ಎಂಜಿ ಹೆಕ್ಟಾರ್ ಇ-ಇಂಟರ್​​ನೆಟ್​​ ಕಾರು ಮಾರುಕಟ್ಟೆಗೆ; 1.50 ಲಕ್ಷ ಕಿ.ಮೀ ಬ್ಯಾಟರಿ ವ್ಯಾರೆಂಟಿ!

ಹೊಸ ಅನುಭವವನ್ನು ನೀಡುವ ನಿಟ್ಟಿನಲ್ಲಿ ಎಂಜಿ ಇ-ಶೀಲ್ಡ್​ ಕಾರನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಖಾಸಗಿಯಾಗಿ ನೋಂದಾಯಿತ ಗ್ರಾಹಕರಿಗೆ 5 ವರ್ಷ ವ್ಯಾರಂಟಿ ಒದಗಿಸುತ್ತಿದೆ.

news18-kannada
Updated:January 23, 2020, 6:47 PM IST
ಎಂಜಿ ಹೆಕ್ಟಾರ್ ಇ-ಇಂಟರ್​​ನೆಟ್​​ ಕಾರು ಮಾರುಕಟ್ಟೆಗೆ; 1.50 ಲಕ್ಷ ಕಿ.ಮೀ ಬ್ಯಾಟರಿ ವ್ಯಾರೆಂಟಿ!
ಇ-ಇಂಟರ್​​ನೆಟ್​​ ಕಾರು
  • Share this:
ವಾಹನ ತಯಾರಕ ಕಂಪನಿಯಾದ ಮೋರಿಸ್ ಗ್ಯಾರೇಜಸ್ (ಎಂಜಿ) ಮೋಟಾರ್ಸ್​ ಇಂಡಿಯಾ, ಗುರುವಾರ ಎಲೆಕ್ಟ್ರಿಕ್​ ಇಂಟರ್​ನೆಟ್​ ಎಸ್​ಯುವಿ ಝೆಡ್​​​​ಎಸ್​ ಇವಿ ಕಾರು ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಹೊಸ ಅನುಭವವನ್ನು ನೀಡುವ ನಿಟ್ಟಿನಲ್ಲಿ ಎಂಜಿ ಇ-ಶೀಲ್ಡ್​ ಕಾರನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಖಾಸಗಿಯಾಗಿ ನೋಂದಾಯಿತ ಗ್ರಾಹಕರಿಗೆ 5 ವರ್ಷ ವ್ಯಾರಂಟಿ ಒದಗಿಸುತ್ತಿದೆ. ಅದರ ಜೊತೆಗೆ ಬ್ಯಾಟರಿ ಬಾಳಿಕೆಯನ್ನು 8 ವರ್ಷ ಅವಧಿಯವರೆಗೆ ಅಥವಾ 1.50 ಲಕ್ಷ ಕಿ.ಮೀವರೆಗೆ ನೀಡುತ್ತಿದೆ.

ಎಲೆಕ್ಟ್ರಿಕ್​ ಇಂಟರ್​ನೆಟ್​ ಎಸ್​ಯುವಿ ಝೆಡ್​​​​ಎಸ್​ ಇವಿ ಕಾರು


ನೂತನ ಕಾರು 20.88 ಲಕ್ಷ ರೂ. ಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಜನವರಿ 17ರ ಮಧ್ಯರಾತ್ರಿ ಮೊದಲು ಮುಂಗಡವಾಗಿ ಕಾರು ಕಾಯ್ದಿರಿಸಿದವರಿಗೆ 19.88 ಲಕ್ಷ ರೂ.ಗೆ ಮಾರಾಟ ಮಾಡಿತ್ತು. ಇದೀಗ ಮಾರುಕಟ್ಟೆಯಲ್ಲಿ  ಝೆಡ್​ಎಸ್​ ಇವಿ 23.58 ಲಕ್ಷ ರೂ. ಬದಲಿಗೆ 20.88 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ.

ಎಂಜಿ ಮೋಟಾರ್ ಇಂಡಿಯಾ ಜನವರಿ 27 ರಂದು ದೆಹಲಿ, ಅಹಮದಾಬಾದ್, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಈ ಕಾರಿನ ವಿತರಣೆ ಮಾಡಲಿದೆ.

ಇದನ್ನೂ ಓದಿ: PHOTOS: ನಿಖಿಲ್ ಕುಮಾರಸ್ವಾಮಿ ಅವರ ಕಾರ್ ಕ್ರೇಜ್ ಬಗ್ಗೆ ನಿಮಗೆಷ್ಟು ಗೊತ್ತು?

ಇದನ್ನೂ ಓದಿ: Video Viral: ನಡುರಸ್ತೆಯಲ್ಲೇ ಯುವತಿಯರ ಸೆಲ್ಫಿ ಕ್ರೇಜ್; ಸಣ್ಣ ತಪ್ಪಿಗೆ ತೆತ್ತಿದ್ದು ಭಾರೀ ಬೆಲೆ

 
First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ