ನೀವು ಬಳಸುವ ಸಾಧನ ಯಾವುದೇ ಆಗಿರಲಿ ಕ್ಯಾಮೆರಾ (Camera), ಡ್ರೋನ್ (Drone)ಇಲ್ಲವೇ ಸ್ಮಾರ್ಟ್ಫೋನ್ಗಳು (Smartphones) ಇವುಗಳಲ್ಲಿ ಪ್ರಮುಖ ಡೇಟಾ ವಾಹಕಗಳಾಗಿ ಮೆಮೊರಿ ಕಾರ್ಡ್ಗಳು (memory Card) ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಬಳಸುವ ಮೆಮೊರಿ ಕಾರ್ಡ್ಗಳ ಗಾತ್ರ, ವೈವಿಧ್ಯತೆಗಳಲ್ಲಿ ವ್ಯತ್ಯಾಸಗಳಿದ್ದರೂ ನೀವು ಬಳಸುತ್ತಿರುವ ಡಿವೈಸ್ಗಳಿಗೆ ಯಾವ ಮೆಮೊರಿ ಕಾರ್ಡ್ ಸೂಕ್ತ ಎಂಬ ಸಂಪೂರ್ಣ ಜ್ಞಾನ ನಿಮಗಿರುವುದು ಅತಿಮುಖ್ಯವಾಗಿದೆ. ಕೆಲವೊಮ್ಮೆ ಮೆಮೊರಿಕಾರ್ಡ್ನಿಂದಾಗಿ ನೀವು ಬಳಸುವ ಸ್ಮಾರ್ಟ್ಫೋನ್ ಅಥವಾ ಕ್ಯಾಮೆರಾದ ಕಾರ್ಯಕ್ಷಮತೆಯಲ್ಲಿ ವ್ಯಾತ್ಯಾಸ ಉಂಟಾಗಬಹುದು. ಹಾಗಾಗಿ ನೀವು ತಿಳಿಯಲೇ ಬೇಕಿರುವ ಮತ್ತು ಸೂಕ್ತವಾದ ಮೆಮೊರಿ ಕಾರ್ಡ್ ಯಾವುದು? ಎಂಬುದರ ಬಗ್ಗೆ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ.
ಕಾರ್ಡ್ ವಿಧಗಳು:
ಸಾಮಾನ್ಯವಾಗಿ ಬಳಸಲಾಗುವ ಕಾರ್ಡ್ ಎಸ್ಡಿ ಮೆಮೊರಿ ಕಾರ್ಡ್ (Memorycard). ಸೋನಿ ಮೆಮೊರಿ ಸ್ಟಿಕ್ನಂತಹ ಮುಂಚಿನ ಫಾರ್ಮ್ಯಾಟ್ಗಳನ್ನು ಮೆಮೊರಿ ಕಾರ್ಡ್ನಲ್ಲಿ ಅಳವಡಿಸಲಾಗಿದೆ. ಇದು SD ಕಾರ್ಡ್ಗೆ ಹೊಂದಿಕೊಳ್ಳುತ್ತದೆ ಹಾಗೂ ಅಡಾಪ್ಟರ್ ಸಹಾಯದೊಂದಿಗೆ ಎಸ್ಡಿ ಸ್ಲಾಟ್ಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ.
ಕಾಂಪ್ಯಾಕ್ಟ್ ಫ್ಲಾಶ್ ಕಾರ್ಡ್ಗಳು ವೃತ್ತಿಪರ ಫೋಟೋಗ್ರಫಿಯಲ್ಲಿ ಸಹಕಾರಿಯಾಗಿವೆ. ಡೇಟಾ ದರಗಳು 2ಜಿಬಿಟ್ನಷ್ಟು ಸಾಧ್ಯವಿದೆ. ವೇಗವನ್ನು ಉಳಿಸಿಕೊಳ್ಳುವ ಕ್ಯಾಮೆರಾ ಹಾಗೂ ಕಾರ್ಡ್ರೀಡರ್ಗಳು ಸಾಕಷ್ಟಿಲ್ಲ.
ವೇಗ:
ಗಾತ್ರದೊಂದಿಗೆ ಕಾರ್ಡ್ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಕಾರ್ಡ್ನಲ್ಲಿ UHS ಸ್ಪೀಡ್ ಕ್ಲಾಸ್ ಹಾಗೂ ವಿಡಿಯೋ ಸ್ಪೀಡ್ ಕ್ಲಾಸ್ಗಳೆಂದು ಇದನ್ನು ನಿರ್ಧರಿಸಲಾಗುತ್ತದೆ. ಇವುಗಳನ್ನು ಬಹುಕಾಲದವರೆಗೆ ಅಭಿವೃದ್ಧಿಗೊಳಿಸಲಾಗಿದ್ದು, ಕೆಲವನ್ನು ಮಾರ್ಕೆಟಿಂಗ್ ಗುಣಲಕ್ಷಣಗಳೆಂದು ನಿರ್ಧರಿಸಬಹುದಾಗಿದೆ.
ವೇಗವು ಕಾರ್ಡ್ಗಳನ್ನು 2,4,6,10 ಎಂಬುದಾಗಿ ವಿಭಜಿಸುತ್ತದೆ. ಇದು ಕಾರ್ಡ್ಗಳಲ್ಲಿನ ಅತಿ ಕನಿಷ್ಠ ವೇಗ ಎಂಬುದಾಗಿ ಪರಿಗಣಿಸಲಾಗಿದೆ. ಕ್ಲಾಸ್ 6 ಕಾರ್ಡ್ಗಳು 32GB ಸಂಗ್ರಹಣೆಯನ್ನು ಒದಗಿಸುತ್ತವೆ. ಪ್ರಮಾಣಿತ ಕಾರ್ಡ್ ವೇಗವು ಕ್ಲಾಸ್ 10 ಆಗಿದೆ.
UHS ಸ್ಪೀಡ್ ಕ್ಲಾಸ್ ಎಂಬುದು ಮುಂದಿನ ಕ್ಲಾಸ್ ಆಗಿದ್ದು ಇದನ್ನು 2009ರಲ್ಲಿ ಪರಿಚಯಿಸಲಾಯಿತು. ಇವುಗಳು ಮೊದಲ ಸ್ಪೀಡ್ ಕ್ಲಾಸ್ನೊಂದಿಗೆ ಸಮ್ಮಿಲಿತಗೊಂಡಿವೆ. UHS-1 -10 ಕನಿಷ್ಠ ಪಕ್ಷ 10 MByte / s ಅನ್ನು ನಿರ್ವಹಿಸುತ್ತದೆ. ಇದು ಪ್ರಮಾಣಿತ ಎಂಬುದಾಗಿ ಗುರುತಿಸಲಾಗಿವೆ.
ಆದರೆ ಇಂಟರ್ಫೇಸ್ಗಳು 4K ಮತ್ತು 8K ಫಿಲ್ಮ್ಗಳಿಗೆ ಅತಿ ನಿಧಾನವಾಗಿವೆ. ಹಾಗಾಗಿ ವಿಡಿಯೋ ಸ್ಪೀಡ್ ಕ್ಲಾಸ್ಗಳನ್ನು ಪರಿಚಯಿಸಲಾಯಿತು. V10 10 Mbytes / s ಅನ್ನು ರಚಿಸುತ್ತದೆ ಇದು ಕ್ಲಾಸ್ 10 ಹಾಗೂ UHS-I ನ ಅದೇ ಮಟ್ಟದಲ್ಲಿದೆ.
ಎಸ್ಡಿ ಹಾಗೂ ಮೈಕ್ರೋ ಎಸ್ಡಿಗಳೊಂದಿಗೆ SDHC ಮತ್ತು SDXC ಎಂಬ ಗುಣಲಕ್ಷಣಗಳನ್ನು ಬಳಸಲಾಗುತ್ತದೆ. SDHC 32GB ಸ್ಥಳಾವಕಾಶ ಒದಗಿಸಿದರೆ SDXC 2 ಟಿಬಿವರೆಗೆ ಸ್ಥಳಾವಕಾಶ ಒದಗಿಸಲಿದೆ. ಇದು ಎಲ್ಲಾ ರೀತಿಯ ಡಿವೈಸ್ಗಳಲ್ಲಿ ಕಾರ್ಯನಿರ್ವಹಿಸುತ್ತವೆ ಅಂದರೆ ಸೆಲ್ ಫೋನ್, ಕ್ಯಾಮೆರಾ ಹಾಗೂ ರೀಡರ್ಗಳು.
ಮೈಕ್ರೋ-ಎಸ್ಡಿಯನ್ನು ಎಸ್ಡಿ ಅಡಾಪ್ಟರ್ನಲ್ಲಿ ದೀರ್ಘಕಾಲ ಬಳಸಬಹುದೇ?
ವೇಗ ಕಡಿಮೆಯಾಗಬಹುದು ಎಂಬ ಅಂಶ ಕಂಡುಕೊಳ್ಳಲಾಗಿದ್ದು ಕಾರ್ಡ್ಗಳನ್ನು ಹೆಚ್ಚು ಕಾಲ ಬಳಸಿದಲ್ಲಿ ಇವುಗಳು ಬೆಚ್ಚಗಾಗಬಹುದು. ಇದರಿಂದ ಕಾರ್ಯಕ್ಷಮತೆ ಮಂದವಾಗಬಹುದು ಹಾಗೂ ದೋಷಕ್ಕೆ ಒಳಗಾಗಬಹುದು.
ಸಾಮಾನ್ಯ ರೆಕಾರ್ಡಿಂಗ್ ನಡೆಸಲು ಮೈಕ್ರೋ SD ಕಾರ್ಡ್ಗಳನ್ನು ಬಳಸಬಹುದಾಗಿದ್ದು ನೀವು ಹೆಚ್ಚು ಸಮಯ ಸರಣಿ ರೆಕಾರ್ಡಿಂಗ್ಗಳು ಹಾಗೂ UHD ವೀಡಿಯೊಗಳಿಗಾಗಿ ಮೈಕ್ರೋ ಎಸ್ಡಿ ಕಾರ್ಡ್ ಬಳಸುವ ಮುನ್ನ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.
ನಕಲಿ ಗಾತ್ರ ಹಾಗೂ ಮಾಹಿತಿಯನ್ನು ಪತ್ತೆಹಚ್ಚಿ
ಕಡಿಮೆ ದರದ ದೊಡ್ಡ ಗಾತ್ರದ ಕಾರ್ಡ್ಗಳನ್ನು ಖರೀದಿಸುವ ಮುನ್ನ ಎಚ್ಚರವಾಗಿರಿ. ಈ ಕಾರ್ಡ್ಗಳಲ್ಲಿ ಇದರ ಸಾಮರ್ಥ್ಯವನ್ನು ದೊಡ್ಡದಾಗಿ ಬರೆದಿದ್ದರೂ ಅವುಗಳು ಹಾಗೆಯೇ ಕಾರ್ಯನಿರ್ವಹಿಸುವುದಿಲ್ಲ. ಇಯು ಡೀಲರ್ನಿಂದ ನೀವು ಸ್ಟಿಕ್ ಖರೀದಿ ಮಾಡಿದಲ್ಲಿ ಅವುಗಳು ಕಾರ್ಯನಿರ್ವಹಿಸದೇ ಇದ್ದರೆ 14 ದಿನಗಳ ಒಳಗೆ ನೀವು ಅವುಗಳನ್ನು ಮರಳಿಸಬಹುದು.
ಯಾವ ಮೆಮೊರಿ ಕಾರ್ಡ್ ಖರೀದಿಸಬೇಕು?
ನಿಮ್ಮ ಮೊಬೈಲ್ ಫೋನ್ ಅಥವಾ ವೈಯಕ್ತಿಕ ಫೋಟೋಗಳಿಗಾಗಿ ಡೇಟಾ ಸಂಗ್ರಹಣೆ ನಿಮ್ಮ ಉದ್ದೇಶವಾಗಿದ್ದರೆ ಕ್ಲಾಸ್ 10, UHS-I ಹಾಗೂ V10 ಮೆಮೊರಿ ಕಾರ್ಡ್ ಖರೀದಿಸಿ. ಇವುಗಳು ಕಡಿಮೆ ಬೆಲೆಗೆ ಲಭ್ಯವಿದ್ದು ಅತ್ಯುತ್ತಮ ಸಾಮರ್ಥ್ಯ ಹೊಂದಿವೆ.
ನೀವು 8Kಯಲ್ಲಿ ರೆಕಾರ್ಡ್ ಮಾಡಬೇಕು ಎಂದಾದಲ್ಲಿ ವಿಡಿಯೋ ವೇಗಕ್ಕೆ ಗಮನ ಹರಿಸಬೇಕಾಗುತ್ತದೆ. V60t ಅಥವಾ V90ಯ ಕಾರ್ಡ್ ಆಯ್ಕೆಮಾಡಿ. ನಿಮ್ಮ ಕಾರ್ಡ್ ಅನ್ನು ನೀವು FAT32 ನೊಂದಿಗೆ ಫಾರ್ಮ್ಯಾಟ್ ಮಾಡಿದರೆ, ನೀವು ಗರಿಷ್ಠ 4 GByte ರೆಕಾರ್ಡ್ ಮಾಡಬಹುದು. ಫಾರ್ಮ್ಯಾಟ್ exFATಗಿಂತ ಉತ್ತಮವಾದುದು. ಇದರಲ್ಲಿ ನೀವು ಡೇಟಾವನ್ನು ತ್ವರಿತವಾಗಿ ಉಳಿಸಬಹುದು. ಫಾರ್ಮ್ಯಾಟ್ನಲ್ಲಿ ದೋಷಗಳು ಕಡಿಮೆ ಇರುತ್ತವೆ.
ಮೆಮೊರಿ ಕಾರ್ಡ್ಗಳು ಮಾರುಕಟ್ಟೆಗಳಲ್ಲಿ ಸಾಕಷ್ಟು ಮಾದರಿಗಳಲ್ಲಿ ಲಭ್ಯವಿವೆ. ನಿಮ್ಮ ಸಾಮಾನ್ಯ ಕ್ಯಾಮೆರಾ ಅಥವಾ ಸ್ಮಾರ್ಟ್ಫೋನ್ಗಳಿಗೆ ಕೂಡ ನೀವು ಅತಿ ಕಡಿಮೆ ಬೆಲೆಯ ಮಾದರಿಗಳ ಮೆಮೊರಿ ಕಾರ್ಡ್ಗಳನ್ನ ಖರೀದಿಸಬಹುದು. ನೀವು 4K ಅಥವಾ 8K ರೆಕಾರ್ಡ್ ಮಾಡುತ್ತಿದ್ದರೆ ಮಾತ್ರವೇ ನೀವು ಮೆಮೊರಿ ಕಾರ್ಡ್ನ ವೇಗಕ್ಕೆ ಗಮನ ನೀಡಬೇಕಾಗುತ್ತದೆ.
ಹೊಸ ಮೆಮೊರಿ ಕಾರ್ಡ್ಗಳನ್ನು ಪರೀಕ್ಷೆಗೆ ಒಳಪಡಿಸಿ ನಂತರ ಬಳಸುವುದು ಉತ್ತಮ ವಿಧಾನವಾಗಿದೆ. ಇದು ದೋಷಗಳನ್ನು ಪತ್ತೆಹಚ್ಚುತ್ತವೆ ಹಾಗೂ ನಕಲಿಯನ್ನು ಕಂಡುಹಿಡಿಯುತ್ತವೆ. ಕ್ಯಾಮೆರಾಗಳ ಮೆಮೊರಿ ಕಾರ್ಡ್ಗಳನ್ನು ಬಳಸುವಾಗ ಪರೀಕ್ಷೆಗಳಿಗೆ ಒಳಪಡಿಸಿ ನಂತರವೇ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ