Meta, Googleಗೆ ತರಾಟೆ ತೆಗೆದುಕೊಂಡ ಆಸ್ಟ್ರೇಲಿಯಾ ಸರ್ಕಾರ; ಯಾವ ಕಾರಣಕ್ಕೆ ಗೊತ್ತಾ?

Austraila: ಇದಕ್ಕೂ ಮುನ್ನ ತಮ್ಮ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವ ಸುದ್ದಿ ತುಣುಕುಗಳಿಗೆ ಪ್ರತಿಯಾಗಿ ಅದರ ಪ್ರಕಾಶಕರಿಗೆ ಪಾವತಿಸಬೇಕು ಎಂದು ಆಸ್ಟ್ರೇಲಿಯ ಸರ್ಕಾರ ನೂತನ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಪ್ಪು ಮಾಹಿತಿ ಹರಡುವಿಕೆ, ಹಾಗೂ ಸೈಬರ್ ದಾದಾಗಿರಿಗೆ (Cybersecurity) ತಮ್ಮ ವೇದಿಕೆಗಳಲ್ಲಿ ಅವಕಾಶ ಮಾಡಿಕೊಟ್ಟಿವೆ ಎಂದು ಆರೋಪಿಸಿ ಆಸ್ಟ್ರೇಲಿಯಾ ಸರ್ಕಾರದ (Australian Government) ಸಮಿತಿಯೊಂದು ಮೆಟಾ (ಈ ಹಿಂದೆ ಫೇಸ್‍ಬುಕ್) ಹಾಗೂ ಗೂಗಲ್ ಕಂಪನಿಗಳನ್ನು(Google companies) ತರಾಟೆಗೆ ತೆಗೆದುಕೊಂಡಿದೆ. ಕೋವಿಡ್-19 ಕುರಿತು ಯೂಟ್ಯೂಬ್‍ನಲ್ಲಿ ಪ್ರಸಾರವಾಗಿರುವ ತಪ್ಪು ಮಾಹಿತಿ ಹರಡುವಿಕೆಯ ಕುರಿತು ಗೂಗಲ್‍ನ ಸರ್ಕಾರಿ ವ್ಯವಹಾರ ಮತ್ತು ಸಾರ್ವಜನಿಕ ನೀತಿ ವಿಭಾಗದ ನಿರ್ದೇಶಕ ಲುಸಿಂಡಾ ಲಾಂಗ್‍ಕ್ರಾಫ್ಟ್ ಅವರನ್ನು ಸಮಿತಿಯು ಪ್ರಶ್ನಿಸಿದೆ. ಈ ಸಂಬಂಧ ತಪ್ಪು ಮಾಹಿತಿಗಳನ್ನು(Misinformation) ಹೊಂದಿರುವ ಕನಿಷ್ಠ 9 ಸಂಯುಕ್ತ ಆಸ್ಟ್ರೇಲಿಯಾ ಪಕ್ಷದ ಜಾಹೀರಾತುಗಳ ನಿದರ್ಶನ ಒದಗಿಸಿದೆ. 

ತಪ್ಪು ಮಾಹಿತಿ ಹರಡುವಿಕೆ

ಕೋವಿಡ್ ತಪ್ಪು ಮಾಹಿತಿ ಹರಡುವಿಕೆ ವಿರುದ್ಧದ ನಮ್ಮ ನೀತಿಗಳು ಸದೃಢ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿ ಜಾರಿಯಾಗಿರುವಂತವು” ಎಂದು ಯೂಟ್ಯೂಬ್‍ನಲ್ಲಿ ಪ್ರಸಾರವಾಗಿರುವ ಜಾಹೀರಾತುಗಳ ಕುರಿತು ಸಮಿತಿಗೆ ಉತ್ತರಿಸಿರುವ ಲಾಂಗ್‍ಕ್ರಾಫ್ಟ್‌ ಹೇಳಿದ್ದಾರೆ ಎಂದು ZDನೆಟ್ ವರದಿ ಮಾಡಿದೆ.

ಈ ದೈತ್ಯ ಕಂಪನಿಗಳ ಕಾರ್ಯನಿರ್ವಹಣೆ ಕುರಿತು ತನಿಖೆ ನಡೆಸಲು ಕಳೆದ ವರ್ಷ ಈ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯೆದುರು ಇಂದು ಟ್ವಿಟ್ಟರ್‌ ಹಾಜರಾಗುವ ನಿರೀಕ್ಷೆ ಇದೆ. ಮೆಟಾ ಪ್ರತಿನಿಧಿಗಳೂ ಸಮಿತಿಯ ಎದುರು ಹಾಜರಾಗಿದ್ದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ನಿರೂಪಕಿ ಎರಿನ್ ಮೊಲಾನ್ ಹಾಗೂ ಆಕೆಯ ಪುಟ್ಟ ಮಗಳನ್ನು ಉದ್ದೇಶಿಸಿ ಫೇಸ್‍ಬುಕ್‍ನಲ್ಲಿ ಹಾಕಿದ್ದ ಹತ್ಯೆ ಹಾಗೂ ಅತ್ಯಾಚಾರದ ಬೆದರಿಕೆ ಪೋಸ್ಟೊಂದರ ಕುರಿತು ಸಮಿತಿ ತರಾಟೆಗೆ ತೆಗೆದುಕೊಂಡಿತು.

ಇದನ್ನೂ ಓದಿ: Google Pay FD: ಈಗ ಗೂಗಲ್ ಪೇನಲ್ಲೂ FD ತೆರೆಯಬಹುದು.. ಹೇಗೆ? ಬಡ್ಡಿ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

ಸ್ವಯಂಚಾಲಿತ ಪ್ರತಿಕ್ರಿಯೆ

ಇದಕ್ಕೂ ಮುನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿರುವ ಆ ಪೋಸ್ಟನ್ನು ತೆಗೆಯುವಂತೆ ತಾನು ಫೇಸ್‍ಬುಕ್‍ಗೆ ಮಾಡಿರುವ ಮನವಿಯ ದಾಖಲೆಯನ್ನು ಮೊಲಾನ್ ಸಮಿತಿಗೆ ಒದಗಿಸಿದ್ದರು. ನನ್ನ ಮನವಿಗೆ ಪ್ರತಿಯಾಗಿ ಫೇಸ್‍ಬುಕ್ ಸ್ವಯಂಚಾಲಿತ ಪ್ರತಿಕ್ರಿಯೆಯೊಂದನ್ನು ರವಾನಿಸಿದ್ದು, ಆ ಪೋಸ್ಟ್ ಅಂತರ್ಜಾಲದಲ್ಲಿ ಉಳಿಯಲಿದೆ ಎಂದು ಹೇಳಿದೆ” ಎಂದು ತಮ್ಮ ದೂರಿನಲ್ಲಿ ಮೊಲಾನ್ ಹೇಳಿದ್ದಾರೆ. ಈ ಕುರಿತು ಉತ್ತರಿಸಿರುವ ಮೆಟಾ ANZ ನೀತಿ ನಿರ್ದೇಶಕ ಮಿಯಾ ಗಾರ್ಲಿಕ್, ನಾವು ಮೊಲಾನ್ ಅವರ ಅಸಲಿ ಮನವಿಯನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಸಮಿತಿಗೆ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್

ದುರದೃಷ್ಟವಶಾತ್, ಈ ಅಸಲಿ ಜಗತ್ತಿನಲ್ಲೇ ನಾವು ಅಸಲಿ ದೂರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಪೊಲೀಸ್ ವರದಿಯೊಂದು ಸಿದ್ಧವಾದಂತೆ ನನಗೆ ತೋರುತ್ತಿದ್ದು, ಆ ದಾರಿಯ ಮೂಲಕ ನಮ್ಮ ಕೆಲಸವನ್ನು ಮುಂದುವರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿರುವುದನ್ನು ಖಾತ್ರಿ ಪಡಿಸಲಿದ್ದೇವೆ” ಎಂದು ಗಾರ್ಲಿಕ್ ಹೇಳಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ದೈತ್ಯ ತಂತ್ರಜ್ಞಾನ ಕಂಪನಿಗಳ ಮೇಲೆ ನಡೆದಿರುವ ದಾಳಿಗಳಲ್ಲಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕೂಡಾ ಸೇರಿದ್ದು, ಅವರು ಈ ದೈತ್ಯ ತಂತ್ರಜ್ಞಾನ ಕಂಪನಿಗಳು ಈ ವೇದಿಕೆಗಳನ್ನು ಸೃಷ್ಟಿಸಿದ್ದು, ತಮ್ಮ ಬಳಕೆದಾರರ ಸುರಕ್ಷತೆಯನ್ನು ಖಾತ್ರಿಗೊಳಿಸುವುದು ಅವುಗಳ ಜವಾಬ್ದಾರಿ ಎಂದು ಹರಿಹಾಯ್ದಿದ್ದಾರೆ.

ನೂತನ ಕಾಯ್ದೆ

ದೈತ್ಯ ತಂತ್ರಜ್ಞಾನ ಕಂಪನಿಗಳು ದೈತ್ಯ ಪ್ರಶ್ನೆಗಳಿಗೆ ಉತ್ತರಿಸಲೇಬೇಕಿದೆ. ಆದರೆ, ನಾವು ಆಸ್ಟ್ರೇಲಿಯಾ ಪ್ರಜೆಗಳಿಂದಲೂ ಕೇಳಿಸಿಕೊಳ್ಳಲು ಬಯಸುತ್ತೇವೆ, ಪೋಷಕರು, ಶಿಕ್ಷಕರು, ಕ್ರೀಡಾಪಟುಗಳು, ಸಣ್ಣ ವ್ಯಾಪಾರಸ್ಥರು ಮತ್ತಿತರರ ಅನುಭವಗಳ ಕುರಿತು. ಹಾಗೆಯೇ ಏನು ಬದಲಾಗಬೇಕು ಎಂಬುದರ ಕುರಿತು ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: UPI Payments: ನಿಮ್ಮ ಮೊಬೈಲ್​​ನಲ್ಲಿ ಇಂಟರ್ನೆಟ್ ಇಲ್ಲದಿದ್ದರು ಆನ್​​ಲೈನ್​​ ಪೇಮೆಂಟ್ ಮಾಡಬಹುದು.. ಇಲ್ಲಿದೆ ಉಪಾಯ

ಇದಕ್ಕೂ ಮುನ್ನ ತಮ್ಮ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವ ಸುದ್ದಿ ತುಣುಕುಗಳಿಗೆ ಪ್ರತಿಯಾಗಿ ಅದರ ಪ್ರಕಾಶಕರಿಗೆ ಪಾವತಿಸಬೇಕು ಎಂದು ಆಸ್ಟ್ರೇಲಿಯ ಸರ್ಕಾರ ನೂತನ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು. ಈ ಸಂಬಂಧ ಫೆಬ್ರವರಿ 2021ರಲ್ಲಿ ಆಸ್ಟ್ರೇಲಿಯ ಸಂಸತ್ತು ಮಸೂದೆಯೊಂದಕ್ಕೆ ಅನುಮೋದನೆ ನೀಡಿತ್ತು. ಈ ಮಸೂದೆ ಅಂಗೀಕಾರವಾದ ಬೆನ್ನಿಗೇ ಫೇಸ್‍ ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜುಕರ್‌ಬರ್ಗ್‌ ಆಸ್ಟ್ರೇಲಿಯನ್ನರು ಸುದ್ದಿಗಳಿಗೆ ಪ್ರವೇಶ ಪಡೆಯುವುದು ಹಾಗೂ ಹಂಚಿಕೊಳ್ಳುವುದಕ್ಕೆ ಹಾಕಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲು ಸಮ್ಮತಿ ಸೂಚಿಸಿದ್ದರು.
Published by:vanithasanjevani vanithasanjevani
First published: