ಈಗಂತೂ ಯಾವ ಕಂಪೆನಿಯಲ್ಲಿ (Company) ಸಹ ಕೆಲಸ ಮಾಡುತ್ತಿದ್ದರೂ ಆ ಕೆಲಸವನ್ನು ಸುರಕ್ಷಿತವಾದ ಕೆಲಸ ಅಂತ ಹೇಳಲು ಸಾಧ್ಯವೇ ಇಲ್ಲ. ಹೌದು, ಈಗಿನ ಖಾಸಗಿ ಕಂಪೆನಿಗಳ ಕೆಲಸಗಳು ನೀರಿನ ಮೇಲಿನ ಗುಳ್ಳೆಯಂತಾಗಿದೆ. ಎಂತಹದೇ ದೊಡ್ಡ ದೊಡ್ಡ ಕಂಪೆನಿಗಳಿಗೆ ಹೋದರೂ ಅಲ್ಲಿ ಕೆಲಸ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿರುತ್ತದೆ ಅಂತ ಹೇಳುವುದು ತುಂಬಾನೇ ಕಷ್ಟಕರವಾಗಿದೆ. ಇತ್ತೀಚೆಗೆ ದೊಡ್ಡ ದೊಡ್ಡ ಐಟಿ ಕಂಪೆನಿಗಳು (IT Company) ತಮ್ಮಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಹಿಂದೆ ಮುಂದೆ ನೋಡದೆಯೇ ಕೆಲಸದಿಂದ ವಜಾಗೊಳಿಸಿರುವ (Layoff) ಘಟನೆಗಳು ದಿನ ಬೆಳಗಾದರೆ ನೋಡುತ್ತಲೇ ಇದ್ದೇವೆ.
ಮೆಟಾ ಸಹ ಇತ್ತೀಚೆಗೆ ಇನ್ನೂ 10,000 ಜನ ಉದ್ಯೋಗಿಗಳನ್ನು ಕೈ ಬಿಡುವ ನಿರ್ಧಾರವನ್ನು ಘೋಷಿಸಿತು ಮತ್ತು ಲಿಂಕ್ಡ್ಇನ್ ಅಂತೂ ಕಂಪೆನಿಯಲ್ಲಿ ಎರಡನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭಿಸಿದ್ದು. ಈ ಮೂಲಕ ಕಂಪೆನಿಯಿಂದ ಸಾಕಷ್ಟು ಜನರು ವಜಾಗೊಂಡಿದ್ದಾರೆ.
ಕೆಲಸದಿಂದ ಉದ್ಯೋಗಿಗಳನ್ನು ವಜಾಗೊಳಿಸುವುದರ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಏನ್ ಹೇಳಿದ್ರು?
ಇದಕ್ಕೂ ಮೊದಲು, ಮೆಟಾ 2022 ರ ನವೆಂಬರ್ ನಲ್ಲಿ 11,000 ಜನರನ್ನು ಕೆಲಸದಿಂದ ತೆಗೆದು ಹಾಕಿತ್ತು. ಕಂಪೆನಿಯಲ್ಲಿ ಹೊಸ ಸುತ್ತಿನ ವಜಾವನ್ನು ಸ್ವಲ್ಪ ಸಮಯದವರೆಗೆ ನಿರೀಕ್ಷಿಸಲಾಗಿತ್ತು ಮತ್ತು ಇದು ಅಂತಿಮವಾಗಿ ಸಂಭವಿಸುತ್ತದೆ ಎಂದು ಹಲವಾರು ವರದಿಗಳು ಹೇಳಿಕೊಂಡಿದ್ದವು.
ಇದನ್ನೂ ಓದಿ: ಯೂಟ್ಯೂಬ್ ಪಂಪ್ ಆಂಡ್ ಡಂಪ್ ಹಗರಣ ಎಂದರೇನು? ಅಷ್ಟಕ್ಕೂ ನಟ ಅರ್ಷದ್ ವಾರ್ಸಿ ಮಾಡಿದ್ದೇನು?
ಆಂತರಿಕ ಸಭೆಯಲ್ಲಿ ಮಾರ್ಕ್ ಜುಕರ್‌ಬರ್ಗ್ ಅವರು 2023 ರ ವರ್ಷವನ್ನು 'ದಕ್ಷತೆಯ ವರ್ಷ' ಎಂದು ಘೋಷಿಸಿದ್ದಾರೆ ಎಂಬ ವರದಿಗಳು ಸಹ ಹೊರಬಂದಿದ್ದವು.
ಅದೇ ಸಭೆಯಲ್ಲಿ, ಕಂಪೆನಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಿ ನಿರ್ವಹಣೆಯ ಕೆಲವು ಮಧ್ಯಮ ಹಂತದಲ್ಲಿರುವ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಜಿಸಲಾಗಿದೆ ಎಂದು ಅವರು ಹೇಳಿದ್ದರು.
ಹೆರಿಗೆ ರಜೆಯಲ್ಲಿದ್ದ ಉದ್ಯೋಗಿಯನ್ನೇ ಕೆಲಸದಿಂದ ತೆಗೆದು ಹಾಕಿದ್ರಂತೆ
ಹೊಸ ಸುತ್ತಿನ ಲೇ-ಆಫ್ಗೆ ಒಳಗಾದ ಮಹಿಳೆಯೊಬ್ಬರು ಲಿಂಕ್ಡ್ಇನ್ ನಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಹೆರಿಗೆ ರಜೆಯಲ್ಲಿದ್ದಾಗ ಕಂಪೆನಿಯು ತನ್ನನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
"ಹೆರಿಗೆ ರಜೆಯಲ್ಲಿದ್ದಾಗ ನಾನು ಸಹ ಮೆಟಾ ಲೇ-ಆಫ್ ನ ಭಾಗವಾಗಿದ್ದೆ. ನಾನು ಮಾರುಕಟ್ಟೆ ಪ್ರವೃತ್ತಿಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ವ್ಯವಹಾರದ ಬಾಟಮ್ ಲೈನ್ ಮೇಲೆ ಸಹ ಕೇಂದ್ರೀಕರಿಸುತ್ತೇನೆ.
ಮೆಟಾದಲ್ಲಿರುವ ಲೀಡರ್ ಗಳು ಎಷ್ಟು ಕೆಟ್ಟದಾಗಿ ಲೆಕ್ಕ ಹಾಕಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ, ಅವರು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಬೇಕಾಯಿತು, ಆದರೂ ಅವರು ತಮ್ಮೊಂದಿಗೆ ಕೆಲಸ ಮಾಡುವ ಜನರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಮಾರ್ಕ್ ಜುಕರ್‌ಬರ್ಗ್ ಅವರು ವೇತನ ಕಡಿತಕ್ಕೆ ಮುಂದಾಗಿದ್ದಾರೆಯೇ?” ಎಂದು ಕೇಳಿದ್ದಾರೆ.
"ನನ್ನ ನೇಮಕಾತಿ ತಂಡವು ಉನ್ನತ ದರ್ಜೆಯದ್ದಾಗಿತ್ತು ಮತ್ತು ಅವರ ಬೆಂಬಲವನ್ನು ನಾನು ಇಷ್ಟಪಟ್ಟೆ, ಆದರೆ ಈ ಪರಿಸ್ಥಿತಿಯಲ್ಲಿ ಮೆಟಾ ನಿಭಾಯಿಸಿದ ರೀತಿ ಭಯಾನಕವಾಗಿದೆ" ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್ ನಲ್ಲಿ ಮಾರ್ಕ್ ಬರೆದಿದ್ದೇನು?
ಮೆಟಾ ಬ್ಲಾಗ್ ಪೋಸ್ಟ್ ನಲ್ಲಿ ಎರಡನೇ ಸುತ್ತಿನ ಲೇ-ಆಫ್ ಗಳ ಬಗ್ಗೆ ತನ್ನ ನಿರ್ಧಾರವನ್ನು ಘೋಷಿಸಿತ್ತು. "ಮುಂದಿನ ಎರಡು ತಿಂಗಳುಗಳಲ್ಲಿ, ನಮ್ಮ ಸಂಸ್ಥೆ ಕಡಿಮೆ ಆದ್ಯತೆ ಇರುವ ಯೋಜನೆಗಳನ್ನು ರದ್ದುಗೊಳಿಸುವುದು ಮತ್ತು ನಮ್ಮ ನೇಮಕಾತಿಯನ್ನು ಕಡಿಮೆ ಮಾಡುವತ್ತ ಗಮನ ಹರಿಸುವ ಯೋಜನೆಗಳನ್ನು ಘೋಷಿಸಲಿದೆ.
ನಮ್ಮ ನೇಮಕಾತಿ ತಂಡದ ಗಾತ್ರವನ್ನು ಮತ್ತಷ್ಟು ಕಡಿಮೆ ಮಾಡಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನೇಮಕಾತಿ ತಂಡದ ಸದಸ್ಯರ ಮೇಲೆ ಈ ಪರಿಣಾಮ ಬೀರುತ್ತದೆಯೇ ಎಂದು ನಾವು ತಿಳಿಸುತ್ತೇವೆ" ಎಂದು ಸಿಇಒ ಮಾರ್ಕ್ ಜುಕರ್‌ಬರ್ಗ್ ಕೆಲಸದಿಂದ ತೆಗೆದುಹಾಕಲ್ಪಟ್ಟ ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್ ನಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ