news18-kannada Updated:February 25, 2021, 9:11 AM IST
Maruti Suzuki Swift 2021
ಮಾರುತಿ ಸುಜುಕಿ ನವೀಕರಿಸಿ ಸ್ವಿಫ್ಟ್ 2021 ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಕಾರು ಹೊಸ ಫೀಚರ್ಸ್ ಅಳವಡಿಸಿಕೊಂಡಿದ್ದು, ಡುಯೆಲ್ ಟೋನ್ ಎಕ್ಸ್ಟೆರಿಯೊರ್ನಲ್ಲಿ ಗ್ರಾಹಕರಿಸಿಗೆ ಸಿಗಲಿದೆ. ಅಂದಹಾಗೆಯೇ ನವೀಕರಿಸಿದ ಮಾರುತಿ ಸುಜುಕಿ ಸ್ವಿಫ್ಟ್ 2021 ಕಾರು 9 ರೂಪಾಂತರದಲ್ಲಿ ಸಿಗಲಿದ್ದು, ವೇರಿಯಂಟ್ಗೆ ತಕ್ಕಂತೆ ಬೆಲೆಯೂ ಬದಲಾಗುತ್ತದೆ.
-Maruti Suzuki Swift LXI Manual: Rs 5.73 Lakh-Maruti Suzuki Swift VXI Manual: Rs 6.36 Lakh
-Maruti Suzuki Swift VXI AGS: Rs 6.86 Lakh
-Maruti Suzuki Swift ZXI Manual: Rs 6.99 Lakh
-Maruti Suzuki Swift ZXI AGS: Rs 7.49 Lakh
-Maruti Suzuki Swift ZXI+ Manual: Rs 7.77 Lakh-Maruti Suzuki Swift ZXI+ AGS: Rs 8.27 Lakh
-Maruti Suzuki Swift ZXI+ Manual Dual Tone: Rs 7.91 Lakh
-Maruti Suzuki Swift ZXI+ AGS Dual Tone: Rs 8.41 Lakh
ನೂತನ ಸ್ವಿಫ್ಟ್ ಮಾರುಕಟ್ಟೆಗೆ ಪರಿಚಯಿಸಿ ನಂತರ ಮಾತನಾಡಿದ್ದ ಮಾರುತಿ ಸುಜುಕಿ ಕಂಪೆನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವತ್ಸವ ‘‘2005ರಲ್ಲಿ ಪ್ರಾರಂಭವಾಗಿನಿಂದ, ಸ್ವಿಫ್ಟ್ ಭಾರತಲ್ಲಿ ಪ್ರಿಮಿಯಂ ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಕ್ರಾಂತಿಯುಂಟು ಮಾಡಿದೆ. ಅದರ ಕಾರ್ಯಕ್ಷಮತೆ , ರಸ್ತೆ ಉಪಸ್ಥಿತಿ ಇದರಿಂದಾಗಿ ಇಂದು ಜನರಿಗೆ ಅಚ್ಚುಮೆಚ್ಚು ಎನಿಸಿಕೊಂಡಿದೆ. ಆಧುನಿಕ ಯುಗದ ಗ್ರಾಹಕರನ್ನು ಗಮನಿಸಿಕೊಂಡು ನವೀಕರಣದೊಂದಿದೆ ಸ್ವಿಫ್ಟ್ 2021ರನ್ನು ಪರಿಚಯಿಸಿದ್ದೇವೆ. ವರ್ಷಗಳಲ್ಲಿ ಸ್ವಿಫ್ಟ್ ಸುಮಾರು 2.4 ಮಿಲಿಯನ್ ಗ್ರಾಹಕರನ್ನು ಗಳಿಸಿಕೊಂಡಿದೆ. ನೂತನ ಕಾರಿನಲ್ಲಿ ಕೆ-ಸಿರೀಸ್ ಎಂಜಿನ್, ಸ್ಪೋರ್ಟಿಯರ್ ಡುಯೆಲ್ ಟೋನ್, ಇಂಧನ ದಕ್ಷತೆ ಮತ್ತು ಸುರಕ್ಷತಾ ವೈಶಿಷ್ಯವನ್ನು ಇದರಲ್ಲಿ ನೀಡಲಾಗಿದೆ. ಗ್ರಾಹಕರು ನೀಡಿದ ಅಚಲ ಬೆಂಬಲಕ್ಕೆ ಧನ್ಯವಾದ. ಹೊಸ ಸ್ವಿಫ್ಟ್ ಗ್ರಾಹಕರ ಮೆಚ್ಚುಗೆ ಗಳಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಹೊಸ ಸ್ವಿಫ್ಟ್ ಮುಂದಿನ ಜನರೇಶನ್ಗೆ ತಕ್ಕಂತೆ ಕೆ ಸಿರೀಸ್ ಡುಯೆಲ್ ಜೆಟ್ ಡುಯೆಲ್ ವಿವಿಟಿ ಇಂಜಿನ್ ಜೊತೆಗೆ ಐಡಿಯಲ್ ಸ್ಟಾರ್ಟ್ ಸ್ಟಾಪ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಕಡಿಮೆ ಹೊರಸೂಸುವಿಕೆಯ ಜೊತೆಗೆ ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿದೆ. ಇದು ಎಂಟಿಯಲ್ಲಿ 23.20 ಕಿ.ಮೀ ಮೈಲೇಜ್ ನೀಡುತ್ತದೆ. ಅಂತೆಯೇ ಎಜಿಎಸ್ ರೂಪಾಂತರದಲ್ಲಿ 23.76 ಕಿ.ಮೀ ಮೈಲೇಜ್ ನೀಡುತ್ತದೆ.
ಗ್ರಾಹಕರಿಗಾಗಿ ಸ್ವಿಫ್ಟ್ 2021 ಮ್ಯಾನುಯೆಲ್ ಮತ್ತು ಸ್ವಯಂಚಾಲಿತ ಗೇರ್ ಶಿಫ್ಟ್ ಮಾಡುವ ಎರಡು ರೂಪಾಂತರದಲ್ಲಿ ಸಿಗಲಿದೆ. ಹೊಸ ಕೆ ಸರಣಿ 88.50 ಪಿಎಸ್ ಪವರ್ ಉತ್ಪಾದಿಸುತ್ತದೆ.
Published by:
Harshith AS
First published:
February 25, 2021, 9:09 AM IST