ಮಾರುಕಟ್ಟೆಗೆ ಅಪ್ಪಳಿಸಲಿದೆ ಮರ್ಸಿಡಸ್ ಎಸ್ ಶ್ರೇಣಿಯ ಹೊಸ ಕಾರ್

news18
Updated:March 2, 2018, 1:02 PM IST
ಮಾರುಕಟ್ಟೆಗೆ ಅಪ್ಪಳಿಸಲಿದೆ ಮರ್ಸಿಡಸ್ ಎಸ್ ಶ್ರೇಣಿಯ ಹೊಸ ಕಾರ್
news18
Updated: March 2, 2018, 1:02 PM IST
ಮಾನವ ಸಿನ್ಹಾ, ನ್ಯೂಸ್ 18
ನವದೆಹಲಿ (ಮಾ.02) : ಜರ್ಮನಿಯ ವಿಲಾಸಿ ಕಾರ್ ತಯಾರಿಕಾ ಸಂಸ್ಥೆ ಮರ್ಸಿಡಸ ಬೆಂಚ್, ತನ್ನ ಅತ್ಯಂತ ಉನ್ನತ ಶ್ರೇಣಿ ಎಸ್ ಕ್ಲಾಸ್ ನ ನವೀಕೃತ ಆವೃತ್ತಿಯನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಡಿಸೆಲ್ ಚಾಲಿತ ಹೊಸ ಎಸ್ ಕ್ಲಾಸ್ 350 ಡಿ ಭಾರತಕ್ಕಾಗಿ ಭಾರತದಲ್ಲಿಯೇ ತಯಾರಿಸಿದ ಕಾರ್ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಇದು ವಾಯು ಮಾಲಿನ್ಯ ನಿಯಂತ್ರಣ ಭಾರತ್ 6 ಮಾನದಂಡ ಒಳಗೊಂಡಿರುವ ಮೊದಲ ಡೀಸೆಲ್ ಕಾರ ಆಗಿದೆ. ಈ ವರ್ಷ ಮೊದಲೇ ಈ ಕಾರ್ ನಲ್ಲಿ ಈ ನಿಬಂಧನೆ ಅಳವಡಿಸಲಾಗಿದೆ.
ಹೊಸ ಡೀಸಲ್ ಎಸ್ 350 ಡಿ ಮತ್ತು ಪೆಟ್ರೋಲ್ ಎಸ್ 450 ಕಾರ್ ಗಳ ಬೆಲೆ ಕ್ರಮವಾಗಿ ರೂ. 1.33 ಕೋಟಿ ಮತ್ತು 1.37 ಕೋಟಿಯಿಂದ ಆರಂಭಗೊಳ್ಳುತ್ತದೆ.

ಈ ಕಾರನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಅನೇಕ ಸೌಲಭ್ಯಗಳು ಇವೆ. ಸುರಕ್ಷತೆಯ ಬಗ್ಗೆ ಕಿಂಚಿತ್ತು ರಾಜಿ ಮಾಡಿಕೊಂಡಿಲ್ಲ ಎಂದು ಮರ್ಸಿಡಸ್ ಬೆಂಚ್ ಇಂಡಿಯಾ ಸಿಇಓ ರೋಲ್ಯಾಂಡ್ ಪೋಲ್ಗರ್ ಹೇಳಿದ್ದಾರೆ
First published:March 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...