Mercedes-Benz: 1955ರ ಮರ್ಸಿಡಿಸ್-ಬೆಂಜ್ 300 SLR; ಈ ಕಾರು ಮಾರಾಟವಾದ ಮೊತ್ತ ಕೇಳಿದರೆ ನೀವು ಶಾಕ್ ಆಗೋದು ಗ್ಯಾರೆಂಟಿ!

ವಿಶ್ವದ ಪ್ರತಿಷ್ಠಿತ ಕಂಪನಿ ಕಾರುಗಳಲ್ಲಿ ಒಂದಾದ ಮರ್ಸಿಡಿಸ್‌ ಬೆಂಜ್ ಜರ್ಮನ್ ಮೂಲದ ಐಷಾರಾಮಿ ವಾಹನ ಬ್ರಾಂಡ್ ಆಗಿದೆ. ಪ್ರಸ್ತುತ 1955ರ ಮರ್ಸಿಡಿಸ್ ಬೆಂಜ್ ದಾಖಲೆಯ ಬೆಲೆಗೆ ಹರಾಜಿನಲ್ಲಿ ಮಾರಟವಾಗಿದ್ದು, ಈ ಮೂಲಕ ಇದುವರೆಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮರ್ಸಿಡಿಸ್-ಬೆಂಜ್ 300

ಮರ್ಸಿಡಿಸ್-ಬೆಂಜ್ 300

  • Share this:
ವಿಶ್ವದ ಪ್ರತಿಷ್ಠಿತ ಕಂಪನಿ (Company) ಕಾರುಗಳಲ್ಲಿ (Car) ಒಂದಾದ ಮರ್ಸಿಡಿಸ್‌ ಬೆಂಜ್ (Mercedes-Benz) ಜರ್ಮನ್ (German) ಮೂಲದ ಐಷಾರಾಮಿ ವಾಹನ ಬ್ರಾಂಡ್ (Brand) ಆಗಿದೆ. ಪ್ರಸ್ತುತ 1955ರ ಮರ್ಸಿಡಿಸ್ ಬೆಂಜ್ ದಾಖಲೆಯ ಬೆಲೆಗೆ ಹರಾಜಿನಲ್ಲಿ (Auction) ಮಾರಟವಾಗಿದ್ದು, ಈ ಮೂಲಕ ಇದುವರೆಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ಕಾರು (expensive car) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1955ರ ಮರ್ಸಿಡಿಸ್-ಬೆಂಜ್ ಅನ್ನು ಈ ತಿಂಗಳ ಆರಂಭದಲ್ಲಿ 135 ಮಿಲಿಯನ್ ಯುರೋಗಳಿಗೆ ($ 143 ಮಿಲಿಯನ್ ಮತ್ತು 1100 ಕೋಟಿ ಭಾರತೀಯ ರೂಪಾಯಿ) ಹರಾಜಾಗಿದೆ.  ಅಲ್ಲದೇ ಇದುವರೆಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ಕಾರು ಎಂದು ಕೆನಡಾ (Canada) ಮೂಲದ ಹರಾಜು ಕಂಪನಿ ಆರ್‌ಎಂ ಸೋಥೆಬಿ ಗುರುವಾರ ತಿಳಿಸಿದೆ.

ಕಾರು ಹರಾಜಾದ ಮೊತ್ತವೆಷ್ಟು?
"1955ರ ಮರ್ಸಿಡಿಸ್-ಬೆನ್ಜ್ 300 SLR ಉಹ್ಲೆನ್‌ಹಾಟ್ ಕೂಪೆಯನ್ನು ಖಾಸಗಿ ಸಂಗ್ರಾಹಕರಿಗೆ 135,000,000 ಯುರೋಗಳ ದಾಖಲೆ ಬೆಲೆಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ" ಎಂದು ಕ್ಲಾಸಿಕ್ ಕಾರ್ ಹರಾಜು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಹರಾಜು ಬೆಲೆಯು ದೊಡ್ಡದಾಗಿದ್ದು, ಇದು ಹಿಂದಿನ ದಾಖಲೆ $95 ಮಿಲಿಯನ್‌ ಅನ್ನು ಮುರಿದಿದೆ. ಈ ಹಿಂದೆ 2018ರಲ್ಲಿ 1962ರ ಫೆರಾರಿ 250 ಜಿಟಿ 48 ಮಿಲಿಯನ್‌ ಗೆ ಮಾರಟವಾಗುವ ಮೂಲಕ ತನ್ನ ಹೆಸರಿಗೆ ಮಾರಾಟವಾದ ಅತ್ಯಂತ ದುಬಾರಿ ಕಾರು ಎಂಬ ದಾಖಲೆಯನ್ನು ಹೊಂದಿತ್ತು. ಇದನ್ನು ಅಮೆರಿಕದ ಉದ್ಯಮಿ ಮತ್ತು ಪ್ರಮುಖ ಫೆರಾರಿ ಸಂಗ್ರಾಹಕ ಡೇವಿಡ್ ಮ್ಯಾಕ್‌ನೀಲ್ ಖರೀದಿಸಿದ್ದರು. ಸದ್ಯ ಈ ದಾಖಲೆಯನ್ನು ಬ್ರೇಕ್‌ ಮಾಡಿರುವ ಮರ್ಸಿಡಿಸ್-ಬೆಂಜ್ 300 SLR ಅದರ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.

ಇದನ್ನೂ ಓದಿ:   Hyndai Santro: ಓಟ ನಿಲ್ಲಿಸಿದ ಸ್ಯಾಂಟ್ರೋ! ಭಾರತದಲ್ಲಿ ಹುಂಡೈ ಮಾರುಕಟ್ಟೆ ಕಟ್ಟಿದ ಈ ಕಾರಿನ ಕಥೆ ಇಲ್ಲಿದೆ

ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿರುವ ಮರ್ಸಿಡಿಸ್-ಬೆಂಜ್ ವಸ್ತುಸಂಗ್ರಹಾಲಯದಲ್ಲಿ ಮೇ 5 ರಂದು ನಡೆದ ರಹಸ್ಯ ಹರಾಜಿನಲ್ಲಿ ಈ ದಾಖಲೆಯ ಮಾರಾಟವನ್ನು ಮಾಡಲಾಗಿದೆ ಎಂದು ಮರ್ಸಿಡಿಸ್ ಬೆಂಜ್ ಅಧ್ಯಕ್ಷ ಓಲಾ ಕೆಲೆನಿಯಸ್ ಖಚಿತಪಡಿಸಿದ್ದಾರೆ. ಮರ್ಸಿಡಿಸ್ ಬ್ರಾಂಡ್‌ನ ಶಕ್ತಿಯನ್ನು ಪ್ರದರ್ಶಿಸಲು ನಾವು ಒಂದೇ ಒಂದು ಕ್ರಿಯೆಯೊಂದಿಗೆ ಬಯಸಿದ್ದೇವೆ ಎಂದು ಮಾಂಟೆ ಕಾರ್ಲೋ ಬಳಿ ಮೇ 18 ರಂದು ನಡೆದ ಸಂದರ್ಶನವೊಂದರಲ್ಲಿ ಕೆಲೆನಿಯಸ್ ಹೇಳಿದರು.

ಮರ್ಸಿಡಿಸ್-ಬೆಂಜ್ ವಿಶೇಷತೆ
ಅತ್ಯಂತ ಅಪರೂಪದ ಬಾಣದ-ಆಕಾರದ ಕೂಪ್ ಮರ್ಸಿಡಿಸ್-ಬೆಂಜ್ ರೇಸಿಂಗ್ ವಿಭಾಗವು ನಿರ್ಮಿಸಿದ ಕೇವಲ ಎರಡು ಮೂಲ ಮಾದರಿಗಳ ಪೈಕಿ ಇದೂ ಒಂದು ಮತ್ತು RM ಸೋಥೆಬಿಸ್ ಪ್ರಕಾರ ಅದರ ಸೃಷ್ಟಿಕರ್ತ ಮತ್ತು ಮುಖ್ಯ ಇಂಜಿನಿಯರ್ ರುಡಾಲ್ಫ್ ಉಹ್ಲೆನ್‌ಹಾಟ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. RM ಸೋಥೆಬಿಸ್ ಮತ್ತು ಪತ್ರಿಕಾ ವರದಿಗಳ ಪ್ರಕಾರ, 300 SLR, ಅದರ ಅಸಾಮಾನ್ಯ ಗೆರೆಗಳು ಮತ್ತು ಚಿಟ್ಟೆ ಬಾಗಿಲುಗಳಿಂದ ಹೆಚ್ಚು ಆಕರ್ಷಿತವಾಗಿದೆ.ಇದು W196 R ಗ್ರ್ಯಾಂಡ್ ಪ್ರಿಕ್ಸ್ ರೇಸ್ ಕಾರ್ ಮಾದರಿಯಲ್ಲಿದೆ, ಇದು 1954 ಮತ್ತು 1955 ರಲ್ಲಿ ಇಟಾಲಿಯನ್ ಜುವಾನ್ ಮ್ಯಾನುಯೆಲ್ ಫಾಂಗಿಯೊ ಅವರೊಂದಿಗೆ ಎರಡು ಫಾರ್ಮುಲಾ 1 ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದುಕೊಂಡಿದೆ. "ಯಾವುದೇ ಸಂಗ್ರಹಣೆ ವರ್ಗದಲ್ಲಿ ಹರಾಜಿನಲ್ಲಿ ಮಾರಾಟವಾದ ಟಾಪ್ 10 ಅತ್ಯಮೂಲ್ಯ ವಸ್ತುಗಳಲ್ಲಿ ಇದನ್ನು ಇರಿಸುತ್ತದೆ" ಎಂದು ಹರಾಜು ಸಂಸ್ಥೆ ಹೇಳಿದೆ.

ಕಾರಿನ ಬಗ್ಗೆ ಹರಾಜು ಕಂಪನಿ ಹೇಳಿದ್ದೇನು?
ಇತ್ತೀಚಿನ ವರ್ಷಗಳಲ್ಲಿ ಹರಾಜಿನಲ್ಲಿ ಮಾರಾಟವಾದ ಕಲಾಕೃತಿಗಳ AFP ಶ್ರೇಯಾಂಕದ ಪ್ರಕಾರ, 300 SLR ಆರನೇ ಅಥವಾ ಏಳನೇ ಸ್ಥಾನದಲ್ಲಿದೆ, 2017 ರ ನವೆಂಬರ್‌ನಲ್ಲಿ $450.3 ಮಿಲಿಯನ್‌ಗೆ ಮಾರಾಟವಾದ ಲಿಯೊನಾರ್ಡೊ ಡಾ ವಿನ್ಸಿಯ “ಸಾಲ್ವೇಟರ್ ಮುಂಡಿ” ಸಾರ್ವಕಾಲಿಕ ದಾಖಲೆಯನ್ನು ಹೊಂದಿದೆ. "ಖಾಸಗಿ ಖರೀದಿದಾರರು 300 ಎಸ್‌ಎಲ್‌ಆರ್ ಉಹ್ಲೆನ್‌ಹಾಟ್ ಕೂಪೆ ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಪ್ರವೇಶಿಸಬಹುದು ಎಂದು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:  KIA electric SUV: 1 ಬಾರಿ ಚಾರ್ಜ್​ ಮಾಡಿದ್ರೆ 500 KM ಓಡುತ್ತೆ! ಸಖತ್ತಾಗಿದೆ ಗುರು ಹೊಸ ಕಿಯಾ ಎಲೆಕ್ಟ್ರಿಕ್​ ಎಸ್​ಯುವಿ

ಎರಡನೇ ಮೂಲ 300 ಎಸ್‌ಎಲ್‌ಆರ್ ಕೂಪೆ ಕಂಪನಿಯ ಮಾಲೀಕತ್ವದಲ್ಲಿ ಉಳಿದಿದೆ ಮತ್ತು ಸ್ಟಟ್‌ಗಾರ್ಟ್‌ನಲ್ಲಿರುವ ಮರ್ಸಿಡಿಸ್-ಬೆಂಜ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು" ಎಂದು ಹರಾಜು ಕಂಪನಿ ಹೇಳಿದೆ. ಹರಾಜಿನಿಂದ ಬರುವ ಆದಾಯವನ್ನು ವಿಶ್ವಾದ್ಯಂತ ಮರ್ಸಿಡಿಸ್-ಬೆಂಜ್ ನಿಧಿಯನ್ನು ಸ್ಥಾಪಿಸಲು ಬಳಸಲಾಗುವುದು ಎಂದು ಆರ್‌ಎಂ ಸೋಥೆಬಿಸ್ ಹೇಳಿದ್ದಾರೆ, ಈ ನಿಧಿ ಪರಿಸರ ವಿಜ್ಞಾನ ಮತ್ತು ಡಿಕಾರ್ಬೊನೈಸೇಶನ್ ಸಂಶೋಧನೆಗೆ ಧನಸಹಾಯ ನೀಡುತ್ತದೆ.
Published by:Ashwini Prabhu
First published: