Maruti Suzuki: ಸೇಫ್ಟಿ ಕ್ರಾಶ್​ ಟೆಸ್ಟ್​ನಲ್ಲಿ ‘0‘ ಸ್ಟಾರ್​ ಪಡೆದ ಮಾರುತಿ ಸುಜುಕಿ ಎಸ್​-ಪ್ರೆಸ್ಸೊ!

Global NCAP Rating: ಮಾರುತಿ ಸುಜುಕಿ ಎಸ್​-ಪ್ರೆಸ್ಸೊ ಕಾರು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿತ್ತು. ಆದರೀಗ ಸುರಕ್ಷತಾ ಪರೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ.

ಮಾರುತಿ ಸುಜುಕಿ ಎಸ್​-ಪ್ರೆಸ್ಸೊ

ಮಾರುತಿ ಸುಜುಕಿ ಎಸ್​-ಪ್ರೆಸ್ಸೊ

  • Share this:
    ಮಾರುತಿ ಸುಜುಕಿ ಕಂಪನಿಯ ಎಸ್​-ಪ್ರೆಸ್ಸೊ ಕಾರು ಎನ್​ಸಿಎಪಿ(New Car Assessment Program) ಪರೀಕ್ಷೆ ಎದುರಿಸಿದ್ದು, ಅದರಲ್ಲಿ  ಝೀರೊ ಅಂಕಗಳನ್ನು ಪಡೆದಿದೆ. ಭಾರತದಲ್ಲಿ ಉತ್ಪಾದಿಸಲಾಗುವ ಕಾರುಗಳ ಮೇಲೆ ಈ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಹುಂಡೈ ಗ್ರಾಂಡ್​​ ಐ10 ಮತ್ತು ಕಿಯಾ ಸೆಲ್ಟೋಸ್​​ ಮೂರು ಸ್ಟಾರ್​ಗಳನ್ನು ಪಡೆದಿದೆ.

    ಮಾರುತಿ ಸುಜುಕಿ ಎಸ್​-ಪ್ರೆಸ್ಸೊ ಕಾರು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿತ್ತು. ಆದರೀಗ ಸುರಕ್ಷತಾ ಪರೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. ಇನ್ನು ಕಾರಿನಲ್ಲಿ ಚಾಲಕನ ಬದಿಯಲ್ಲಿ ಮಾತ್ರ ಏರ್​ಬ್ಯಾಗ್​ ನೀಡಿದ್ದು, ಇದರಿಂದಾಗಿ  ಕಾರು ಪ್ರಾಥಮಿಕ ಪರೀಕ್ಷೆಯಲ್ಲಿ ವಿಫಲವಾಗಿದೆ.

    ಡ್ರೈವರ್​ ಮತ್ತು ಪ್ರಯಾಣಿಕ ಕುಳಿತುಕೊಳ್ಳುವ ಭಾಗದಲ್ಲಿ ದುರ್ಬಲ ರಕ್ಷಣೆಯನ್ನು ನೀಡಲಾಗಿದೆ. ಇನ್ನು ಡ್ಯಾಶ್​ಬೋರ್ಡ್​ ಟ್ರಾನ್​ಫ್ಯಾಸಿಯಾ ಟ್ಯೂಬ್​ನಿಂದ ಬೆಂಬಲಿತವಾಗಿದ್ದು, ಚಾಲಕನ ಮೊಣಕಾಲಿನ ಮೇಲಿನ ಮೇಲೆ ಉತ್ತಮ ರಕ್ಷಣೆಯನ್ನು ಒದಗಿಸಲಿದೆ ಎಂದು ಪರೀಕ್ಷಾ ವರದಿ ತಿಳಿಸಿದೆ.

    ಇನ್ನು ಪರೀಕ್ಷೆಯ ವೇಳೆ ಕಾರಿನ ಫೂಟ್​ವೆಲ್​ ಭಾಗ ಮತ್ತು ಬಾಡಿ ಶೆಲ್​ ಸಂಪೂರ್ಣ ನಜ್ಜುಗುಜ್ಜಾಗಿದೆ. ಸೀಟ್​ಬೆಲ್ಟ್​ಗಳು ಯೋಗ್ಯವಾಗಿಲ್ಲ ಎಂಬುದನ್ನು ಗಮನಿಸಲಾಗಿದೆ. ಮಕ್ಕಳ ಸುರಕ್ಷತೆಗೂ ಯೋಗ್ಯವಾಗಿಲ್ಲ ಎಂದು ಕಾರಿನ ಸುರಕ್ಷಿತ ಪರೀಕ್ಷಾ ವರದಿ ತಿಳಿಸಿದೆ.
    First published: