• Home
 • »
 • News
 • »
 • tech
 • »
 • Robot: ರಜನಿಕಾಂತ್‌ರ ರೋಬೋ ಸಿನಿಮಾ ಏನೂ ಅಲ್ಲ, ಅದಕ್ಕಿಂತಲೂ ಸೂಪರ್ ಆಗಿ ಕೆಲ್ಸ ಮಾಡುತ್ತೆ ಈ ರೋಬೋ!

Robot: ರಜನಿಕಾಂತ್‌ರ ರೋಬೋ ಸಿನಿಮಾ ಏನೂ ಅಲ್ಲ, ಅದಕ್ಕಿಂತಲೂ ಸೂಪರ್ ಆಗಿ ಕೆಲ್ಸ ಮಾಡುತ್ತೆ ಈ ರೋಬೋ!

ರೋಬೋಟ್​

ರೋಬೋಟ್​

ತಂತ್ರಜ್ಞಾನ ಹಾಸುಹೊಕ್ಕರುವ ಪ್ರಸ್ತುತ ವಿದ್ಯಾಮಾನದಲ್ಲಿ ರೋಬೋಟ್‌ಗಳು ಮಾನವರಂತೆ ಕೆಲಸದ ಭಾಗವಾಗುತ್ತಿವೆ. ಈ ಕಾರಣಕ್ಕೆ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೋಬೋ ಒಂದನ್ನು ತಯಾರಿಸಿದ್ದಾರೆ. ಆ ರೋಬೋ ಬಗ್ಗೆ ನೀವು ತಿಳಿದುಕೋಳ್ಳಲೇ ಬೇಕು.

 • Share this:

  ತಂತ್ರಜ್ಞಾನ (Technology) ಹಾಸುಹೊಕ್ಕರುವ ಪ್ರಸ್ತುತ ವಿದ್ಯಮಾನದಲ್ಲಿ ರೋಬೋಟ್‌ಗಳು (Robot) ಮಾನವರಂತೆ ಕೆಲಸದ ಭಾಗವಾಗುತ್ತಿವೆ. ಮನುಷ್ಯನ ದೈನಂದಿನ ಅಗತ್ಯಗಳನ್ನು ಪೂರೈಸುವ ಕೆಲಸದಿಂದ ಹಿಡಿದು ಹೋಟೆಲ್‌ನಲ್ಲಿ(Hotel) ಸಪ್ಲೈಯರ್‌ ಆಗಿ, ಅಷ್ಟೇ ಏಕೆ ಆಸ್ಪತ್ರೆಯಲ್ಲಿ(Hospital) ಶಸ್ತ್ರಚಿಕಿತ್ಸೆ ಮಾಡಲು ಸಹ ರೋಬೋಗಳು ಬಳಕೆಯಾಗುತ್ತಿವೆ. ಹೀಗೆ ಮಾನವ ನಿರ್ಮಿತ ಯಂತ್ರಗಳಾದ (Machine) ಇವು ಮನುಷ್ಯ ಮಾಡುತ್ತಿದ್ದ ಹಲವಾರು ಕೆಲಸಗಳನ್ನು ಮಾಡಲು ಶುರು ಮಾಡಿವೆ.


  ಸ್ವಯಂ-ನಿರ್ಮಾಣ ರೋಬೋಟ್‌ ವಿನ್ಯಾಸ


  ನಮಗೆಲ್ಲಾ ಗೊತ್ತಿರುವ ಹಾಗೆ ಮನುಷ್ಯ ಫೀಡ್‌ ಮಾಡಿದ ಪ್ರೋಗ್ರಾಮ್‌ಗಳ ಮೇಲೆ ರೋಬೋಟ್‌ಗಳು ಕೆಲಸ ಮಾಡುತ್ತವೆ. ಇಲ್ಲಿ ಮನುಷ್ಯರ ಕೆಲಸದ ಜೊತೆ ಈಗ ತನ್ನ ಕೆಲಸವನ್ನು ಸಹ ಮಾಡಿಕೊಳ್ಳಲು ಹೊಸ ರೋಬೋಟಿಕ್‌ ಅಭಿವೃದ್ಧಿಯಾಗಿದೆ.


  ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಇಂಜಿನಿಯರ್‌ಗಳು ಬಹುತೇಕ ತನ್ನನ್ನು ತಾನು ಸ್ವಯಂ-ಜೋಡಣೆ ಮಾಡುವ ಮತ್ತು ನಿರ್ಮಿಸಿಕೊಳ್ಳುವ ವಿಶಿಷ್ಟ ರೋಬೋಟ್ ಅನ್ನು ವಿನ್ಯಾಸಗೊಳಿಸಿದ್ದಾರೆ.


  ಈ ರೋಬೋಗಳು ಸಣ್ಣ ಸಣ್ಣ ಘಟಕಗಳಿಂದ ತಮ್ಮನ್ನು ತಾವು ನಿರ್ಮಿಸಿಕೊಳ್ಳುವುದರ ಜೊತೆಗೆ ಅವುಗಳಿಗಿಂತ ದೊಡ್ಡದಾದ ಕಟ್ಟಡಗಳನ್ನು ನಿರ್ಮಿಸಲು, ವಾಹನಗಳನ್ನು ನಿರ್ಮಿಸಲು ಮತ್ತು ದೊಡ್ಡ ರೋಬೋಟ್‌ಗಳಾಗಿ ಬೆಳೆಯಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ.


  Massachusetts Institute of Technology Created a Robot
  ಸಾಂಕೇತಿಕ ಚಿತ್ರ


  ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ತಂಡದಿಂದ ಅಭಿವೃದ್ಧಿ


  ತಮಗಿಂತ ದೊಡ್ಡದಾದ ವಸ್ತುಗಳನ್ನು ಒಳಗೊಂಡಂತೆ ಬಹುತೇಕ ಎಲ್ಲವನ್ನೂ ಜೋಡಿಸಬಲ್ಲ ರೋಬೋಟ್‌ಗಳನ್ನು ವಿನ್ಯಾಸಗೊಳಿಸುವ ಗುರಿಯನ್ನು ತಂಡ ಹೊಂದಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಂಐಟಿಯಲ್ಲಿನ ಸೆಂಟರ್ ಫಾರ್ ಬಿಟ್ಸ್ ಅಂಡ್ ಆಯ್ಟಮ್ಸ್ (ಸಿಬಿಎ) ಈ ಹೊಸ ಅಭಿವೃದ್ಧಿಯಲ್ಲಿ ಕೆಲಸ ಮಾಡಿದೆ.


  ವಿಶಿಷ್ಟ ತಂತ್ರಜ್ಞಾನದ ಕುರಿತಾದ ಹಲವು ವರ್ಷಗಳ ಪರಿಶ್ರಮದ ಫಲವಾಗಿ ಸ್ವಯಂ-ಜೋಡಣೆ ಮಾಡುವ ಮತ್ತು ನಿರ್ಮಿಸಿಕೊಳ್ಳುವ ವಿಶಿಷ್ಟ ರೋಬೋಟ್ ಅನ್ನು ಇಂಜಿನಿಯರ್‌ ಗಳುಪ್ರಸ್ತುತ ಅಭಿವೃದ್ಧಿಪಡಿಸಿದ್ದಾರೆ.


  ಸಂಶೋಧಕರ ಸಂಶೋಧನೆಗಳನ್ನು ನೇಚರ್ ಜರ್ನಲ್‌ನಲ್ಲಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.


  "ನಾವು ಡಿಸ್ಕ್ರೀಟ್ ಮಾಡ್ಯುಲರ್ ಮೆಟೀರಿಯಲ್-ರೋಬೋಟ್ ಸಿಸ್ಟಮ್ ಅನ್ನು ಶೀಘ್ರದಲ್ಲೇ ಪರಿಚಯಿಸುತ್ತಿದ್ದೇವೆ. ಅದು ಸರಣಿ, ಪುನರಾವರ್ತಿತ ಹೆಚ್ಚು ರೋಬೋಟ್‌ಗಳನ್ನು ತಯಾರಿಸುವುದು, ಮತ್ತು ಶ್ರೇಣೀಕೃತ ದೊಡ್ಡ ರೋಬೋಟ್‌ಗಳನ್ನು ತಯಾರಿಸುವುದು ಜೋಡಣೆಯ ಸಾಮರ್ಥ್ಯವನ್ನು ಹೊಂದಿದೆ.


  ವ್ಯಾಪಕ ಶ್ರೇಣಿಯ ಕಾರ್ಯವನ್ನು ರಚಿಸಲು ಇದನ್ನು ಮರು-ಕಾನ್ಫಿಗರ್ ಮಾಡಲಾಗಿದೆ" ಎಂದು MIT ತಂಡವು ಪತ್ರಿಕೆಯಲ್ಲಿ ಹೇಳಿದೆ.


  ಇದನ್ನೂ ಓದಿ: Youtube New Updates: ಯೂಟ್ಯೂಬ್​ನಲ್ಲಿ ಬಂದಿದೆ ಹೊಸ ಆ್ಯಂಬಿಯೆಂಟ್​ ಮೋಡ್! ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ​


  ಈ ರೋಬೋಟ್ ಶೀಘ್ರದಲ್ಲೇ ಲಭ್ಯ


  ದೊಡ್ಡ ರೋಬೋಟ್‌ಗಳನ್ನು ಒಳಗೊಂಡಂತೆ ದೊಡ್ಡ ಕಟ್ಟಡ, ರವಾನೆ, ವಾಹನಗಳನ್ನು ಜೋಡಿಸಲು ಮತ್ತು ಅತ್ಯುತ್ತಮ ನಿರ್ಮಾಣ ಅನುಕ್ರಮವನ್ನು ಯೋಜಿಸಲು ಸಮರ್ಥವಾಗಿರುವ ಸಂಪೂರ್ಣ ಸ್ವಾಯತ್ತ ವ್ಯವಸ್ಥೆಯ ರೋಬೋಟ್ ಶೀಘ್ರದಲ್ಲೇ ಬರಲಿದೆ. ‌


  ಈ ತಂತ್ರಜ್ಞಾನವನ್ನು ವೊಕ್ಸೆಲ್‌ಗಳೆಂದು ಕರೆಯಲ್ಪಡುವ ಸಣ್ಣ ಒಂದೇ ಉಪಘಟಕಗಳ ಒಂದು ಶ್ರೇಣಿಯಿಂದ ನಿರ್ಮಿಸಲಾಗಿದೆ ಎಂದಿದ್ದಾರೆ ಇಂಜಿನಿಯರ್‌ ಗಳು.


  ಹಿಂದಿನ ವೋಕ್ಸೆಲ್‌ಗಳು ಸಂಪೂರ್ಣವಾಗಿ ಯಾಂತ್ರಿಕ ಹಾಗೂ ರಚನಾತ್ಮಕ ತುಣುಕುಗಳಾಗಿದ್ದವು. ಆದರೆ ತಂಡವು ಈಗ ಸಂಕೀರ್ಣವಾದ ವೋಕ್ಸೆಲ್‌ಗಳನ್ನು ಅಭಿವೃದ್ಧಿಪಡಿಸಿದೆ, ಅದು ಶಕ್ತಿ ಮತ್ತು ಡೇಟಾ ಎರಡನ್ನೂ ಒಂದು ಘಟಕದಿಂದ ಇನ್ನೊಂದಕ್ಕೆ ಸಾಗಿಸಲು ಸಹಾಯ ಮಾಡುತ್ತದೆ ಎಂದು ಸಿಬಿಎ ನಿರ್ದೇಶಕ ನೀಲ್ ಗೆರ್ಶೆನ್‌ಫೆಲ್ಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


  ರೋಬೋಟ್‌ಗಳು ಆರಂಭದಿಂದ ಕೊನೆಯವರೆಗೆ ಸೇರಿಕೊಂಡ ಹಲವಾರು ವೋಕ್ಸೆಲ್‌ಗಳ ಸ್ಟ್ರಿಂಗ್ ಅನ್ನು ಒಳಗೊಂಡಿರುತ್ತವೆ. ಈ ರೋಬೋಟಿಕ್ ಸಾಧನಗಳು ಜೋಡಿಸುವ ಕೆಲಸ ಮಾಡುವುದರಿಂದ ತನ್ನ ಹಾದಿಯಲ್ಲಿ ಹಲವು ಆಯ್ಕೆಗಳನ್ನು ಪಡೆದುಕೊಳ್ಳುತ್ತವೆ.


  ಸಿಬಿಎ ಡಾಕ್ಟರೇಟ್ ವಿದ್ಯಾರ್ಥಿ ಅಮೀರಾ ಅಬ್ದೆಲ್-ರಹಮಾನ್ ಮಾತನಾಡಿ, "ರಚನೆಯನ್ನು ನಿರ್ಮಿಸಲು, ಅದೇ ಗಾತ್ರದ ಮತ್ತೊಂದು ರೋಬೋಟ್ ಅನ್ನು ನಿರ್ಮಿಸಲು ಅಥವಾ ದೊಡ್ಡ ರೋಬೋಟ್ ಅನ್ನು ನಿರ್ಮಿಸಲು ಇದು ಸಹಕಾರಿ ಎಂದಿದ್ದಾರೆ.


  ಕನೆಕ್ಟರ್‌ಗಳನ್ನು ಬಲಪಡಿಸುವತ್ತ ಚಿತ್ತ ಹರಿಸಿದ ಇಂಜಿನಿಯರ್‌ ತಂಡ


  ಇಂಜಿನಿಯರ್‌ ತಂಡವು ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸಿದ ಪ್ರಸ್ತುತ ರೋಬೋ ಆವೃತ್ತಿಗಳಲ್ಲಿ ಸಣ್ಣ ಉಪಘಟಕಗಳ ನಡುವಿನ ಕನೆಕ್ಟರ್‌ಗಳು ಅಗತ್ಯವಾದ ಭಾರವನ್ನು ಹೊರುವಷ್ಟು ಬಲವಾಗಿಲ್ಲ. ಹೀಗಾಗಿ ತಂಡವು ಈಗ ಗಟ್ಟಿಮುಟ್ಟಾದ ಮತ್ತು ಬಲವಾದ ಕನೆಕ್ಟರ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದೆ.

  Published by:Gowtham K
  First published: