ಅತೀ ಕಡಿಮೆ ಬೆಲೆಗೆ ಬರಲಿದೆ ಮಾರುತಿ ಸುಜುಕಿ ಕಂಪೆನಿಯ ನೂತನ ಎಸ್​-ಪ್ರೆಸ್ಸೊ ಕಾರು..!

Maruti Suzuki S-Presso: ಸುಜುಕಿಯ ಫ್ಯೂಚರ್ ಕಾರು ಕಾನ್ಸೆಪ್ಟ್​ ಸಣ್ಣ ಎಸ್‌ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯ ಹೊಂದರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

zahir | news18-kannada
Updated:August 7, 2019, 4:56 PM IST
ಅತೀ ಕಡಿಮೆ ಬೆಲೆಗೆ ಬರಲಿದೆ ಮಾರುತಿ ಸುಜುಕಿ ಕಂಪೆನಿಯ ನೂತನ ಎಸ್​-ಪ್ರೆಸ್ಸೊ ಕಾರು..!
S-Presso
  • Share this:
ದೇಶಿ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎನ್ನಲಾಗಿರುವ ಮಾರುತಿ ಸುಜುಕಿ ಕಂಪೆನಿಯ ಎಸ್​-ಪ್ರೆಸ್ಸೊ ಕಾರು ಬಿಡುಗಡೆಗೆ ತಯಾರಾಗಿದೆ. ಸಣ್ಣ ಕಾರಿನ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಲು ಯೋಜನೆ ಹಾಕಿಕೊಂಡಿರುವ ಸುಜುಕಿ, ಕೆಲ ದಿನಗಳ ಹಿಂದೆಯಷ್ಟೇ ತನ್ನ ನೂತನ ಎಸ್​-ಪ್ರೆಸ್ಸೊ ಎಸ್​ಯುವಿ ಕಾರಿನ ಟೆಸ್ಟ್​ ಡ್ರೈವ್ ನಡೆಸಿದೆ. ಈ ಡ್ರೈವ್​ನ ಫೋಟೋಗಳು ಇದೀಗ ಭಾರೀ ವೈರಲ್​ ಆಗಿದ್ದು, ಬಿಡುಗಡೆಗೆ ಮುನ್ನವೇ ಕಾರು ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಟೆಸ್ಟ್​ ಡ್ರೈವ್​ನಲ್ಲಿ ಕಾಣಿಸಿದ ಎಸ್​-ಪ್ರೆಸ್ಸೊ


ಕಳೆದ ವರ್ಷ ದೆಹಲಿಯಲ್ಲಿ ನಡೆದ ಆಟೋ ಎಕ್ಸ್​ಪೋ-2018 ನಲ್ಲಿ ಮಾರುತಿ ಸುಜುಕಿ ತನ್ನ ಫ್ಯೂಚರ್ ಕಾರನ್ನು ಅನಾವರಣಗೊಳಿಸಿತ್ತು. ಸ್ವಿಫ್ಟ್ ಮಾದರಿಯಲ್ಲಿ ಅತ್ಯಂತ ಆಕರ್ಷಕವಾಗಿದ್ದ ಈ ಕಾರಿಗೆ ಇದೀಗ ಎಸ್-ಪ್ರೆಸ್ಸೊ ಎಂದು ನಾಮಕರಣ ಮಾಡಲಾಗಿದೆ. ಸದ್ಯ ಕಾರು ಮಾರುಕಟ್ಟೆಯಲ್ಲಿ ಸಣ್ಣ ವಾಹನಗಳ ಬೇಡಿಕೆ ಹೆಚ್ಚಿದ್ದು, ಈಗಾಗಲೇ ರೆನಾಲ್ಟ್ ಕ್ವಿಡ್, ಟಾಟಾ ಟಿಯಾಗೊ ಮತ್ತು ಮಹೀಂದ್ರಾ ಕೆಯುವಿ100 ಕಾರುಗಳಿಗೆ ಭಾರೀ ಬೇಡಿಕೆ ಇದೆ. ಇದೀಗ ಅತ್ಯಾಕರ್ಷಕ ಸ್ಟೈಲ್​ನೊಂದಿಗೆ ಬಿಡುಗಡೆಗೆ ರೆಡಿಯಾಗುತ್ತಿರುವ ಎಸ್​-ಪ್ರೆಸ್ಸೊ ಎಸ್​ಯುವಿ ಮುಂಬರುವ ದಿನಗಳಲ್ಲಿ ಭಾರೀ ಪೈಪೋಟಿ ನೀಡಲಿದೆ.ಸುಜುಕಿ ವಿಟಾರಾ ಬ್ರೆಝಾ ಕಾರುಗಳಂತೆ ಈ ಸಣ್ಣ ಕಾರಿಗೂ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸುಜುಕಿಯ ಫ್ಯೂಚರ್ ಕಾರು ಕಾನ್ಸೆಪ್ಟ್​ ಸಣ್ಣ ಎಸ್‌ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯ ಹೊಂದರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಪೋರ್ಟ್ಸ್​ ಲುಕ್​:
ಎಸ್​-ಪ್ರೆಸ್ಸೊ ಮೊದಲ ಅಡಿಷನ್​ ಸ್ಪೋಟ್ಸ್ ಕಾರು ಲುಕ್​ನಲ್ಲಿ ಹೊರ ಬರಲಿದೆ ಎನ್ನಲಾಗಿದೆ. ಈಗಾಗಲೇ ಕಾರಿನ ಫೋಟೋಗಳು ವೈರಲ್​ ಆಗಿದ್ದು, ಕಾರಿನ ಲುಕ್ ಹಾಗೂ ಅಲಾಯ್​ ವೀಲ್, ಹೈ ಮೌಟೆಂಟ್​ ಲೈಟ್ಸ್​ಗಳಿಗೆ ಕಾರು ಪ್ರಿಯರು ಮಾರು ಹೋಗಿದ್ದಾರೆ.

ಎಂಜಿನ್ ವೈಶಿಷ್ಟ್ಯತೆ :
ಸುಜುಕಿಯ ನೂತನ ಕಾರು ಎಸ್-ಪ್ರೆಸ್ಸೊದಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಬಳಸಲಾಗಿದೆ. ಇದು 90Nm ಟಾರ್ಕ್ ಮತ್ತು 68PS ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಎಂಜಿನ್ ಹಳೆಯ ಮಾದರಿಯ ಇಂಜಿನ್​ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಆದರೂ ಇದು ಬಿಎಸ್-VI ಕಂಪ್ಲೈಂಟ್ ಹೊಂದಿರುತ್ತದೆ. ಹಾಗೆಯೇ ಕಾರಿನ ಬೇಡಿಕೆಯ ಆಧಾರ ಮೇಲೆ ಎಲೆಕ್ಟ್ರಿಕ್ ವರ್ಷನ್‌ಗಳು ಕೂಡಾ ಖರೀದಿಗೆ ಲಭ್ಯವಾಗಲಿವೆ. ಇದಲ್ಲದೆ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಸಹ ಈ ಕಾರಿನಲ್ಲಿ ಕಾಣಬಹುದಾಗಿದೆ.ಕಾರಿನ ಬೆಲೆ:
ಎಸ್-ಪ್ರೆಸ್ಸೊ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 4.50 ಲಕ್ಷದಿಂದ ರೂ. 5 ಲಕ್ಷದ ತನಕ ಇರಲಿದೆ ಎನ್ನಲಾಗಿದೆ. ಇನ್ನು ಇತರೆಡೆ 5 ರಿಂದ 6 ಲಕ್ಷದೊಳಗೆ ಇರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಕೆ.ಜಿ.ಎಫ್​  ತಂಡದ ಹೊಸ ಚಿತ್ರಕ್ಕೆ ವಿನಯ್ ರಾಜ್​ಕುಮಾರ್ ನಾಯಕ

First published: August 7, 2019, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading