ಇನೋವಾ ಕಾರಿಗೆ ಪ್ರತಿಸ್ಪರ್ಧೆ ನೀಡಲು MG ಹೆಕ್ಟಾರ್ ಬಿಡುಗಡೆ ಮಾಡಿದೆ ನೂತನ ಕಾರು

MG Hector Plus: ಕಳೆದ ವರ್ಷ ಎಂಜಿ ಮೊಟಾರ್ಸ್​ ಹೆಕ್ಟಾರ್​ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕಂಡುಕೊಂಡಿತು. ಇದೀಗ ಹೆಕ್ಟಾರ್​ ಪ್ಲಸ್​ ಕಾರನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಗ್ರಾಹಕರಿಗಾಗಿ ನೂತನ ಕಾರು 6 ಸೀಟನ್ನು ಒಳಗೊಂಡಿದ್ದು, 4 ವೆರಿಯಂಟ್​ಗಳಲ್ಲಿ ಲಭ್ಯವಿದೆ.

news18-kannada
Updated:July 13, 2020, 5:55 PM IST
ಇನೋವಾ ಕಾರಿಗೆ ಪ್ರತಿಸ್ಪರ್ಧೆ ನೀಡಲು MG ಹೆಕ್ಟಾರ್ ಬಿಡುಗಡೆ ಮಾಡಿದೆ ನೂತನ ಕಾರು
ಎಂಜಿ ಹೆಕ್ಟಾರ್​​ ಪ್ಲಸ್
  • Share this:
ಎಂಜಿ ಹೆಕ್ಟಾರ್​​ ಪ್ಲಸ್​ ನೂತನ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮಹಾಮಾರಿ ಕೊರೋನಾ ಅವಾಂತರದಿಂದಾಗಿ ನೂತನ ಕಾರಿನ ಬಿಡುಗಡೆ ಕಾರ್ಯಕ್ರಮ ಕೊಂಚ ವಿಳಂಬವಾಗಿತ್ತು. ಇದೀಗ ಎಂಜಿ ಮೋಟಾರ್ಸ್​ ಸಂಸ್ಥೆ  ಹೆಕ್ಟಾರ್​ ಪ್ಲಸ್​ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎಂಜಿ ಹೆಕ್ಟಾರ್​ ಪ್ಲಸ್​​ ಕಾರಿನ ವಿಶೇಷತೆ:

ಕಳೆದ ವರ್ಷ ಎಂಜಿ ಮೊಟಾರ್ಸ್​ ಹೆಕ್ಟಾರ್​ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕಂಡುಕೊಂಡಿತು. ಇದೀಗ ಹೆಕ್ಟಾರ್​ ಪ್ಲಸ್​ ಕಾರನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದೆ. ಗ್ರಾಹಕರಿಗಾಗಿ ನೂತನ ಕಾರು 6 ಸೀಟನ್ನು ಒಳಗೊಂಡಿದ್ದು, 4 ವೆರಿಯಂಟ್​ಗಳಲ್ಲಿ ಲಭ್ಯವಿದೆ.

ಎಂಜಿ ಹೆಕ್ಟಾರ್​ ಪ್ಲಸ್​ ಕಾರು ಸ್ಟೈಲ್​, ಸೂಪರ್​, ಸ್ಮಾರ್ಟ್​, ಮತ್ತು ಶಾರ್ಪ್​ ವೆರಿಯಂಟ್​ನಲ್ಲಿ ಬಿಡುಗಡೆಯಾಗಿದೆ. ಪೆಟ್ರೋಲ್​ ಮತ್ತು ಡಿಸೇಲ್​ ಎಂಜಿನ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ವಿಶೇಷ ಫೀಚರ್ಸ್​​ಗಳನ್ನು ನೂತನ ಕಾರಿನಲ್ಲಿ ನೀಡಲಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲಿದೆ.

ಇನ್ನು ಎಂಜಿ ಹೆಕ್ಟಾರ್​ ಪ್ಲಸ್​​ ಕಾರು ಎಲ್​ಇಡಿ ಡಿಆರ್​ಐಎಸ್​​, ಟ್ವೀಕೆಡ್​​​ ಹೆಡ್​ಲ್ಯಾಂಪ್​​ ಅಳವಡಿಸಲಾಗಿದೆ. ಬಂಪರ್​​, ಪ್ಲೋಟಿಂಗ್​ ಟರ್ನ್​ ಇಂಡಿಕೇಟರ್ಸ್​, ಹೊಸ ಟೈಲ್​​ ಲ್ಯಾಂಪ್ಸ್​​​, ಸ್ಕಿಡ್​​ ಪ್ಲೇಟ್​​ ಸೇರಿದಂತೆ ಕೆಲವು ಬದಲಾವಣೆಯನ್ನು ಇದರಲ್ಲಿ ನೀಡಲಾಗಿದೆ. ಹಾಗಾಗಿ ನೂತನ ಕಾರು ಈ ಮೊದಲು ಬಿಡುಗಡೆಗೊಂಡ ಕಾರಿಗಿಂತ ವಿಭಿನ್ನವಾಗಿದೆ.

ಗ್ರಾಹಕರಿಗಾಗಿ ಎಂಜಿ ಮೋಟಾರ್ಸ್​ ಹೆಕ್ಟಾರ್ ಪ್ಲಸ್​ ಕಾರನ್ನು 6 ಬಣ್ಣದಲ್ಲಿ ಪರಿಚಯಿಸಿದೆ. ಜೊತೆಗೆ ಸುರಕ್ಷಿತ ಚಾಲನೆಗಾಗಿ 6 ಏರ್​ಬ್ಯಾಗ್​ ನೀಡಿದೆ. ಅಷ್ಟೇ ಅಲ್ಲದೆ, 55+ ಕನೆಕ್ಟಿವಿಟಿ ಫೀಚರ್ಸ್​​​, ಎಬಿಸ್​​, ಇಬಿಡಿ, ಹಿಲ್​​ ಹೋಲ್ಡ್​​ ಫಂಕ್ಷನ್​, ಸೇರಿಂದತೆ ಹೆಚ್ಚಿನ ಫೀಚರ್ಸ್​​ಗಳು ಈ ಕಾರಿನಲ್ಲಿ ನೀಡಲಾಗಿದೆ.

ಎಂಜಿ ಹೆಕ್ಟಾರ್​ ಪ್ಲಸ್​​
ಕಾರಿನ ಬೆಲೆ:

ಎಂಜಿ ಹೆಕ್ಟಾರ್​​ ಪ್ಲಸ್​​ ಕಾರಿನ ಬೆಲೆ 13.48 ಲಕ್ಷ ರೂಪಾಯಿ (ಎಕ್ಸ್​​ ಶೋ ರೂಂ).

ಟಾಪ್​ ಎಂಡ್​ ಮಾಡೆಲ್​ ಕಾರಿನ ಬೆಲೆ 18.253 ಲಕ್ಷ ರೂಪಾಯಿ (ಎಕ್ಸ್​​ ಶೋ ರೂಂ)

ಆಗಸ್ಟ್​ ತಿಂಗಳಿನವರೆಗೆ ಈ ಬೆಲೆಗೆ ಕಾರು ಸಿಗಲಿದೆ. ಬಳಿಕ ಪ್ರತಿ ಮಾಡೆಲ್​ಗೂ 50 ಸಾವಿರ ರೂಪಾಯಿ ಹೆಚ್ಚಳವಾಗಲಿದೆ.

Bhajarangi 2 Teaser: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ಭಜರಂಗಿ-2 ಟೀಸರ್​; ಎಷ್ಟು ವೀಕ್ಷಣೆ ಕಂಡಿದೆ?

ಸ್ಯಾಂಡಲ್​ವುಡ್​ ಖ್ಯಾತ ನಟನ ತಾಯಿಗೆ ಕೊರೋನಾ ಪಾಸಿಟಿವ್​!
Published by: Harshith AS
First published: July 13, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading