Facebook: ಫೇಸ್​ಬುಕ್​ ಫೀಡ್​ನಲ್ಲಿ ಸಮಸ್ಯೆ! ಕಂಗಾಲಾದ ಬಳಕೆದಾರರು

ಫೇಸ್​ಬುಕ್​ ಬಳಕೆದಾರರು ತಮ್ಮ ಫೀಡ್​ನಲ್ಲಿ ಸೆಲೆಬ್ರಿಟಿಗಳಾದ ಲೇಡಿ ಗಾಗಾ, ಬೀಟಲ್ಸ್​ನಂತರ ಕಲಾವಿದರಿಗಾಗಿ ಕಳುಹಿಸಲಾದ ಸಣ್ಣ ಫೋಸ್ಟ್​ಗಳಿಂದ ತುಂಬಿದೆ. ಇದರಿಂದ ಕಿರಿಕಿರಿ ಉಂಟಾಗಿದೆ ಎಂದು ಸಮಸ್ಯೆ ಬಗ್ಗೆ ಬರೆದುಹಾಕುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಫೇಸ್​ಬುಕ್  (Favebook) ಬಳಕೆದಾರರು ಫೀಡ್​​ನಲ್ಲಿ (Feed) ಕಂಡುಬಂದ ದೋಷದಿಂದ ಕಂಗಾಲಾಗಿದ್ದಾರೆ. ಅನೇಕ ಬಳಕೆದಾರರು ಸೆಲೆಬ್ರಿಟಿ (Clebrity) ಸಂಪರ್ಕ ಹೊಂದಿರುವ ಖಾತೆಯಿಂದ ಪೋಸ್ಟ್​ಗಳು ಪಡೆಯುತ್ತಿದ್ದು, ಇದರಿಂದ ಫೀಡ್​ಗಳು ಭರ್ತಿಯಾಗಿವೆ ಎಂದು ಮೆಟಾ (Meta) ಒಡೆತನದ ಫೇಸ್​ಬುಕ್​ಗೆ ದೂರು (complaint) ನೀಡಿದ್ದಾರೆ.

  ವೆಬ್​ಸೈಟ್​​ ಟ್ರಾಕ್ಯರ್​​ ಡೌನ್​ ಡಿಟೆಕ್ಟರ್​​.ಕಾಮ್​​ ಈ ಬಗ್ಗೆ ವರದಿ ಮಾಡಿದ್ದು, ಜನಪ್ರಿಯ ಫೇಸ್​ಬುಕ್​ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದೆ. ಬಳಕೆದಾರರು ತಮ್ಮ ಖಾತೆಯ ಫೀಡ್​ನಲ್ಲಿ ಕಂಡ ಸಮಸ್ಯೆಯನ್ನು ವರದಿ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

  ಫೇಸ್​ಬುಕ್​ ಬಳಕೆದಾರರು ತಮ್ಮ ಫೀಡ್​ನಲ್ಲಿ ಸೆಲೆಬ್ರಿಟಿಗಳಾದ ಲೇಡಿ ಗಾಗಾ, ಬೀಟಲ್ಸ್​ನಂತರ ಕಲಾವಿದರಿಗಾಗಿ ಕಳುಹಿಸಲಾದ ಸಣ್ಣ ಫೋಸ್ಟ್​ಗಳಿಂದ ತುಂಬಿದೆ. ಇದರಿಂದ ಕಿರಿಕಿರಿ ಉಂಟಾಗಿದೆ ಎಂದು ಸಮಸ್ಯೆ ಬಗ್ಗೆ ಬರೆದುಹಾಕುತ್ತಿದ್ದಾರೆ.

  ವರದಿಯ ಪ್ರಕಾರ, ಶೇಕಡಾ 43 ರಷ್ಟು ಬಳಕೆದಾರರು ಅಪ್ಲಿಕೇಶನ್‌ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ, ಇದು 40 ಶೇಕಡಾ ನ್ಯೂಸ್‌ಫೀಡ್‌ಗೆ ಮತ್ತು ಶೇಕಡಾ 16 ರಷ್ಟು ಸಾಮಾನ್ಯವಾಗಿ ವೆಬ್‌ಸೈಟ್‌ಗೆ ಸಂಬಂಧಿಸಿದೆ.

  ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಕಂಡುಬಂದ ಯಾವುದೇ ಸಮಸ್ಯೆಯನ್ನು ದೃಢಪಡಿಸಿಲ್ಲ ಮಾತ್ರವಲ್ಲದೆ, ಅದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಏನನ್ನೂ ಫೇಸ್​ಬುಕ್​ ತಿಳಿಸಿಲ್ಲ. ಜೊತೆಗೆ ಹ್ಯಾಕ್ ಆಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ತೋರ್ಪಡಿಸಿಲ್ಲ.

  ಇದನ್ನೂ ಓದಿ: Infinix Smart 5A: ಯಾರಿಗುಂಟು, ಯಾರಿಗಿಲ್ಲ! ಬರೀ 6 ಸಾವಿರಕ್ಕೆ ಸಿಗುತ್ತೆ ಈ ಸ್ಮಾರ್ಟ್​ಫೋನ್​

  ಅನೇಕ ಜನರು ಫೇಸ್​ಬುಕ್​ಫೀಡ್​ನಲ್ಲಿ ಕಾಣಿಸಿಕೊಂಡ ಸಮಸ್ಯೆ ಬಗ್ಗೆ ಮೆಟಾದೊಂದಿಗೆ ತಿಳಿಸಿದ್ದಾರೆ. ಜೊತೆಗೆ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಂಡಿದ್ದಾರೆ. "ಬೇರೆಯವರ ಫೇಸ್‌ಬುಕ್ ಫೀಡ್ ಸಂಪೂರ್ಣವಾಗಿ ಖಾಲಿಯಾಗಿದೆಯೇ? ಇತರ ಜನರು ಮತ್ತು ಇತರ ಪುಟಗಳಲ್ಲಿ ಪ್ರತಿಯೊಬ್ಬರ ಕಾಮೆಂಟ್‌ಗಳನ್ನು ನೋಡುವುದು, ಇದು ಸಾಮಾನ್ಯವಾಗಿ ಇರುವುದಕ್ಕಿಂತ ಹೆಚ್ಚು ಕಸವಾಗಿದೆ" ಎಂದು ಬಳಕೆದಾರರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Google: ಗೂಗಲ್​ನಲ್ಲಿ ಅಶ್ಲೀಲ ಜಾಹೀರಾತು ಕಾಣಿಸುತ್ತಿದೆಯಾ? ಹಾಗಿದ್ರೆ ನೀವು ಈ ತಪ್ಪನ್ನು ಮಾಡಿದ್ದೀರಿ ಎಂದರ್ಥ

  ಈ ಸಮಸ್ಯೆಯಿಂದ ಬೇಸರಗೊಂಡು ಟ್ವಿಟ್ಟರ್​ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆ ಬಗ್ಗೆ ಬರೆಯುತ್ತಿದ್ದಾರೆ. ಬಳಕೆದಾರರು ಫೇಸ್​ಬುಕ್​ ಫೀಡ್​ನಲ್ಲಿ ಕಂಡು ದೋಷದ ಲಾಭವನ್ನು ತ್ವರಿತವಾಗಿ ಹಂಚಿಕೊಳ್ಳುತ್ತಾರೆ. ಇದೀಗ ಪ್ರಸಿದ್ಧ ವ್ಯಕ್ತಿಗಳಿಗೆ ಮೀಮ್‌ಗಳನ್ನು ಕಳುಹಿಸುತ್ತಿದ್ದಾರೆ.
  Published by:Harshith AS
  First published: