• Home
 • »
 • News
 • »
 • tech
 • »
 • ದೇಶದ ಮೊದಲ ಇಂಟರ್​ನೆಟ್​ ಕಾರ್​​ ಬಿಡುಗಡೆ: ಹೇಗಿದೆ ಗೊತ್ತಾ? ಈ ಸ್ಮಾರ್ಟ್ ಕಾರ್!

ದೇಶದ ಮೊದಲ ಇಂಟರ್​ನೆಟ್​ ಕಾರ್​​ ಬಿಡುಗಡೆ: ಹೇಗಿದೆ ಗೊತ್ತಾ? ಈ ಸ್ಮಾರ್ಟ್ ಕಾರ್!

ಎಮ್​ಜಿ ಹೆಕ್ಟರ್

ಎಮ್​ಜಿ ಹೆಕ್ಟರ್

ವಿಶೇಷ ಫೀಚರ್​ ಅಳವಡಿಸಿಕೊಂಡಿರುವ ಹೆಕ್ಟಾರ್​ ಕಾರ್​​ನಲ್ಲಿ​​​ ಮುಂದಿನ ಜನರೇಷನ್​ಗೆ ಅನುಗುಣವಾದ ಐ-ಸ್ಮಾರ್ಟ್​ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

 • News18
 • Last Updated :
 • Share this:

  ಜನಪ್ರಿಯ ಎಮ್​ಜಿ ಮೋಟಾರ್​ ಸಂಸ್ಥೆ ‘ಹೆಕ್ಟರ್‘ ಹೆಸರಿನ ನೂತನ ಕಾರೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಶೇಷ ಫೀಚರ್​ ಅಳವಡಿಸಿಕೊಂಡಿರುವ ಹೆಕ್ಟಾರ್​ ಕಾರ್​​ನಲ್ಲಿ​​​ ಮುಂದಿನ ಜನರೇಷನ್​ಗೆ ಅನುಗುಣವಾದ ಐ-ಸ್ಮಾರ್ಟ್​ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಲ್ಲದೇ, ಎಮ್​ಜಿ ಮೊಟಾರ್​ ಸಂಸ್ಥೆಯ  ಮೊದಲ ಇಂಟರ್​ನೆಟ್​ ಕಾರ್​​ ಎಂಬ ಖ್ಯಾತಿ ಪಡೆದುಕೊಂಡಿದೆ.


  ನೂತನ ಎಮ್​ಜಿ ಹೆಕ್ಟರ್​​ ಕಾರ್​​​​ 1835 ಮಿಲಿಮೀಟರ್​ ಅಗಲವನ್ನು, 1760 ಮಿಲಿಮೀಟರ್​​ ಎತ್ತರವನ್ನು ಹೊಂದಿದೆ.  ಕಾರಿನಲ್ಲಿ 10 ಸ್ಪೋಕ್​ ಅಲಾಯ್​ ವೀಲ್​ ಅಳವಡಿಸಲಾಗಿದೆ, ಪವರ್​​ ಎಜೆಸ್ಟೇಬಲ್​ ಸೀಟ್​, ಎಲೆಕ್ಟ್ರಾನಿಕ್​​ ಪಾರ್ಕಿಂಗ್​ ಬ್ರೇಕ್​, 360 ಡಿಗ್ರಿ ಕ್ಯಾಮೆರಾ ನೀಡಲಾಗಿದೆ.


  ಇದನ್ನೂ ಓದಿ: ತೆಲಂಗಾಣದ ತಾಂಡೂರದಲ್ಲಿ ಬಿಎಸ್​ವೈ ರಣಕಹಳೆ; ಪರರಾಜ್ಯಕ್ಕೆ ಯಡಿಯೂರಪ್ಪ ಅಂಡ್ ಟೀಮ್ ಹೋಗಿದ್ಯಾಕೆ?


  ಐ-ಸ್ಮಾರ್ಟ್​ ಹೆಕ್ಟಾರ್​ ಕಾರು:


  ಎಮ್​ಜಿ ಮೋಟಾರ್ ಸಂಸ್ಥೆ ಬಿಡುಗಡೆಗೊಳಿಸಿದ ಮೊದಲ ಇಂಟರ್​ನೆಟ್​ ಅಳವಡಿಸಿದ ಕಾರ್ ಇದಾಗಿದೆ. ವಿಶೇಷವೆಂದರೆ ಹೆಕ್ಟರ್ ಕಾರ್​​ ಅಳವಡಿಸಿರುವ ಐ-ಸ್ಮಾರ್ಟ್​ ​ ತಂತ್ರಜ್ಞಾನ ಸ್ಮಾರ್ಟ್​ ಅಪ್ಲಿಕೇಶನ್​ನಿಂದ ಕಾರ್ಯ ನಿರ್ವಹಿಸುತ್ತಿದೆ.


  ಇನ್ನು ಕಾರಿನಲ್ಲಿ  10.4 ಈಚಿನ ಅಲ್ಟ್ರಾ ಡಿಸ್​ಪ್ಲೇವೊಂದನ್ನು ಅಳವಡಿಸಲಾಗಿದೆ. ನಿಮ್ಮ ಬಳಕೆಗೆ ತಕ್ಕಂತೆ ಸೆಟ್ಟಿಂಗ್​ ಮಾಡಬಹುದಾಗಿದೆ. ಅಂತೆಯೇ, ವಾತಾವರಣಕ್ಕೆ ಅನುಗುಣವಾಗಿ ಅಲ್ಟ್ರಾ ಡಿಸ್​​ಪ್ಲೇಯನ್ನು ತಯಾರಿಸಲಾಗಿದೆ.


  ನೂತನ ಕಾರಿನಲ್ಲಿ ಸಿಮ್​ ಅಳವಡಿಸುವ ತಂತ್ರಜ್ನಾನವನ್ನು ಅಳವಡಿಸಿದ್ದಾರೆ. ಅಂತೆಯೇ 5-ಜಿ ನೆಟ್​ವರ್ಕ್​ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲದೆ, ರಿಯಲ್​ ಟೈಮ್​ ನ್ಯಾವಿಗೇಷನ್​, ರಿಮೋಟ್​ ಲೊಕೇಶನ್​ ನೀಡಲಾಗಿದೆ.


  ಕೀ ಫೀಚರ್​​​​​:


  ಎಮ್​ಜಿ ಹೆಕ್ಟರ್​ ಕಾರ್​ನಲ್ಲಿ​​ ವಾಯ್ಸ್​ ಕಮಾಂಡ್​ ಸಿಸ್ಟಮ್​ ಅಳವಡಿಸಿಕೊಂಡ ಕೀ ಫೀಚರ್​ ತಂತ್ರಜ್ಞಾನವನ್ನು ಅಳವಡಿಸಿದೆ. ಕಾರು ಚಾಲಕನ ವಾಯ್ಸ್​ಗೆ ತಕ್ಕಂತೆ ಸನ್​ ರೂಪ್​, ಕ್ಲೈ ಮೇಟ್​ ಕಂಟ್ರೋಲ್​, ನ್ಯಾವಿಗೇಷನ್​ ಮುಂತಾದ ಫೀಚರ್​ ಅನ್ನು ಕಂಟ್ರೋಲ್​ ಮಾಡಬಹುದಾಗಿದೆ.


  ಇದನ್ನೂ ಓದಿ: ಇದು ‘ವೀಕೆಂಡ್​’ ವಿತ್ ಅನಂತ್ ನಾಗ್: ಹೊಸಬರ ಚಿತ್ರಕ್ಕೆ ಫಿಕ್ಸ್​ ಆಯ್ತು ರಿಲೀಸ್ ಡೇಟ್


  ಐ-ಸ್ಮಾರ್ಟ್ ಆ್ಯಪ್​


  ಸ್ಮಾರ್ಟ್​ ಕಾರಿನ ಬಳಕೆಗಾಗಿ ಎಮ್​ಜಿ ಮೋಟಾರ್​ ಸಂಸ್ಥೆ ​ಐ-ಸ್ಮಾರ್ಟ್ ಆ್ಯಪ್​ವೊಂದನ್ನು ತಯಾರಿಸಿದೆ. ಈ ಆ್ಯಪ್​ ಮೂಲಕ ಕಾರಿನ ಟಯರ್​ ಪ್ರೆಶರ್​, ಲೊಕೇಷನ್​, ಡೋರ್​ ಲಾಕ್​, ಏರ್​​ ಕಂಡೀಷನರ್ ಅನ್ನು ಪರಿಶೀಲಿಸಬಹುದಾಗಿದೆ.


  ಇನ್ನು ಎಮ್​​​​​​ ಹೆಕ್ಟರ್​ ಕಾರು ಪೆಟ್ರೋಲ್​ ಮತ್ತು ಡೀಸೆಲ್​ ಎಂಜಿನ್​ಗಳಲ್ಲಿ ಲಭ್ಯವಿದೆ. 1.5 ಲೀಟರ್​ ಅಳವಡಿಕೆ 4 ಸಿಲಿಂಡರ್​ ಇಂಜಿನ್​​ ಇದರಲ್ಲಿದೆ. ಅಲ್ಲದೇ, ಮ್ಯಾನುವಲ್​ ಮತ್ತು ಅಟೊಮೇಟಿಕ್​ ಆಯ್ಕೆಯಲ್ಲೂ ಲಭ್ಯವಿದೆ.  ​
  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು