Maruti Suzuki: ಇಂದಿನಿಂದ ಮಾರುತಿ ಸುಜುಕಿ ಕಾರುಗಳ ದರ ಹೆಚ್ಚಳ; ಬೆಲೆ ಎಷ್ಟಿದೆ? ಪರಿಶೀಲಿಸಿ

ಆಟೋ ದೈತ್ಯ ಆಗಸ್ಟ್​ ತಿಂಗಳಿನಲ್ಲಿ ವಿವಿಧ ಇನ್​ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಳೆದ ವರ್ಷದಲ್ಲಿ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿತ್ತು. ಆ ಮೂಲಕ ಬೆಲೆ ಏರಿಕೆ ಮಾಡಿ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್ 2021 ರಿಂದ ಎಲ್ಲಾ ಮಾದರಿಗಳ  ಬೆಲೆ ಏರಿಕೆ ಮಾಡಿದೆ.

Photo: Google

Photo: Google

 • Share this:
  Maruti Suzuki: ಜನಪ್ರಿಯ ಮಾರುತಿ ಸುಜುಕಿ ಕಾರು ಉತ್ಪಾದಕ ಸಂಸ್ಥೆ ವಾಹನಗಳ ಮೇಲಿನ ಬೆಲೆಯನ್ನು ಇಂದಿನಿಂದ ಹೆಚ್ಚಿಸುವುದಾಗಿ ತಿಳಿಸಿದೆ. ಆಗಸ್ಟ್​ 30ರಂದು ತಿಳಿಸಿದಂತೆ, ಸೆಪ್ಟೆಂಬರ್​ ತಿಂಗಳಿನಲ್ಲಿ ವಾಹನ ಬೆಲೆಯನ್ನು ಜಾಸ್ತಿ ಮಾಡುವುದಾಗಿ ಹೇಳಿಕೊಂಡಿತ್ತು, ಅದರೆ ದಿನಾಂಕವನ್ನು ಬಹಿರಂಗ ಪಡಿಸಿರಲಿಲ್ಲ, ಇದೀಗ ಇಂದಿನಿಂದ ಬೆಲೆಯನ್ನು ಏರಿಕೆ ಮಾಡುವುದಾಗಿ ಅಧಿಕೃತವಾಗಿ ಹೇಳಿದೆ.

  ಮಾರುತಿ ಸುಜುಕಿ (Maruti Suzuki) ಉತ್ಪಾದಿಸುವ ಎಲ್ಲಾ ಮಾದರಿಗಳ ಸರಾಸರಿ ಶೇ. 1.9ರಷ್ಟು ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿತ್ತು. ಆಗಸ್ಟ್​​ 30 ರಂದು ನಮ್ಮ ಹಿಂದಿನ ಸಂವಹನದ ಮುಂದುವರಿಕೆಯಾಗಿ, ಸೆಪ್ಟೆಂಬರ್ 06, 2021 ರಿಂದ ಅನ್ವಯವಾಗುವಂತೆ ಕಂಪನಿಯು ಆಯ್ದ ಮಾದರಿಗಳಿಗೆ ಬೆಲೆ ಬದಲಾವಣೆಯನ್ನು ಘೋಷಿಸಿತು. ಆಯ್ದ ಮಾದರಿಗಳಲ್ಲಿ ಎಕ್ಸ್ ಶೋ ರೂಂ ಬೆಲೆಗಳಲ್ಲಿ (Delhi) ಶೇಕಡಾ 1.9ರಷ್ಟು ಸರಾಸರಿ ಬೆಲೆ ಏರಿಕೆ ಮಾಡಿದೆ.

  ಇದನ್ನು ಓದಿ- Aprilia: 100 ಅಶ್ವಶಕ್ತಿ, 5 ರೈಡಿಂಗ್​ ಮೋಡ್​; ಭಾರತದಲ್ಲಿ ಬಿಡುಗಡೆಯಾದ ಹೊಸ Aprilia RS 660 ಬೈಕ್​​

  ಆಟೋ ದೈತ್ಯ ಆಗಸ್ಟ್​ ತಿಂಗಳಿನಲ್ಲಿ ವಿವಿಧ ಇನ್​ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಳೆದ ವರ್ಷದಲ್ಲಿ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿತ್ತು. ಆ ಮೂಲಕ ಬೆಲೆ ಏರಿಕೆ ಮಾಡಿ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್ 2021 ರಿಂದ ಎಲ್ಲಾ ಮಾದರಿಗಳ  ಬೆಲೆ ಏರಿಕೆ ಮಾಡಿದೆ.

  ಮಾರುತಿ ಸುಜುಕಿ  ಕಂಪನಿಯು ಕಳೆದ ಜನವರಿ ಮತ್ತು ಏಪ್ರಿಲ್ನಲ್ಲಿ ಕಾರಿನ ಬೆಲೆಯನ್ನು ಕೊಂಚ ಹೆಚ್ಚಿಸಿತ್ತು. ಏಪ್ರಿಲ್‌ನಲ್ಲಿ ಶೇ. 1.6ರಷ್ಟು ಎಕ್ಸ್ ಶೋರೂಂನ ಬೆಲೆ ಏರಿಕೆ ಮಾಡಿದ್ದು, ಜನವರಿಯಲ್ಲಿ ಆಯ್ದ ಮಾದರಿಗಳಲ್ಲಿ ಬೆಲೆ 34,000 ರೂ. ಹೆಚ್ಚಳವಾಯಿತು.

  ಇದೀಗ ಮತ್ತೊಮ್ಮೆ ವಾಹನಗಳ ಮೇಲಿನ ಬೆಲೆಯನ್ನು ಹೆಚ್ಚಿಸಿದೆ. ಆ ಮೂಲಕ ಪ್ರತಿಕೂಲ ಪರಿಣಾಮಗಳನ್ನು ಸರಿದೂಗಿಸಲಿದೆ.

  ಇದನ್ನು ಓದಿ- Leena Maria Paul | 200 ಕೋಟಿ ಸುಲಿಗೆ ಪ್ರಕರಣ; ಮದ್ರಾಸ್​ ಕೆಫೆ ನಟಿಯನ್ನು ಬಂಧಿಸಿದ ಪೊಲೀಸರು!

  ಇನ್ನು ಮಾರುತಿ ಸುಜುಕಿ (Marut i Suzuki) 1,81,754 ಯುನಿಟ್ ಪೆಟ್ರೋಲ್ ಕಾರ್​ಗಳಾದ ಸಿಯಾಜ್, ಎರ್ಟಿಗಾ, ವಿಟಾರಾ ಬ್ರಿಜಾ, ಎಸ್-ಕ್ರಾಸ್, ಮತ್ತು ಎಕ್ಸ್ ಎಲ್ 6 ಗಳನ್ನು (Ciaz, Ertiga, Vitara Brezza, S-Cross, and XL6)  ಮೋಟಾರ್ ಜನರೇಟರ್ ಗಳನ್ನು ಉಚಿತವಾಗಿ ಪರೀಕ್ಷಿಸಿ ಬದಲಿಸಲು ಮತ್ತು ಹಿಂಪಡೆಯುವುದಾಗಿ ಘೋಷಿಸಿದೆ. ಮೇ 4, 2018 ರಿಂದ ಅಕ್ಟೋಬರ್ 27, 2020 ರ ನಡುವೆ ತಯಾರಿಸಲಾದ ವಾಹನಗಳ ಹಾನಿಗೊಳಗಾದ ಭಾಗವನ್ನು ಬದಲಾಯಿಸಲಾಗುವುದು ಎಂದು ಕಂಪನಿ ಹೇಳಿದೆ. 2021 ರ ನವೆಂಬರ್ ಮೊದಲ ವಾರದಿಂದ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.‘

  ಈ ಅವಧಿಯಲ್ಲಿ ತಯಾರಾದ ಕಾರುಗಳನ್ನು ನೀರು ತುಂಬಿರುವ ಪ್ರದೇಶಗಳಲ್ಲಿ ಚಾಲನೆ ಮಾಡದಂತೆ ಕಾರಿನ ಮಾಲೀಕರಿಗೆ ಸಂಸ್ಥೆಯ ಮುಖ್ಯಸ್ಥರು ಸೂಚಿಸಿದ್ದಾರೆ. "ಗ್ರಾಹಕರು ನೀರಿನಿಂದ ತುಂಬಿದ ಪ್ರದೇಶಗಳಲ್ಲಿ ಕಾರು ಚಾಲನೆ ಮಾಡುವುದನ್ನು ತಪ್ಪಿಸಲು ಮತ್ತು ವಾಹನಗಳಲ್ಲಿ ವಿದ್ಯುತ್/ಎಲೆಕ್ಟ್ರಾನಿಕ್ ಭಾಗಗಳ ಮೇಲೆ ನೇರ ನೀರಿನ ಸಿಂಪಡಣೆ ಮಾಡುವುದನ್ನು ತಪ್ಪಿಸುವಂತೆ ವಿನಂತಿಸಲಾಗಿದೆ" ಎಂದು ಮಾರುತಿ ಸುಜುಕಿ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
  Published by:Harshith AS
  First published: