Maruti Suzuki Offers: ಮಾರುತಿ ಸುಜುಕಿ ಕಂಪೆನಿ ನೀಡುತ್ತಿದೆ ‘ಮೊದಲು ಖರೀದಿಸಿ ನಂತರ ಹಣ ನೀಡಿ‘ ಆಫರ್​​!

Buy Now Pay Later offer: ಮಾರುತಿ ಸುಜುಕಿ ಕಂಪೆನಿ ಚೋಳಮಂಡಲಂ ಇನ್​ವೆಸ್ಟ್​ಮೆಂಟ್​​ ಮತ್ತು ಫೈನಾನ್ಸ್​​ ಕಂಪೆನಿ ಲಿಮಿಟೆಡ್​​ ಸಹಯೋಗದೊಂದಿಗೆ ಈ ಆಫರ್​ ಅನ್ನು ಹೊರಡಿಸಿದೆ. ಈ ಮೂಲಕ ಗ್ರಾಹರಿಗೆ ಫೈನಾನ್ಸ್​ ಆಯ್ಕೆಯನ್ನು ನೀಡುತ್ತಿದೆ.

news18-kannada
Updated:May 22, 2020, 4:48 PM IST
Maruti Suzuki Offers: ಮಾರುತಿ ಸುಜುಕಿ ಕಂಪೆನಿ ನೀಡುತ್ತಿದೆ ‘ಮೊದಲು ಖರೀದಿಸಿ ನಂತರ ಹಣ ನೀಡಿ‘ ಆಫರ್​​!
ಮಾರುತಿ ಸುಜುಕಿ
  • Share this:
ಭಾರತದ ಪ್ರತಿಷ್ಠಿತ ಕಾರು ಉತ್ಪಾದನ ಸಂಸ್ಥೆಯಾದ ಮಾರುತಿ ಸುಜುಕಿ ಕಂಪೆನಿ ಗ್ರಾಹಕರಿಗೆ ಭರ್ಜರಿ ಆಫರ್​ ಅನ್ನು ಹೊರಡಿಸಿದೆ. ಲಾಕ್​ಡೌನ್​ ಸಮಯದಲ್ಲಿ ಕಾರು ಖರೀದಿಸಬೇಕೆಂಬ ಹಂಬಲಿಗರಿಗೆ ಮಾರುತಿ ಸುಜುಕಿ ಕಂಪೆನಿ ‘ಮೊದಲು ಖರೀದಿಸಿ ನಂತರ ಹಣ ನೀಡಿ(Buy Now Pay Later offer)‘ ಎಂಬ ಆಫರ್​ ನೀಡಿದೆ.

ಮಾರುತಿ ಸುಜುಕಿ ಕಂಪೆನಿ ಚೋಳಮಂಡಲಂ ಇನ್​ವೆಸ್ಟ್​ಮೆಂಟ್​​ ಮತ್ತು ಫೈನಾನ್ಸ್​​ ಕಂಪೆನಿ ಲಿಮಿಟೆಡ್​​ ಸಹಯೋಗದೊಂದಿಗೆ ಈ ಆಫರ್​ ಅನ್ನು ಹೊರಡಿಸಿದೆ. ಈ ಮೂಲಕ ಗ್ರಾಹರಿಗೆ ಫೈನಾನ್ಸ್​ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಕೊರೋನಾ ಲಾಕ್​ಡೌನ್​ನಿಂದಾಗಿ ಇಎಮ್​ಐ ಆಯ್ಕೆ ಕೂಡ 60 ದಿನಗಳು ಮುಂದೂಡಿಕೆಯಾಗಿರುವುದು ಗ್ರಾಹಕರ ಸಹಾಯಕ್ಕೆ ಬರಲಿದೆ.

ಈ ಬಗ್ಗೆ ಮಾರುತಿ ಸುಜುಕಿ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್​​​​​​ ಶ್ರೀವಾಸ್ತವ ಮಾತನಾಡಿ ‘ ಮಾರುತಿ ಸುಜುಕಿ ಕಂಪೆನಿ ಚೋಳಮಂಡಲಂ ಇನ್​ವೆಸ್ಟ್​ಮೆಂಟ್​​ ಮತ್ತು ಫೈನಾನ್ಸ್​​​ ಕಂಪೆನಿ ಲಿಮಿಟೆಡ್​​ ಸಹಯೋಗದೊಂದಿಗೆ ಈ ಆಫರ್​ ನೀಡುತ್ತಿದೆ. ಜೊತೆಗೆ ಕಾರು ಖರೀದಿಸಲು ಆರ್ಥಿಕ ಸಮಸ್ಯೆಯಾದರೆ ಈ ಕಂಪೆನಿಗಳು ಸಹಾಯ ನೀಡುತ್ತಿದೆ ಎಂದರು.

ನಂತರ ಮಾತನಾಡಿದ ಅವರು  ‘ನನಗೆ ಖಾತ್ರಿಯಿದೆ ‘ಬೈ ನೌ ಪೇ ಲೇಟರ್​​​ ಆಫರ್​​‘ ಗ್ರಾಹಕರ ಪಾಕೆಟ್​ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರದಂತೆ ಕಾರು ಖರೀದಿಸಲು ಪ್ರೋತ್ಸಾಹಿಸುತ್ತದೆ‘ ಎಂದು ಹೇಳಿದರು.

ಇನ್ನು ಮಾರುತಿ ಸುಜುಕಿ ‘ಬೈ ನೌ ಪೇ ಲೇಟರ್​​​ ಆಫರ್‘ ಮೂಲಕ ಕಾರು ಖರೀದಿಸುವ ಗ್ರಾಹಕರಿಗೆ ಕೆಲವು ಷರತ್ತುಗಳನ್ನು ಹಾಕಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

  1. ‘ಬೈ ನೌ ಪೇ ಲೇಟರ್​​​ ಆಫರ್‘ ಭಾರತದ ಮಾರುತಿ ಸುಜುಕಿ ಕಾರುಗಳಿಗೆ ಮಾತ್ರ ಲಭ್ಯವಿದೆ. ಆದರೆ ಕೊಡುಗೆ ಯಾವ ಮಾದರಿಯಲ್ಲಿ ಲಭ್ಯವಿದೆ ಎಂಬುದನ್ನು ಕಂಪನಿಯು ಹಂಚಿಕೊಂಡಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮಾರುತಿ ಸುಜುಕಿ ಕಂಪೆನಿ ಭೇಟಿ ನೀಡಬೇಕಿದೆ.
  2. ಜೂನ್​​ 30, 2020ರವರೆಗೆ ವಿತರಿಸಿದ ಸಾಲಗಳಿಗೆ ಮಾತ್ರ ಅನ್ವಯಿಸುತ್ತದೆ.

  3. ‘ಬೈ ನೌ ಪೇ ಲೇಟರ್​​​‘ ಆಫರ್ ಮೂಲಕ ಕಾರು ಖರೀದಿಸಿದ ಗ್ರಾಹಕರು 60 ದಿನಗಳ ಬಳಿಕ ಇಎಮ್ಐ​​​​ ಮೂಲಕ ಹಣ ಪಾವತಿಸಲು ಪ್ರಾರಂಭಿಸಬೇಕು.


Roberrt: ರಂಜಾನ್​ ಹಬ್ಬಕ್ಕೆ ರಾಬರ್ಟ್​ನಿಂದ ಭರ್ಜರಿ ಉಡುಗೊರೆ; ಏನದು?

PUBG: ಟೀಂ ಇಂಡಿಯಾ ಸ್ಟಾರ್​​ ಆಟಗಾರರ ಜೊತೆ ಪಬ್​ಜಿ ಆಡುವ ಸುವರ್ಣವಕಾಶ; ಅತ್ಯುತ್ತಮ ಪ್ಲೇಯರ್​​ಗೆ ಒನ್ ಪ್ಲಸ್ ಮೊಬೈಲ್
First published: May 22, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading