Facebook: ಬಿಲ್ ಗೇಟ್ಸ್, ಜೆಫ್ ಬೆಜೋಸ್, ಜಾಕ್ ಡಾರ್ಸಿ ಬಳಿಕ ಫೇಸ್​ಬುಕ್ ಸಿಇಒ ಹುದ್ದೆ ತೊರೆಯುತ್ತಾರಾ ಮಾರ್ಕ್ ಜುಕರ್​ಬರ್ಗ್​?

Mark Zuckerberg: ಇದೀಗ ಫೇಸ್​ಬುಕ್​  (Facebook) ಸಿಇಒ ಮಾರ್ಕ್​ ಜುಕರ್​ ಬರ್ಗ್ (Mark Zuckerberg)​ ಬಗ್ಗೆಯೂ ಕೆಲವು ಮಾಹಿತಿ ಹರಿದಾಡುತ್ತಿದ್ದು, ಇವರು ಕೂಡ ಮುಖ್ಯ ಹುದ್ದೆಯಿಂದ ಕೆಳಗಿಳಿಯಲಿದ್ದಾರಾ? ಎಂಬ ಪ್ರಶ್ನೆಗಳು ವೈರಲ್​ ಆಗಿವೆ.

ಮಾರ್ಕ್​ ಜುಕರ್​ಬರ್ಗ್ /Mark Zuckerberg

ಮಾರ್ಕ್​ ಜುಕರ್​ಬರ್ಗ್ /Mark Zuckerberg

  • Share this:
    ಇತ್ತೀಚೆಗೆ ಜಾಕ್ ಡಾರ್ಸಿ (Jack Dorsey) ಟ್ವಿಟ್ಟರ್ (Twiiter)​ ಕಂಪನಿಯ ಸಿಇಒ ಹುದ್ದೆಯಿಂದ ನಿವೃತ್ತಿ ಘೋಷಿಸಿದರು.  ಅವರ ಸ್ಥಾನಕ್ಕೆ ಭಾರತೀಯ ಮೂಲದ ಪರಾಗ್​ ಅಗ್ರವಾಲ್ (Parag Agrawal)​ ನೇಮಕಗೊಳ್ಳುವ ಮೂಲಕ ಭಾರತೀಯರಿಗೆ ಶುಭಸುದ್ದಿ ತಿಳಿಸಿದರು. ಬೃಹತ್​ ವಿದೇಶಿ ಕಂಪನಿಗಳ ಸಿಇಒ ಹುದ್ದೆಗಳನ್ನು ಅಲಂಕರಿಸುತ್ತಿರುವ ಭಾರತೀಯರ ಪಟ್ಟಿಯಲ್ಲಿ ಇದೀಗ ಪರಾಗ್​ ಕಾಣಿಸಿಕೊಂಡಿದ್ದಾರೆ. ಜಾಕ್​ ಡಾರ್ಸಿ ಮಾತ್ರವಲ್ಲದೆ, ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್, ಅಮೆಜಾನ್‌ನ ಜೆಫ್ ಬೆಜೋಸ್, ಆಲ್ಫಾಬೆಟ್‌ನ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಮುಂತಾದವರು ತಮ್ಮ ಕಂಪನಿಗಳ ಮುಖ್ಯ ಹುದ್ದೆಯಿಂದ ಕೆಳಗಿಳಿಯುವ ಮೂಲಕ ಅನೇಕ ಅಚ್ಚರಿಗಳಿಗೆ ಕಾರಣರಾಗಿದ್ದಾರೆ. ಮತ್ತೊಂದೆಡೆ ಭಾರತೀಯ ಮೂಲದವರು ಇಂತಹ ಕಂಪನಿಗಳ ಮುನ್ನಡೆಸಲು ಮುಂದಾಗಿರುವ ವಿಚಾರ ಕೂಡ ಬೆಳವಣಿಗೆಯ ಸೂಚಕವಾಗಿ ಕಾಣಿಸಿದೆ. ಇದೀಗ ಫೇಸ್​ಬುಕ್​  (Facebook) ಸಿಇಒ ಮಾರ್ಕ್​ ಜುಕರ್​ ಬರ್ಗ್ (Mark Zuckerberg)​ ಬಗ್ಗೆಯೂ ಕೆಲವು ಮಾಹಿತಿ ಹರಿದಾಡುತ್ತಿದ್ದು, ಇವರು ಕೂಡ ಮುಖ್ಯ ಹುದ್ದೆಯಿಂದ ಕೆಳಗಿಳಿಯಲಿದ್ದಾರಾ? ಎಂಬ ಪ್ರಶ್ನೆಗಳು ವೈರಲ್​ ಆಗಿವೆ.

    ಜಾಕ್​ ಡಾರ್ಸಿ ಮುಂದಿನ ಪ್ಲಾನ್​ ಏನು?

    ಡಾರ್ಸಿ ಅವರ ಪ್ರಸ್ತುತ ಯೋಚನೆಗಳು ಮತ್ತು  ಆದ್ಯತೆಗಳು ಕ್ರಿಪ್ಟೋಕರೆನ್ಸಿಗಳಿಗೆ ಬದಲಾಗಿವೆ ಎಂದು ತೋರುತ್ತದೆ. ಇನ್ನು  ಜುಕರ್‌ಬರ್ಗ್ ಅವರು ಫೇಸ್‌ಬುಕ್ ಅನ್ನು ಮೆಟಾದ ಹೊಸ ಯುಗಕ್ಕೆ ಮತ್ತು ಮೆಟಾವರ್ಸ್ ಅನ್ನು ರಚಿಸುವುದನ್ನು ಮುಂದುವರೆಸಿದ್ದಾರೆ.

    ಬಹುತೇಕ ಟೆಕ್ ಬಿಲಿಯನೇರ್‌ಗಳು ತಮ್ಮ ಕಂಪನಿಗಳ ಪ್ರಬಲ ಹುದ್ದೆಯನ್ನು ತೊರೆಯಲು ಹಲವು ಕಾರಣಗಳನ್ನು ನೀಡಿದ್ದಾರೆ. ಅದರಲ್ಲಿ ಆರೋಗ್ಯ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಹುದ್ದೆ ತೊರೆದವರು ಇದ್ದಾರೆ.  ಕಂಪನಿಯ ಏಳಿಗೆಗೆ ದಿನನಿತ್ಯ ದುಡಿದು, ಕೊನೆಗೆ ಜೀವನದ ಅಲ್ಪ ಸಮಯವನ್ನು ಕುಟುಂಬದವರೊಂದಿಗೆ ಕಳೆಯುವ ಸಮುವಾಗಿ ಹುದ್ದೆಗಳುನ್ನು ಕೆಲವರು ಬಿಟ್ಟಿದ್ದಾರೆ. ಉದಾಹರಣೆಗೆ ಆಲ್ಫಾಬೆಟ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ಹುದ್ದೆಯಿಂದ ಕೆಳಗಿಳಿದರರೂ, ಕಂಪನಿ ನಿಯಂತ್ರಣದ ಪಾಲನ್ನು ಹೊಂದಿದ್ದಾರೆ ಮತ್ತು ಮಂಡಳಿಯಲ್ಲಿ ಉಳಿದಿದ್ದಾರೆ.

    ಇದನ್ನು ಓದಿ: Malicious Apps: ಬ್ಯಾಂಕ್ ಖಾತೆ ವಿವರವನ್ನು ಎಗರಿಸುತ್ತೆ ಈ 12 ಅಪ್ಲಿಕೇಶನ್​ಗ​ಳು! ಡೌನ್ಲೋಡ್ ಮಾಡುವ ಮುನ್ನ ಎಚ್ಚರ!

    ಹಾಗಾಗಿ ಸದ್ಯ ಜಗತ್ಪ್ರಸಿದ್ಧಿ ಪಡೆದ  ಕಂಪನಿಗಳ ದೈನಂದಿನ ಕೆಲಸವನ್ನು ಭಾರತೀಯ ಮೂಲದ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನಲ್ಲಿ ಸತ್ಯ ನಾಡೆಲ್ಲಾ ಮತ್ತು ಟ್ವಿಟರ್‌ನಲ್ಲಿ ಪರಾಗ್ ಅಗರವಾಲ್ ಅವರಂತಹ ಹೊಸ ಸಿಇಒಗಳೊಂದಿಗೆ ಮುಂದುವರಿಸುತ್ತಿದ್ದಾರೆ

    ಜುಕರ್​ಬರ್ಗ್​ ಸಿಇಒ ಹುದ್ದೆಯಿಂದ ಕೆಳಗಿಳಿಯೋದು ನಿಜವೇ?

    ಜುಕರ್‌ಬರ್ಗ್ ಫೇಸ್‌ಬುಕ್‌ನ ಮೆಟಾ ಪರಿವರ್ತನೆಯತ್ತ ಮುಂದಾಗಿದ್ದಾರೆ. ಈ ಸಮಯದಲ್ಲಿ ಅವರು ಹುದ್ದೆಯಿಂದ ಕೆಳಗಿಳಿಯುತ್ತಾರಾ ಎಂಬ ಪ್ರಶ್ನೆ ಎತ್ತಲಾಗುತ್ತಿದೆ. ಆದರೆ ಜುಕರ್‌ಬರ್ಗ್ ಉಸ್ತುವಾರಿಯಾಗಿ ಉಳಿದರೆ ಮೆಟಾ ತನ್ನ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ, ಬದಲಿಗೆ ಸುರಕ್ಷತೆಯ ಮೇಲೆ ಕೇಂದ್ರೀಕರಿಸಲು ಸಿದ್ಧರಿರುವ ಯಾರಾದರೂ ಅಧಿಕಾರ ವಹಿಸಿಕೊಳ್ಳಬೇಕಾಗುತ್ತದೆ. ಮೆಟಾ ಅಭಿಚೃದ್ದಿಯತ್ತ ತೊಗಗಿಸಿಕೊಂಡಿರುವ ಜುಕರ್​ಬರ್ಗ್​ ಸದ್ಯ ಇಂತಹ ಚಿಂತನೆ ಮಾಡಿಲ್ಲ ಎಣದು ತೋರುತ್ತದೆ.

    ಇದನ್ನು ಓದಿ: Jio: ಈ ಪ್ರಿಪೇಯ್ಡ್ ಪ್ಲಾನ್​ಗಳಲ್ಲಿ ಸಿಗುತ್ತೆ ಭರ್ಜರಿ ಬೆನಿಫಿಟ್; ಜಿಯೋದ ಈ ಕೊಡುಗೆಗಳನ್ನು ಮಿಸ್ ಮಾಡ್ಬೇಡಿ!

    AFP ವರದಿಯ ಪ್ರಕಾರ, ಕಂಪನಿಯ ಒಳಗಿನವರು ಮತ್ತು ಫೇಸ್‌ಬುಕ್‌ನ ಶಕ್ತಿಯು ಜುಕರ್‌ಬರ್ಗ್‌ನ ಕೈಯಲ್ಲಿ ಅಸಾಮಾನ್ಯವಾಗಿ ಕೇಂದ್ರೀಕೃತವಾಗಿದೆ ಎಂದು ಹೇಳಿದೆ. 2004ರಿಂದ ಕಂಪನಿಯನ್ನು ದೊಡ್ಡ ಮಟ್ಟಿಗೆ ಅಭಿವೃದ್ಧಿ ಪಡಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದೆ.
    Published by:Harshith AS
    First published: