HOME » NEWS » Tech » MARUTI SUZUKI SWIFT BALENO WAGON R ALTO VITARA BREZZA OTHERS AUTOMAKER LAUNCHES WINTER SERVICE CAMPAIGN HG

winter service campaign: ಕಾರಿನಲ್ಲಿ ಕಂಡುಬಂದ ಸಮಸ್ಯೆಯನ್ನು ಸರಿಪಡಿಸಿ ಕೊಡಲಿದೆ ಮಾರುತಿ ಸುಜುಕಿ ಕಂಪೆನಿ!

ಜನವರಿ 5 ರವರೆಗೆ ಈ ಸೇವೆ ನೀಡುತ್ತಿದ್ದು, ಕಾರಿನ ಬೆಳಕಿನ ವ್ಯವಸ್ಥೆ, ತಾಪಮಾನ, ವೆಂಟಿಲೇಶನ್​ ಸಿಸ್ಟಂ, ಬ್ಯಾಟರಿ ಮತ್ತು ಬ್ರೇಕ್​ ಸೇರಿದಂತೆ ತಪಾಸಣೆ ನಡೆಸಲಿದೆ.

news18-kannada
Updated:December 21, 2020, 3:20 PM IST
winter service campaign: ಕಾರಿನಲ್ಲಿ ಕಂಡುಬಂದ ಸಮಸ್ಯೆಯನ್ನು ಸರಿಪಡಿಸಿ ಕೊಡಲಿದೆ ಮಾರುತಿ ಸುಜುಕಿ ಕಂಪೆನಿ!
ಮಾರುತಿ ಸುಜುಕಿ ಸ್ವಿಫ್ಟ್​ ಕಾರು
  • Share this:
ಮಾರುತಿ ಸುಜುಕಿ ಇಂಡಿಯಾ ಚಳಿಗಾಲದ ಸಮಯದಲ್ಲಿ ಸರ್ವಿಸ್​​ ಕ್ಯಾಂಪೇನ್​ ನಡೆಸುತ್ತಿದೆ. ಎಲ್ಲಾ ಗ್ರಾಹಕರಿಗೆ ಇದರಿಂದ ಪ್ರಯೋಜನ ಸಿಗುವಂತೆ ಮಾಡಿದೆ. ಜನವರಿ 5 ರವರೆಗೆ ಈ ಸೇವೆ ನೀಡುತ್ತಿದ್ದು, ಕಾರಿನ ಬೆಳಕಿನ ವ್ಯವಸ್ಥೆ, ತಾಪಮಾನ, ವೆಂಟಿಲೇಶನ್​ ಸಿಸ್ಟಂ, ಬ್ಯಾಟರಿ ಮತ್ತು ಬ್ರೇಕ್​ ಸೇರಿದಂತೆ ತಪಾಸಣೆ ನಡೆಸಲಿದೆ.

ಮಾರುತಿ ಸುಜುಕಿ ಇಂಡಿಯಾ ಅರೆನಾ ಮತ್ತು ನೆಕ್ಸಾ ಡೀಲರ್​ಶಿಪ್ ಮೂಲಕ ಕಾರುಗಳ ಮಾರಾಟ ಮಾಡುತ್ತಿದೆ. ಅರೆನಾ ಡೀಲರ್​ಶಿಪ್​ ಮೂಲಕ ಮಾರುತಿ ಸುಜುಕಿ ಕಂಪನಿಯ ಆಲ್ಟೋ, ಎಸ್​-ಪ್ರೆಸ್ಸೊ, ಎಕೊ, ಸೆಲೆರಿಯೊ, ವ್ಯಾಗನ್​ಆರ್​, ಶ್ವಿಫ್ಟ್​​, ಡಿಸೈರ್​​, ಇರ್ಟಿಗ ಮತ್ತು ವಿತಾರ ಬ್ರೇಜಾ ಸೇಲ್​ ಮಾಡುತ್ತಿದೆ. ಅಂತೆಯೇ ಇಗ್ನಿಸ್​​, ಬಲೆನೊ, ಸಿಯಾಜ್​ ಮತ್ತು ಎಸ್​-ಕ್ರಾಸ್​​​ ಕಾರುಗಳನ್ನು ನೆಕ್ಸಾ ಡೀಲರ್​ಶಿಪ್​ನಡಿಯಲ್ಲಿ ಮಾರಾಟ ಮಾಡುತ್ತಿದೆ.

ಮಾರುತಿ ಸುಜುಕಿ ಕಂಪನಿ ಚಳಿಗಾಲದ ಸಮಯದಲ್ಲಿ ವಾತವರಣಕ್ಕೆ ಸರಿಹೊಂದುವಂತೆ ಕಾರುಗಳನ್ನು ತಪಾಸಣೆ ನಡೆಸುತ್ತಿದೆ. ಪ್ರಯಾಣಿಕರಿಗೆ ಯಾವುದೆ ತೊಂದರೆ ಆಗದಂತೆ ಈ ಕ್ಯಾಂಪೇನ್​ ಮಾಡುತ್ತಿದೆ ಎಂದು ಕಂಪನಿ ತಿಳಿಸಿದೆ.
Youtube Video

ಮಾರುತಿ ಸುಜುಕಿ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಪಾರ್ಥೊ ಬ್ಯಾನರ್ಜಿ ಈ ಬಗ್ಗೆ ಮಾತನಾಡಿ, ಗ್ರಾಹಕರು ಯಾವುದೇ ತೊಂದರೆ ಎದುರಿಸಬಾರದೆಂದು ಕಾರಣವನ್ನು ಇಟ್ಟುಕೊಂಡು ಕಾರುಗಳ ಸರ್ವೀಸ್​ ಕ್ಯಾಂಪೇನ್​ ನಡೆಸಲಾಗುತ್ತಿದೆ.  ವಿವಿಧ ಆಕರ್ಷಕ ಕೊಡುಗೆಗಳನ್ನು ಈ ಸಮಯದಲ್ಲಿ ನೀಡುತ್ತಿದ್ದೇವೆ. ಜೊತೆಗೆ ವಿವರವಾದ ತಪಾಸಣೆ ಪಡೆಯಬಹುದು ಎಂದು ಹೇಳಿದ್ದಾರೆ.
Published by: Harshith AS
First published: December 21, 2020, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories