ಮಾರುತಿ ಸುಜುಕಿ ಸರ್ವೀಸ್​ ಫೆಸ್ಟಿವಲ್; ಡಿಸ್ಕೌಂಟ್ ಬೆಲೆಗೆ ಕಾರಿನ ಬಿಡಿಭಾಗ ಮಾರಾಟ

Maruti Suzuki Service Festival: ದೀಪಾವಳಿ ಹಬ್ಬದ ಸನಿಹದಲ್ಲಿರುವ ಗ್ರಾಹಕರಿಗಾಗಿ ಮಾರುತಿ ಸುಜುಕಿ ಡಿಸ್ಕೌಂಟ್​ ಬೆಲೆಗೆ ಸರ್ವೀಸ್​ ಮಾಡುತ್ತಿದೆ. ಜೊತೆಗೆ ಉಚಿತವಾಗಿ ಕಾರು ವಾಶ್​​​ ಮಾಡಿಕೊಡುತ್ತಿದೆ.

Maruti Suzuki Alto

Maruti Suzuki Alto

 • Share this:
  ಹಬ್ಬದ ಋತುನಲ್ಲಿರುವ ಗ್ರಾಹಕರಿಗಾಗಿ ಮಾರುತಿ ಸುಜುಕಿ ಕಂಪನಿ ಸರ್ವೀಸ್​ ಫೆಸ್ಟಿವಲ್​ ಕ್ಯಾಂಪೇನ್​ ನಡೆಸುತ್ತಿದೆ. ಅದರ ಮೂಲಕ ಗ್ರಾಹಕರಿಗೆ ಹೆಚ್ಚಿನ ಕೊಡುಗೆ ಮತ್ತು ಸೇವೆಯನ್ನು ನೀಡಲು ಮುಂದಾಗಿದೆ. ನವೆಂಬರ್​ 20ರವರೆಗೆ ಈ ಸೇಲ್​ ನಡೆಯಲಿದೆ.ದೀಪಾವಳಿ ಹಬ್ಬದ ಸನಿಹದಲ್ಲಿರುವ ಗ್ರಾಹಕರಿಗಾಗಿ ಮಾರುತಿ ಸುಜುಕಿ ಡಿಸ್ಕೌಂಟ್​ ಬೆಲೆಗೆ ಸರ್ವೀಸ್​ ಮಾಡುತ್ತಿದೆ. ಜೊತೆಗೆ ಉಚಿತವಾಗಿ ಕಾರು ವಾಶ್​​ ಮಾಡಿಕೊಡುತ್ತಿದೆ. ಕಾರಿನ ಬೇಕಾದ ಅಸೆಸ್ಸರೀಸ್​ಗಳನ್ನು ಮತ್ತು ಬಿಡಿಭಾಗಗಳನ್ನು ಕಡಿಮೆ ಬೆಲೆಗೆ ನೀಡುತ್ತಿದೆ.

  ಮಾರುತಿ ಸುಜುಕಿ ಎಕ್ಸಿಕ್ಯೂಟಿವ್​ ಡೈರೆಕ್ಟರ್​ ಪಾರ್ತೊ ಬ್ಯಾನರ್ಜಿ ಈ ಬಗ್ಗೆ ಮಾತನಾಡಿದ್ದು, ಗ್ರಾಹಕರಿಗೆ ಸರ್ವೀಸ್​ ಫೆಸ್ಟಿವಲ್​ ಮೂಲಕ ಒಂದೊಳ್ಳೆ ಅವಕಾಶವನ್ನು ಮಾಡಿಕೊಡುತ್ತಿದೆ. ಜೊತೆಗೆ ಹಳೆಯ ಗ್ರಾಹಕರನ್ನು ಮತ್ತೆ ಒಂದುಗೂಡಿಸುವ ಕೆಲಸ ಇದಾಗಿದೆ.  ಕಳೆದ ಸೆಪ್ಟೆಂಬರ್​ನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್​ ಕಾರು ಅತಿ ಹೆಚ್ಚು ಮಾರಾಟವಾಗಿದೆ. ಕಳೆದ ವರ್ಷ ಬಿಎಸ್​6 ಎಂಜಿನ್​ ಹೊಂದಿರುವ ಆಲ್ಟೋ ಕಾರನ್ನು ಪರಿಚಯಿಸಿದೆ. ಗ್ರಾಹಕರಿಗೆ ಆನಂದದಾಯಕ ಅನುಭವವನ್ನು ಮಾರುತಿ ಸುಜುಕಿ ನೀಡುತ್ತಾ ಬಂದಿದೆ. ಪೆಟ್ರೋಲ್​ ಮತ್ತು ಡಿಸೇಲ್ ಎರಡು ಆಯ್ಕೆಯಲ್ಲೂ ಕಾರುಗಳನ್ನು ಸಿದ್ಧಪಡಿಸುತ್ತಿದೆ.
  Published by:Harshith AS
  First published: