕಾರುಗಳಿಗೆ ಪೈಪೋಟಿ ನೀಡಲಿದೆ. ನೂತನ ಕಾರನ್ನು ಪೆಟ್ರೋಲ್ ಮತ್ತು ಡಿಸೇಲ್​ ಎರಡು ಮಾದರಿಯಲ್ಲೂ ತಯಾರಿಸಲಾಗುತ್ತಿದ್ದು, ಹೈಬ್ರಿಡ್​​ ಎಂಜಿನ್​ಗಳನ್ನು ಜೋಡಿಸಲಾಗಿದೆ.
First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading