HOME » NEWS » Tech » MEET CHINAS ROYAL ENFIELD HIMALAYAN COPY GETS TFT SCREEN AND USDS HG

ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​​ ಬೈಕಿನ ಡಿಸೈನ್​ ಕಾಪಿ ಮಾಡಿತೆ ಚೀನಾ?

Royal Enfield Himalayan: ಇದೀಗ ಮೇಲ್ನೋಟಕ್ಕೆ ಹಿಮಾಲಯನ್​ ಬೈಕ್​ ಡಿಸೈನ್​ ಹೋಲುವಂತೆ ಬೈಕ್​ವೊಂದನ್ನು ಚೀನಾ ತಯಾರಿಸಿದೆ. ನೂತನ ಬೈಕ್​ಗೆ ಹನ್​ವೇ ಜಿ30 ಎಂದು ಹೆಸರಿಟ್ಟಿದೆ.

news18-kannada
Updated:March 24, 2021, 10:45 AM IST
ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​​ ಬೈಕಿನ ಡಿಸೈನ್​ ಕಾಪಿ ಮಾಡಿತೆ ಚೀನಾ?
Hanway G30
  • Share this:
ಚೀನಾ ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಈಗಾಗಲೇ ಹಲವಾರು ಬಾರಿ ಇಂತಹದೇ ವಿಚಾರದಲ್ಲಿ ಸಿಕ್ಕಿ ಬಿದ್ದಿದೆ. ಇದೀಗ ರಾಯಲ್​ ಎನ್​ಫೀಲ್ಡ್​​ ಪರಿಚಯಿಸಿದ ಹಿಮಾಲಯನ್​ ಬೈಕ್​ ಡಿಸೈನ್ ಹೋಲುವಂತೆ ಚೀನಾವೊಂದು ಬೈಕ್​ ತಯಾರಿಸಿದೆ. ಈ ಬೈಕ್​ ಕುರಿತಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿದೆ.

ಚೀನಾ ನಕಲು ವಿಚಾರದಲ್ಲಿ ಹಲವು ಬಾರಿ ಸಿಕ್ಕಿಬಿದ್ದಿದೆ. ಕಳೆದ ವರ್ಷ ವೆಸ್ಪಾ ಸ್ಕೂಟರ್​ ಡಿಸೈನ್​ ಅನ್ನು ಕಾಪಿ ಮಾಡಿತ್ತು. ಈ ವಿಚಾರವಾಗಿ ಪಿಯಾಗ್ಗಿಯೊ ಕಾಪಿ ರೈಟ್ಸ್​ ದಾಖಲಿಸಿತ್ತು. ಅದರ ಜೊತೆಗೆ ಪರಿಹಾರ ಕೂಡ ಕೇಳಿತ್ತು. ಇದರಿಂದ ಚೀನಾಗೆ ಭಾರೀ ಮುಖಭಂಗವಾಗಿತ್ತು. ಇದೀಗ ಮೇಲ್ನೋಟಕ್ಕೆ ಹಿಮಾಲಯನ್​ ಬೈಕ್​ ಡಿಸೈನ್​ ಹೋಲುವಂತೆ ಬೈಕ್​ವೊಂದನ್ನು ಚೀನಾ ತಯಾರಿಸಿದೆ. ನೂತನ ಬೈಕ್​ಗೆ ಹನ್​ವೇ ಜಿ30 ಎಂದು ಹೆಸರಿಟ್ಟಿದೆ.

ಹನ್​ವೇ ಜಿ30 ಎಡ್ವೆಂಚರ್​ ಬೈಕ್​!

ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಬೈಕ್​. ಇದರ ವಿನ್ಯಾಸ ಮತ್ತು ಅಡ್ವೆಂಚರ್​ಗೆ ಹೇಳಿ ಮಾಡಿಸಿರುವ ಬೈಕ್ ಇದಾಗಿದ್ದು, ಯುವಕರಿಗೆ ಮಾತ್ರವಲ್ಲದೆ ಯುವತಿಯರಿಗೂ ಈ ಬೈಕ್​ ಅಚ್ಚುಮೆಚ್ಚು. ಹಾಗಾಗಿ ಇದರ ಖರೀದಿ ಮತ್ತು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಸಾಕಷ್ಟು ಜನರು ದೂರದ ಪ್ರಯಾಣಕ್ಕೆ ಬೆಟ್ಟ-ಗುಡ್ಡಗಳಲ್ಲಿ ಪ್ರಯಾಣಿಸಲು ಈ ಬೈಕ್​ ಅನ್ನು ಬಳಸುತ್ತಾರೆ. ಇದೀಗ ಚೀನಾ ಕೂಡ ಇದೇ ದೃಷ್ಟಿಕೋನವನ್ನು ಇಟ್ಟುಕೊಂಡು ಹನ್​ವೇ ಎಂಬ ಅಡ್ವೆಂಚರ್​ ಬೈಕ್​ ಪರಿಚಯಿಸಿದೆ. ಹನ್​ವೇ 250ಸಿಸಿ ಇಂಚಿನ್ ಹೊಂದಿದೆ.ಅಂದಹಾಗೆಯೇ ಹನ್​ವೇ ಜಿ30 ಬೈಕ್​ ಟ್ಯೂಬ್​ಲೆಸ್​ ಟಯರ್​ ಸ್ಪೋಕ್​ ವೀಲ್ಹ್​, ಟಿಎಫ್​ಟು ಇನ್ಸ್ಟ್ರುಮೆಂಟ್​, ಯುಎಸ್​ಡಿ ಫೋರ್ಕ್ಸ್​​ ಮತ್ತು ಎಲ್​ಇಡಿ ಹೆಡ್​ಲ್ಯಾಂಪ್​ ನೀಡಲಾಗಿದೆ. ಅಚ್ಚರಿ ವಿಚಾರವೆಂದರೆ ಹಿಮಾಲಯನ್​ ಬೈಕ್​ಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದರ ಬೆಲೆ 1.92 ಲಕ್ಷ ರೂ ಆಗಿದೆ.

ಮೇಲ್ನೋಟಕ್ಕೆ ಹನ್​ವೇ ಜಿ30 ಬೈಕ್​ ಹಿಮಾಲಯನ್​ ಬೈಕ್​ನ ವಿನ್ಯಾಸದಂತೆ ತೋರುತ್ತದೆಯಾದರು. ಲಾಂಗ್​ ಸ್ಟ್ರೋಕ್​​ ಸಿಂಗಲ್​ ಸಿಲಿಂಡರ್​ 249 ಸಿಸಿಯಲ್ಲಿ ಬದಲಾವಣೆ ತಂದಿದೆ. 26ಬಿಹೆಚ್​ಪಿ ಮತ್ತು 22ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ.
Youtube Video

ಇನ್ನು ಹನ್​ವೇ ಜಿ30 ಬೈಕ್​ ಅನ್ನು ಚೀನಾ ಉತ್ಪಾದಿಸಿದರು ಅದು ಭಾರತಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಇದರಿಂದ ಭಾರತೀಯರಿಗೆ ಮತ್ತು ರಾಯಲ್​ ಎನ್​ಫೀಲ್ಡ್​ ಕಂಪೆನಿಗೆ ಯಾವುದೇ ತೊಂದರೆ ಇಲ್ಲ ಎಂದು ತೋರುತ್ತದೆ.
Published by: Harshith AS
First published: March 24, 2021, 10:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories